/newsfirstlive-kannada/media/post_attachments/wp-content/uploads/2025/07/new-born-baby.jpg)
ಸಾಮಾನ್ಯವಾಗಿ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಗರ್ಭಿಣಿಯರು ಆತಂಕದಲ್ಲಿ ಇರುತ್ತಾರೆ. ಎಲ್ಲಿ ನಮ್ಮ ಮಗುವಿಗೆ ಏನಾದ್ರೂ ಆಗುತ್ತಾ, ಇಂತಹ ಸಮಯದಲ್ಲಿ ಯಾವೆಲ್ಲಾ ಆಹಾರ ಸೇವಿಸಬೇಕು? ಯಾವುದನ್ನು ಸೇವಿಸಬಾರದು ಎಂಬುದರ ಬಗ್ಗೆ ಗೊಂದಲದಲ್ಲಿ ಇರುತ್ತಾರೆ. ಮನೆಯಲ್ಲಿ ಹಿರಿಯರು ಇದ್ದರೆ ಅವರೇ ಈ ಎಲ್ಲಾ ವಿಚಾರವನ್ನು ಗರ್ಭಾವಸ್ಥೆಯಲ್ಲಿರು ಮಹಿಳೆಗೆ ಹೇಳುತ್ತಾರೆ.
ಇದನ್ನೂ ಓದಿ: ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಪ್ರತ್ಯೇಕ ದೆಹಲಿಯಾತ್ರೆ.. ಮತ್ತೆ ಕಾಂಗ್ರೆಸ್ನಲ್ಲಿ ಬಿಸಿಬಿಸಿ ಟಾಕ್..!
ಹೀಗೆ ಗರ್ಭಾವಸ್ಥೆಯಲ್ಲಿ ಮಹಿಳೆಯರು ತಮ್ಮ ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಎಷ್ಟು ಮುಖ್ಯವೋ, ಅದೇ ರೀತಿಯ ಬಾಣಂತಿ ಸಮಯದಲ್ಲಿ ಮಗುವನ್ನು ಹೇಗೆ ಆರೈಕೆ ಮಾಡಬೇಕು ಅನ್ನೋದು ಅಷ್ಟೇ ಮುಖ್ಯವಾಗಿರುತ್ತದೆ. ಮಗು ಹುಟ್ಟಿನಿಂದ ಆರು ತಿಂಗಳವರೆಗೆ ಪೋಷಕರು ತುಂಬಾ ಎಚ್ಚರದಿಂದ ಇರಲೇಬೇಕು. ಪೋಷಕರು ಈ ಕೆಳಗೆ ನೀಡಲಾದ ಸಲಹೆಗಳನ್ನು ಫಾಲೋ ಮಾಡಿ ಸಾಕು.
- ಮಗುವಿಗೆ ಎದೆಹಾಲು ಅಥವಾ ಕಬ್ಬಿಣದ ಅಂಶವಿರುವ ಶಿಶು ಸೂತ್ರವನ್ನು ಮಾತ್ರ (ಎದೆ ಹಾಲು) ನೀಡಬೇಕು. ಈ ಅವಧಿಯಲ್ಲಿ, ಮಗುವಿನ ಪೋಷಣೆಗೆ ಎದೆಹಾಲು ಅಥವಾ ಶಿಶು ಸೂತ್ರವು ಸಾಕಾಗುತ್ತದೆ. ಘನ ಆಹಾರವನ್ನು 6 ತಿಂಗಳ ನಂತರ ಪ್ರಾರಂಭಿಸಬೇಕು.
- ಮಗು ಹುಟ್ಟಿದ 2-3 ತಿಂಗಳಿನ ವಯಸ್ಸಿನಲ್ಲಿ ಕುಳಿತುಕೊಂಡು ಎರಡು ಕಾಲುಗಳನ್ನು ಜೋಡಿಸಿ, ಶಿಶುವನ್ನು ಅಂಗಾತ ಮಲಗಿಸಿ, ಎರಡು ಕೈ ಹಾಗೂ ಕಾಲುಗಳನ್ನು ಕೈಯಿಂದ ಮೃದುವಾಗಿ ಸವರಿ.
- ಶಿಶುವನ್ನು ಮಾತೃಭಾಷೆಯಲ್ಲಿ ಮಾತನಾಡಿಸುವುದು. ಶಿಶುವಿನ ಪ್ರತಿಕ್ರಿಯೆಗೆ ಅನುಗುಣವಾಗಿ ಆಟದ ಮುಖಾಂತರ ಶಿಶುವನ್ನು ಸಂತೋಷದಿಂದಿರುವುದು.
- ಶಿಶುವಿನ ಗಮನಹರಿಸಲು ಬಣ್ಣ - ಬಣ್ಣದ ಚಲಿಸುವ ಗೊಂಬೆಗಳನ್ನು ಮಗುವಿನಿಂದ 30 ಸೆಂ. ಮೀಟರ್ (1 ಅಡಿ) ದೂರದಲ್ಲಿ ನೋಡಲು ಹಾಕುವುದು. (ಶಿಶುಗಳ ಗಮನವನ್ನು ಕೇಂದ್ರೀಕರಿಸಲು ಫೋನ್ ಬಳಕೆಯನ್ನು ಮಾಡಬಾರದು.
- ಶಿಶುವಿಗೆ ಆಸಕ್ತಿದಾಯಕ ವಸ್ತುಗಳನ್ನು ಇಡಿ, ಯಾವುದೇ ಕಾರಣಕ್ಕೂ ಅಪಾಯಕಾರಿ ವಸ್ತುಗಳನ್ನು ಇಡಬೇಡಿ.
- ಶಿಶುವು ನೀವು ಮಾಡಿದಂತೆ ಅನುಕರಣೆ ಮಾಡಿದರೆ, ಶಬ್ದ ಮಾಡಿದರೆ, ಪ್ರಶಂಶಿಸಿ
ಯಾವ ಮಕ್ಕಳು ಸಮಾಧಾನಕ್ಕೆ ಬೆರಳು ಚೀಪುತ್ತವೆ ಇದನ್ನು ಗಂಭೀರವಾಗಿ ಪರಿಗಣಿಸಬಾರದು ಹಾಗೂ ಅದನ್ನು ಈ ವಯಸ್ಸಿಗೆ ತಡೆಯಲು ಪ್ರಯತ್ನಿಸಬಾರದು. - ಆದಷ್ಟು ಮಕ್ಕಳನ್ನು ಮನೆಯಿಂದ ಹೊರಗೆ ಕರೆದುಕೊಂಡು ಹೊರ ಜಗತ್ತಿನ ಪರಿಚಯ ಮಾಡಿಕೊಡಿ.
- ಪದೇ ಪದೇ ವಸ್ತುಗಳನ್ನು ಎಸೆಯುವುದು, ಬೀಳುಸುವುದು ಮಕ್ಕಳಿಗೆ ಸಹಜ. ಮಕ್ಕಳು ಮಾಡುವ ಗದ್ದಲಕ್ಕೆ ತಾಳ್ಮೆಯಿಂದ ಮೃದುವಾಗಿ ಸ್ಪಂದಿಸುವುದು.
- ಮಗು ಇರುವ ಮನೆಯ ಒಳಗೆ ಸ್ವಚ್ಛವಾದ ಹಾಗೂ ಸುರಕ್ಷಿತವಾದ ಪಾತ್ರೆಗಳನು ಆಡಲು ಕೊಡಿ, ಮತ್ತು ಅನ್ವೇಷಿಸಲು ಕೊಡಿ.
- ಮಗುವಿನ ಜೊತೆ ಕಣ್ಣಾಮುಚ್ಚಾಲೆ ಆಟವಾಡಿ ಬಟ್ಟೆ ಅಥವಾ ಬುಟ್ಟಿಯಲ್ಲಿ ಆಟಿಕೆಗಳನ್ನು ಮರೆಮಾಡಿ ಶಿಶುವು ಕಂಡುಕೊಳ್ಳಬಹುದೇ ಎಂದು ನೋಡಿ.
ಈ ಮೇಲಿನ 10 ಸಲಹೆಗನ್ನು ಫಾಲೋ ಮಾಡಿ, ನಿಮ್ಮ ಮಗುವಿನ ಜೊತೆಗೆ ಸಂತೋಷವಾಗಿರಿ. ಆರೋಗ್ಯ ಮತ್ತು ಕುಟುಂಬ ಇಲಾಖೆ ಯೋಜನೆ ಅಡಿಯಲ್ಲಿ ನವಜಾತ ಶಿಶುವಿನ ಆರೈಕೆ ಹೇಗೆ ಮಾಡಬೇಕು ಅಂತ ತಾಯಿ ಕಾರ್ಡ್ನಲ್ಲಿ ಈ ಎಲ್ಲಾ ಅಂಶಗಳನ್ನು ಉಲ್ಲೇಖ ಮಾಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ