Advertisment

ಗೃಹಲಕ್ಷ್ಮಿ ಹಣದಲ್ಲಿ ಬೋರ್‌ವೆಲ್ ಕೊರೆಸಿದ ಅತ್ತೆ-ಸೊಸೆ.. ಸಿಎಂ ಸಿದ್ದರಾಮಯ್ಯ ಫುಲ್ ಖುಷ್‌; ಹೇಳಿದ್ದೇನು?

author-image
Gopal Kulkarni
Updated On
ಗೃಹಲಕ್ಷ್ಮಿ ಹಣದಲ್ಲಿ ಬೋರ್‌ವೆಲ್ ಕೊರೆಸಿದ ಅತ್ತೆ-ಸೊಸೆ.. ಸಿಎಂ ಸಿದ್ದರಾಮಯ್ಯ ಫುಲ್ ಖುಷ್‌; ಹೇಳಿದ್ದೇನು?
Advertisment
  • ಗೃಹಲಕ್ಷ್ಮೀ ಹಣ ಕೂಡಿಟ್ಟು ಕೊಳವೆ ಬಾವಿ ಕೊರೆಸಿದ ಅತ್ತೆ- ಸೊಸೆ
  • ಒಟ್ಟು 44 ಸಾವಿರ ರೂಪಾಯಿ ಗೃಹಲಕ್ಷ್ಮೀ ಹಣದಿಂದ ಬೋರ್​ವೆಲ್​
  • ವಿಡಿಯೋ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ ಸಿಎಂ ಸಿದ್ದರಾಮಯ್ಯ

ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮೀ ಯೋಜನೆ ಒಂದಲ್ಲ ಒಂದು ರೀತಿಯಲ್ಲಿ ಆಗಾಗ ಸುದ್ದಿಯಾಗುತ್ತಿದೆ. ಸಿದ್ದರಾಮಯ್ಯನವರ ಪಂಚ ಗ್ಯಾರಂಟಿಗಳಲ್ಲಿ ಅತಿಹೆಚ್ಚು ಸುದ್ದಿ ಮಾಡಿದ್ದೇ ಗೃಹಲಕ್ಷ್ಮೀ ಯೋಜನೆ. ಈ ಹಿಂದೆ ಗೃಹಲಕ್ಷ್ಮೀ ಹಣ ಕೂಡಿಟ್ಟು ಟಿವಿ, ವಾಷಿಂಗ್ ಮಷಿನ್, ಬೈಕ್​ ತೆಗೆದುಕೊಂಡಿದ್ದು, ಊರಿಗೆ ಹೋಳಿಗೆ ಊಟ ಹಾಕಿಸಿದ್ದು ಹೀಗೆ ಅನೇಕ ರೀತಿ ಬಡವರಿಗೆ ಸಹಾಯವಾದ ಬಗ್ಗೆ ಸುದ್ದಿಯಾಗುತ್ತಲೇ ಇವೆ.

Advertisment

ಆದ್ರೆ ಈಗ ಅತ್ತೆ -ಸೊಸೆ ಸೇರಿಕೊಂಡು ಗೃಹಲಕ್ಷ್ಮೀ ದುಡ್ಡಿನ್ನು ಕೂಡಿಟ್ಟ ಹಣದಲ್ಲಿ ಕೃಷಿ ಭೂಮಿಗೆ ಬೋರ್​ವೆಲ್ ಕೊರೆಸಿ ಸಮೃದ್ಧಿಯಾಗಿ ನೀರು ಪಡೆದಿದ್ದಾರೆ. ಈ ಬಗ್ಗೆ ಖುದ್ದು ಅತ್ತೆ ಮಾಬುಬೀ ಮಾತನಾಡಿ ಪ್ರತಿ ತಿಂಗಳು ನಮಗೆ ಬರುತ್ತಿದ್ದ ಗೃಹಲಕ್ಷ್ಮೀ ದುಡ್ಡನ್ನು ಕೂಡಿಟ್ಟ ಒಟ್ಟು 44 ಸಾವಿರ ರೂಪಾಯಿ ಹಾಗೂ ಮಗ 10 ಸಾವಿರ ರೂಪಾಯಿ ಹಾಕಿ ಕೃಷಿ ಭೂಮಿಗೆ ಬೋರ್​ವೆಲ್​ ಕೊರೆಸಿದ್ದೇವೆ. ಇದೆಲ್ಲವೂ ಸಿದ್ದರಾಮಯ್ಯ ಅವರಿಂದಲೇ ಆಗಿದ್ದು ಎಂದಿದ್ದಾರೆ. ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಈ ಒಂದು ಸನ್ನಿವೇಶ ನಡೆದಿದೆ.

ಇದನ್ನೂ ಓದಿ:BBK11; ಮಂಜುನಾ ಟಾರ್ಗೆಟ್ ಮಾಡಿದ್ರಾ ಚೈತ್ರಾ, ಮೋಕ್ಷಿತಾ, ಶಿಶಿರ್.. ಕಿಚ್ಚನ ಮುಂದೆ​ ಸ್ಪರ್ಧಿಗಳು ಹೇಳಿದ್ದೇನು?

ಇನ್ನು ಮಾಬುಬೀ ಅವರು ಮಾತನಾಡಿದ ವಿಡಿಯೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಸಿಎಂ ,ನಮ್ಮ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಮೂಲಕ ಪಡೆದ ಹಣದಲ್ಲಿ ಬೋರ್‌ವೆಲ್ ಕೊರೆಸಿ ಬದುಕು ಕಟ್ಟಿಕೊಂಡ ಅತ್ತೆ - ಸೊಸೆಯ ಮಾತುಗಳು ಕೇಳಿ ಖುಷಿಯಾಯಿತು ಎಂದು ಹೇಳಿದ್ದಾರೆ.

Advertisment

ಇದನ್ನೂ ಓದಿ:BBK11; ಮನೆಯಲ್ಲಿ ದ್ವೇಷ ದ್ವೇಷ.. ಕಿಚ್ಚ ಸುದೀಪ್​ ಮುಂದೆಯೇ ಸ್ಪರ್ಧಿಗಳ ರೋಷ, ಆಕ್ರೋಶ ಹೇಗಿತ್ತು?

ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಮಾಲದಾರ ಓಣಿಯ ಅತ್ತೆ ಮಾಬುಬೀ ಹಾಗೂ ಸೊಸೆ ರೋಷನ್ ಬೇಗಂ ಪ್ರತಿ ತಿಂಗಳು ತಮಗೆ ಬಂದ ಗೃಹಲಕ್ಷ್ಮಿ ಹಣ ಕೂಡಿಟ್ಟು ಕೃಷಿ ಭೂಮಿಗೆ ಬೋರ್‌ವೆಲ್ ಕೊರೆಸಿ, ಸಮೃದ್ಧ ನೀರು ಪಡೆದಿದ್ದಾರೆ. ನಾಡಿನ ಬಡಕುಟುಂಬಗಳಿಗೆ ಆರ್ಥಿಕ ಶಕ್ತಿ ತುಂಬಿ, ಅವರನ್ನು ಸ್ವಾವಲಂಬಿಗಳನ್ನಾಗಿಸುವ ಈ ಯೋಜನೆಯ ಉದ್ದೇಶ ಯಶಸ್ವಿಯಾಗಿ ಈಡೇರುತ್ತಿರುವುದು ಯೋಜನೆಯನ್ನು ಜಾರಿಗೆ ಕೊಟ್ಟ ನನ್ನಲ್ಲಿ ಸಂತೃಪ್ತಭಾವ ಮೂಡಿಸಿದೆ.

Advertisment


">December 15, 2024


ಗೃಹಲಕ್ಷ್ಮಿ ಯೋಜನೆಯ ಹಣಕ್ಕಾಗಿ ಅತ್ತೆ - ಸೊಸೆಯ ನಡುವೆ ಜಗಳ ಆರಂಭವಾಗುತ್ತದೆ, ಸಂಸಾರಗಳು ಒಡೆಯುತ್ತವೆ ಎಂದು ಟೀಕಿಸಿದ ಜನರಿಗೆ ಬಾರಿಸಿದ ತಪರಾಕಿ ಇದು. ಬೆಳಕಿಗೆ ಬಾರದ ಇಂತಹ ಇನ್ನೂ ಸಾವಿರಾರು ಯಶೋಗಾಥೆಗಳಿವೆ, ಗೃಹಲಕ್ಷ್ಮಿ ನಾಡಿನ ತಾಯಂದಿರ ಬಾಳಿಗೆ ಅಕ್ಷರಶಃ ಭಾಗ್ಯಲಕ್ಷ್ಮಿಯಾಗಿದೆ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment