/newsfirstlive-kannada/media/post_attachments/wp-content/uploads/2025/05/Mother.jpg)
ಇದೇ ಭಾನುವಾರ ಬೆಳಿಗ್ಗೆ, ಹೈದರಾಬಾದ್‌ನ ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್‌ನಲ್ಲಿ ನಡೆದ ಅಗ್ನಿ ಅವಘಡದಲ್ಲಿ ಮಕ್ಕಳು ಸೇರಿದಂತೆ 17 ಜನರು ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ ಇಡೀ ಮನುಕುಲವನ್ನೇ, ಎದೆ ಕಿವುಚುವಂತೆ ಮಾಡುವ ದೃಶ್ಯವೊಂದು ಕಂಡು ಬಂದಿದೆ.
ಶಾರ್ಟ್ ಸರ್ಕ್ಯೂಟ್‌ನಿಂದ ನಡೆದಿದೆ ಎನ್ನಲಾದ ಈ ಅವಘಡ.. ಇಡೀ ಕಟ್ಟಡಕ್ಕೆ ಬೆಂಕಿ ಹೊತ್ತಿಸಿ ರೌದ್ರಾವತಾರ ತಾಳಿದೆ. ಈ ಸಮಯದಲ್ಲಿ ಸ್ಥಳೀಯರಾಗಲೀ, ಅಗ್ನಿಶಾಮಕ ದಳದವರಾಗಲೀ,ರಕ್ಷಣೆಗೆ ನಿಲ್ಲಲು ಕಷ್ಟವಾಗಿತ್ತು. ಸ್ವಲ್ಪ ಸಮಯದ ಬಳಿಗೆ ಒಳ ಹೋಗಿ ನೋಡಿದಾಗ 17 ಜನ ಹೃದಯವಿದ್ರಾವಕ ಸ್ಥಿತಿಯಲ್ಲಿ ಸಾವಿಗೀಡಾಗಿದ್ದರು.
ಇದೇ ಸಮಯದಲ್ಲಿ ಮತ್ತೊಂದು ಕಟ್ಟಡದ ಒಳಗೆ ಪ್ರವೇಶಿಸಿದ ಸ್ಥಳೀಯರಿಗೆ, ಎದೆ ಕಿವುಚುವಂಥ ದೃಶ್ಯ ಕಂಡು ಬಂದಿತ್ತು. ಒಬ್ಬ ಮಹಿಳೆ ತನ್ನ ಮಕ್ಕಳನ್ನ ಎರಡೂ ಕೈನಲ್ಲಿ ತಬ್ಬಿಕೊಂಡು, ಅದೇ ಸ್ಥಿತಿಯಲ್ಲೇ ಸಾವನ್ನೂ ಅಪ್ಪಿಬಿಟ್ಟಿದ್ದಳು. ಮಕ್ಕಳನ್ನ ಬೆಂಕಿಯಿಂದ ರಕ್ಷಿಸಲು ಹೋರಾಡಿ, ಕೊನೆಗೆ ಹತಾಶಳಾಗಿ, ಕೂತಂತೆ ಜೀವಬಿಟ್ಟಿದ್ದಳು. ಈ ಹೃದಯವಿದ್ರಾವಕ ದೃಶ್ಯವನ್ನು ಕಂಡು ಸ್ಥಳೀಯರು ಕಣ್ಣೀರಾಗಿದ್ದಾರೆ.
ಇದನ್ನೂ ಓದಿ: Cannes Film Festival: ರೆಡ್ ಕಾರ್ಪೆಟ್ ಮೇಲೆ ಮಿಂಚಿದ ಕನ್ನಡತಿ.. ದಿಶಾ ಮದನ್ ಫೋಟೋಸ್ ಇಲ್ಲಿವೆ!
ಭಾನುವಾರ ಆದ ಕಾರಣ ಎಲ್ಲಾ ಶಾಪ್ಗಳೂ ತೆರೆದಿರಲಿಲ್ಲ.. ಬಹುಶಃ ವಾರಂತ್ಯ ಅಲ್ಲದೇ ಇದ್ದರೇ ಇಷ್ಟೊಂದು ಭೀಕರ ಘಟನೆಯಲ್ಲಿ, ಇಷ್ಟು ಮಂದಿಯ ಸಾವು ಆಗುತ್ತಿರಲಿಲ್ಲವೇನೋ. ಗುಲ್ಜಾರ್ ಹೌಸ್ ಇಕ್ಕಟ್ಟಿನಲ್ಲಿದ್ದ ಕಾರಣ ಫೈರ್ ಇಂಜಿನ ಕೂಡ ಬೇಗ ಹೋಗಲು ಆಗಿಲ್ಲ.. ಸ್ಥಳೀಯರೇ ರಕ್ಷಣೆಗಿಳಿದಿದ್ದರು,ಆದರೇ ಅವರು ಒಂದೊಂದು ದೃಶ್ಯಕ್ಕೂ ದುಃಖದ ಕಡಲಲ್ಲಿ ತೇಲಿದ್ದಾರೆ.
ಇದನ್ನೂ ಓದಿ: ಬೆಂಗಳೂರು ದಾಳಿಯ ಮಾಸ್ಟರ್ ಮೈಂಡ್ ಉಗ್ರ ಫಿನಿಶ್.. ದೇಶದ 3 ಕಡೆ ದಾಳಿ ಮಾಡಿಸಿದ್ದ ಈತ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ