/newsfirstlive-kannada/media/post_attachments/wp-content/uploads/2024/05/UP-Baby-Died.jpg)
ತಂತ್ರ, ಮಂತ್ರವನ್ನ ನಂಬೋ ಜನರು ಈಗಲೂ ಇದ್ದಾರೆ. ಮಾಟ-ಮಂತ್ರಗಳು, ಬಲಿ ಕೊಡೋ ಮೂಢನಂಬಿಕೆ ಈಗಲೂ ಇದೆ. ಇದೇ ಹುಚ್ಚು ನಂಬಿಕೆ ಉತ್ತರ ಪ್ರದೇಶದಲ್ಲಿ ಜಗತ್ತನ್ನೇ ಅರಿಯದ 2 ಕಂದಮ್ಮಗಳನ್ನ ಬಲಿ ಪಡೆದಿದೆ.
ಬಾಹ್ಯಾಕಾಶಕ್ಕೆ ಟ್ರಿಪ್ ಮಾಡೋ ಕಾಲದಲ್ಲಿ ನಾವಿದ್ರೂ, ಹಲವೆಡೆ ಇನ್ನೂ ಮೂಢನಂಬಿಕೆ ಜೀವಂತವಾಗಿದೆ ಅದಕ್ಕೆ ಮತ್ತೊಂದು ಎಕ್ಸಾಂಪಲ್ ಉತ್ತರ ಪ್ರದೇಶದಲ್ಲಿ ಅರೆಸ್ಟ್ ಆಗಿರೋ ಈ ಇಬ್ಬರು ಲೇಡಿಗಳು. ಹೀಗೆ ಪೊಲೀಸ್​ ಜೊತೆ ನಿಂತಿರೋ ಇವ್ರಿಬ್ಬರು, ಪುಟ್ಟ ಕಂದಮ್ಮಗಳನ್ನ ಬಲಿ ಪಡೆದ ಪಾಪಿಗಳು.
/newsfirstlive-kannada/media/post_attachments/wp-content/uploads/2024/05/UP-2-300x169.jpg)
ಮಂತ್ರವಾದಿಯ ಮಾತು ಕೇಳಿದ್ದ ಸೋದರತ್ತೆ, ಇಬ್ಬರು ಪುಟ್ಟ ಕಂದಮ್ಮಗಳನ್ನ ಬಲಿ ಕೊಟ್ಟ ಘಟನೆ ಉತ್ತರ ಪ್ರದೇಶದ ಮುಜಾಫರ್​ ನಗರದಲ್ಲಿ ನಡೆದಿದೆ.
ಸೋದರಳಿಯರನ್ನೇ ಬಲಿಕೊಟ್ಟಿದ್ದ ಸೋದರತ್ತೆ ಅಂಕಿತಾ
ಮುಜಾಫರ್​ ನಗರದ ಕತೌಲಿ ಎಂಬ ನಗರದಲ್ಲಿ ಅಂಕಿತಾ ಎಂಬ ಮಹಿಳೆಗೆ ಆತ್ಮವೊಂದರ ಕಾಟ ಆಗ್ತಿತ್ತಂತೆ. ಆಗ ಈಕೆ ಭಗತ್ ರಾಮ್​ಗೋಪಾಲ್ ಚೌಧರಿ ಅನ್ನೋ ಮಂತ್ರವಾದಿಯೊಬ್ಬನನ್ನ ಸಂಪರ್ಕ ಮಾಡಿದ್ಲು. ಮಕ್ಕಳನ್ನ ಬಲಿ ಕೊಟ್ಟರೆ ಆತ್ಮದಿಂದ ಮುಕ್ತಿ ಹೊಂದಬಹುದು ಅಂತಾ ಆತ ಸಲಹೆ ಕೊಟ್ಟಿದ್ದ. ಮಂತ್ರವಾದಿಯ ಸಲಹೆಯಂತೆ ಒಂದು ತಿಂಗಳ ಅವಧಿಯಲ್ಲಿ ಎರಡು ಪುಟ್ಟ ಮಕ್ಕಳನ್ನ ಅಂಕಿತಾ ಬಲಿ ಕೊಟ್ಟಿದ್ದಾಳೆ. ತನ್ನ ಸೋದರಳಿಯರನ್ನೇ ಬಲಿಕೊಟ್ಟಿದ್ದಳು. ಇದಕ್ಕೆ ಅಂಕಿತಾ ತಾಯಿ ರೀನಾ ಸಪೋರ್ಟ್ ಕೂಡ ಇತ್ತಂತೆ. ಮೇ 17ರಂದು 7 ವರ್ಷದ ಮಗು ಕೇಶವ್ ಮೃತದೇಹ ಮನೆಯಲ್ಲಿ ಸಿಕ್ಕಿತ್ತು. ಈ ಬೆನ್ನಲ್ಲೇ ಕೇಶವ್ ತಾಯಿ ಸೀಮಾ ಪೊಲೀಸ್ ಕಂಪ್ಲೆಂಟ್ ನೀಡಿದ್ದರು. ಈ ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರು ಇದೀಗ ಸೋದರತ್ತೆ ಅಂಕಿತಾ ಹಾಗೂ, ತಾಯಿ ರೀನಾಳನ್ನ ಬಂಧಿಸಿದ್ದಾರೆ.
/newsfirstlive-kannada/media/post_attachments/wp-content/uploads/2024/05/UP-1.jpg)
ಇಬ್ಬರ ಬಂಧನವೇನೋ ಆಗಿದೆ. ಇನ್ನು, ಇವ್ರಿಬ್ಬರು ಸಿಕ್ಕಾಕ್ಕೊಂಡಿದ್ದು ಕೂಡ ಇಂಟ್ರೆಸ್ಟಿಂಗ್. ಕೇಶವ್ ಎಂಬ ಮಗುವನ್ನ ಉಸಿರುಗಟ್ಟಿಸಿ ಕೊಂದ ಬಳಿಕ, ರೆಡ್​ ಇಂಕ್​ನಲ್ಲಿ ಪತ್ರವೊಂದನ್ನ ಅಂಕಿತಾ ಬರೆದಿದ್ದಳು. ನನ್ನ ಆತ್ಮಕ್ಕೆ ಈಗ ಶಾಂತಿ ಸಿಕ್ಕಿದೆ ಅಂತಾ ಬರೆದು ದಿಕ್ಕು ತಪ್ಪಿಸಲು ಯತ್ನಿಸಿದ್ದಳು. ಪೊಲೀಸರಿಗೆ ಈ ಲೆಟರ್ ಸಿಕ್ಕಿದ್ದು, ಅಂಕಿತಾಳದ್ದೇ ಹ್ಯಾಂಡ್​ರೈಟಿಂಗ್ ಅನ್ನೋದು ತಿಳಿದು ಬಂದಿತ್ತು. ಅದರಂತೆ ಇಬ್ಬರನ್ನ ಪೊಲೀಸರು ಬಂಧಿಸಿದ್ದಾರೆ.
ವಿಚಾರಣೆ ವೇಳೆ ಮಕ್ಕಳನ್ನ ಸಾಯಿಸಿದ್ದು ನಾವೇ ಅಂತಾ ಈ ಮಹಿಳೆಯರು ಒಪ್ಕೊಂಡಿದ್ದು, ನಾಪತ್ತೆಯಾದ ಮಂತ್ರವಾದಿಗಾಗಿ ಹುಡುಕಾಟ ಶುರುವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us