/newsfirstlive-kannada/media/post_attachments/wp-content/uploads/2025/06/Exclusive.jpg)
ದಾವಣಗೆರೆ: ಸ್ವಂತ ಅಳಿಯನ ಜೊತೆ ಹುಡುಗಿ ತಾಯಿ ಎಸ್ಕೇಪ್ ಆಗಿರೋ ಘಟನೆ ಚನ್ನಗಿರಿ ತಾಲೂಕಿನ ಮುದ್ದೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮದುವೆಯಾದ ಹೆಂಡತಿಯನ್ನು ಬಸ್ ನಿಲ್ದಾಣದಲ್ಲೇ ಬಿಟ್ಟು ಅತ್ತೆ ಜೊತೆ ಗಂಡ ಪರಾರಿಯಾಗಿದ್ದಾನೆ.
ಇದನ್ನೂ ಓದಿ:ಪತಿ ಜತೆ ನಟಿ ವೈಷ್ಣವಿ ಗೌಡ ಫುಲ್ ಮಸ್ತಿ.. ಹೋಗಿದ್ದು ಎಲ್ಲಿಗೆ ಗೊತ್ತಾ..? PHOTOS
ಹೌದು, ನಾಗರಾಜ್ ಮೊದಲನೇ ಪತ್ನಿಯ ಮಗಳನ್ನು ಚನ್ನಗಿರಿ ತಾಲೂಕಿನ ಮರವಂಜಿ ಗ್ರಾಮದ ಗಣೇಶ್ ಎಂಬಾತನಿಗೆ ಕೊಟ್ಟು ಮಾಡಿಸಿದ್ದ. ಮದುವೆ ಮಾಡಿಕೊಟ್ಟ 15 ದಿನಕ್ಕೆ ಗಣೇಶ್ ಅತ್ತೆ ಜೊತೆ ಅಕ್ರಮ ಸಂಬಂಧ ಹೊಂದಿರೋದು ಬೆಳಕಿಗೆ ಬಂದಿದೆ. ಗಣೇಶ್ ಮೊಬೈಲ್ನಲ್ಲಿ ಅಶ್ಲೀಲ ಮೆಸೇಜ್ ನೋಡಿ ಮಗಳು ಅಪ್ಪನಿಗೆ ತಿಳಿಸಿದ್ದಾಳೆ.
ಇನ್ನೂ, ನಾಗರಾಜ್ ಮೊದಲ ಪತ್ನಿಗೆ ಡೈವೋರ್ಸ್ ನೀಡಿ ಶಾಂತಮ್ಮಳನ್ನು ಮದುವೆಯಾಗಿದ್ದನಂತೆ. ಈ ಕುರಿತು ಮಾತನಾಡಿರುವ ನಾಗರಾಜ್, ಹದಿಮೂರು ವರ್ಷಗಳ ಹಿಂದೆ ಶಾಂತಮ್ಮಳ ಮದುವೆ ಆಗಿದ್ದೆ. ಮನೆ ಅಳಿಯ ಆಗಿ ಆಸರೆಯಾಗಿ ಇರ್ತಾನೆ ಅಂತಾ ನಂಬಿಸಿ ಮಗಳ ಜೊತೆ ಶಾಂತಮ್ಮ ವಿವಾಹ ಮಾಡಿಸಿದ್ಳು. ನನ್ನ ಮಗಳು ನನಗೆ ಸ್ಕ್ರೀನ್ ರೆಕಾರ್ಡ್ ಹಾಗೂ ವಾಟ್ಸಪ್ ಚ್ಯಾಟ್‌ಗಳನ್ನು ಕಳಿಸಿದಾಗ ಅದನ್ನ ನೋಡಿ ಎರಡು ಏಟು ಹೊಡೆದು ಪ್ರಶ್ನಿಸಿದ್ದೆ. ನನ್ನ ಮಗಳನ್ನು ಚನ್ನಗಿರಿ ಬಸ್ ನಿಲ್ದಾಣದಲ್ಲಿ ಬಿಟ್ಟು ಗಣೇಶ ಪರಾರಿಯಾದ ದಿನವೇ ನನ್ನ ಪತ್ನಿ ಶಾಂತಮ್ಮ ಸಹ ಚಿನ್ನಾಭರಣ ಹಣದ ಜೊತೆ ಎಸ್ಕೇಪ್ ಆಗಿದ್ದಾಳೆ. ಬಳಿಕ ಅವಳ ಪೂರ್ವಾಪರ ವಿಚಾರಿಸಿದಾಗ ಈ ಹಿಂದೆಯೂ ಎರಡು ಮದುವೆಯಾಗಿದ್ದ ವಿಚಾರ ಗೊತ್ತಾಯ್ತು. ಅಷ್ಟೇ ಅಲ್ಲದೇ ಮೊದಲ ಪತಿಗೂ ಲಕ್ಷಾಂತರ ರೂ. ಹಣ ಮೋಸ ಮಾಡಿದ್ದಾಳೆ ಅಂತಾ ಆರೋಪಿಸಿದ್ದಾರೆ.
ಇತ್ತ, ಶಾಂತಮ್ಮ ಮುದ್ದೇನಹಳ್ಳಿ ಗ್ರಾಮದ ಹಲವರ ಬಳಿ ಹಣ ಪಡೆದಿದ್ದಾಳಂತೆ. ಈ ಹಣ ವಾಪಸ್ ನೀಡದಿದ್ದಕ್ಕೆ ಹಣ ಕೊಟ್ಟವರು ನನ್ನ ಬಳಿ ಬಂದು ಕೇಳುತ್ತಿದ್ದಾರೆ. ವಾಸವಿದ್ದ ಮನೆಯಿಂದ ಹೊರಹಾಕಿ ಮನೆಗೆ ಬೀಗ ಹಾಕಿದ್ದಾರೆ ಅಂತಾ ನಾಗರಾಜ್ ಆರೋಪಿಸಿದ್ದಾರೆ.
ಇದನ್ನೂ ಓದಿ: ಹಲ್ಲುಗಳು ಫಳಫಳ ಹೊಳಿಬೇಕಂತ ಅಪ್ಪಿತಪ್ಪಿಯೂ ಈ ತಪ್ಪು ಮಾಡ್ಬೇಡಿ.. ಈ ಟಿಪ್ಸ್ ಪಾಲಿಸಿ..!
ಇನ್ನು, ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ನಾಪತ್ತೆ ಪ್ರಕರಣಗಳು ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಸುಂದರವಾದ ಬದುಕಿನ ಕನಸು ಕಟ್ಟಿಕೊಂಡಿದ್ದ 20 ವರ್ಷದ ಯುವತಿ ನ್ಯಾಯಕ್ಕಾಗಿ ಆಗ್ರಹಿಸಿ ಕಣ್ಣೀರಿಡುತ್ತಿದ್ದಾಳೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ