/newsfirstlive-kannada/media/post_attachments/wp-content/uploads/2025/07/HBL_3_BIRTH.jpg)
ಬೆಳಗಾವಿ: ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ತಾಯಿ ಒಬ್ಬರು ಮೂವರು ಮಕ್ಕಳಿಗೆ ಜನ್ಮ ಕೊಟ್ಟಿದ್ದು ಅವರ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.
ಸವದತ್ತಿ ತಾಲೂಕಿನ ಮುನವಳ್ಳಿ ಪಟ್ಟಣದ ನಿವಾಸಿ ವರ್ಷಿಣಿ ಎನ್ನುವರು ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ. ಈ ಮೊದಲೇ 6 ವರ್ಷದ ಒಂದು ಹೆಣ್ಣು ಮಗಳನ್ನು ಹೊಂದಿರುವ ಪಂಚಾಕ್ಷರಿ ಹಾಗೂ ವರ್ಷಿಣಿ ದಂಪತಿ, ಈಗ ಮೂರು ಮಕ್ಕಳನ್ನು ಪಡೆದುಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ಮೂರು ಮಕ್ಕಳು ಹಾಗೂ ತಾಯಿ ಆರೋಗ್ಯವಾಗಿ ಇದ್ದಾರೆ.
ಇದನ್ನೂ ಓದಿ: ಅಂಗನವಾಡಿಗೆ ಹೋಗಿದ್ದ ಅಣ್ಣನ ಮಗನ ಜೀವ ತೆಗೆದ ತಮ್ಮ.. 3 ವರ್ಷದ ಕಂದನ ಮುಗಿಸಿದ ಚಿಕ್ಕಪ್ಪ
ವರ್ಷಿಣಿ ಅವರು ಜನ್ಮ ನೀಡಿದ ಮೂರು ಮಕ್ಕಳಲ್ಲಿ 2 ಹೆಣ್ಣು ಹಾಗೂ ಒಂದು ಗಂಡು ಮಗುವಿದೆ. ವರ್ಷಿಣಿ ಅವರಿಗೆ ಹೆರಿಗೆಯ ನೋವು ಕಾಣಿಸಿಕೊಂಡಿದ್ದರಿಂದ ಅವರನ್ನು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಸ್ಪತ್ರೆಯಲ್ಲಿ ವರ್ಷಿಣಿ ಅವರಿಗೆ ವೈದ್ಯರಾದ ಡಾ.ಸುಧಾ ಹಳೆಮಣಿ ಹಾಗೂ ತಂಡ ಹೆರಿಗೆಯನ್ನು ಯಶಸ್ವಿಯಾಗಿ ಮಾಡಿತ್ತು. ಸದ್ಯ ಮೂರು ಮಕ್ಕಳು, ಬಾಣಂತಿ ಆರೋಗ್ಯವಾಗಿದ್ದು ಕುಟುಂಬಸ್ಥರಲ್ಲಿ ಸಂತಸ ಮನೆ ಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ