/newsfirstlive-kannada/media/post_attachments/wp-content/uploads/2024/10/Adilabad-Kid-milk-cow-2.jpg)
ಆಗಷ್ಟೇ ಹುಟ್ಟಿದ ಕಂದಮ್ಮ ಹಾಲು ಸಿಗದೆ ಒಂದೇ ಸಮನೆ ಅಳುತ್ತಿತ್ತು. ಕಾರಣ ಈ ಕಂದಮ್ಮನಿಗೆ ಅಮ್ಮನೇ ಇಲ್ಲ. ಅಪೌಷ್ಠಿಕತೆಯ ಸಮಸ್ಯೆಯಿಂದಾಗಿ ಸರಿಯಾದ ಚಿಕಿತ್ಸೆ ಸಿಗದೆ ತಾಯಿ ಮಗುವಿಗೆ ಜನ್ಮ ನೀಡಿದ ಕೂಡಲೇ ಅಸುನೀಗಿದ್ದಳು.
ಆರೇಳು ದಿನದಿಂದ ಹಾಲಿಲ್ಲದೇ ಅಳುತ್ತಿತ್ತು ಮಗು!
ಆಂಧ್ರದ ಆದಿಲಾಬಾದ್ ಜಿಲ್ಲೆಯಲ್ಲಿ ಮನಮಿಡಿಯುವ ಘಟನೆಯೊಂದು ಬೆಳಕಿಗೆ ಬಂದಿದೆ. ಕುಗ್ರಾಮ ಟೆಮ್ರಿಗೂಡದ ಬುಡಕಟ್ಟು ಸಮುದಾಯದ ಲಸ್ಮಾ ಹಾಗೂ ಮಾರುಬಾಯಿ ದಂಪತಿಗೆ ಹೆಣ್ಣು ಮಗು ಜನಿಸಿತ್ತು. ಹುಟ್ಟಿದ ಕೂಡಲೇ ಸರಿಯಾದ ಚಿಕಿತ್ಸೆ ಸಿಗದೆ ಮಾರುಬಾಯಿ ಕಣ್ಮುಚ್ಚಿದ್ರು. ಬಡವ ಅಪ್ಪ ಲಸ್ಮಾಗೆ ಮಗಳಿಗೆ ಹಾಲು ಒದಗಿಸೋದು ಕಷ್ಟವಾಗಿತ್ತು. ದಿನವೂ ಅಮ್ಮನ ಹಾಲಿಗಾಗಿ ಅಳುತ್ತಿದ್ದ ಕಂದಮ್ಮನ ವಿಚಾರವನ್ನು ವಾರ್ತಾ ಪತ್ರಿಕೆಯಲ್ಲಿ ಓದಿ ಸ್ಥಳೀಯ ಸಿವಿಲ್ ಕೋರ್ಟ್ ಜಡ್ಜ್ ಬಿ. ಹುಸೇನ್ ಕಣ್ಣೀರು ಹಾಕಿದ್ರು.
ಇದನ್ನೂ ಓದಿ: ಘೋರ ದುರಂತ.. ಪತ್ನಿ, ಮಗನಿಂದಲೇ ಜೀವ ಕಳೆದುಕೊಂಡ ಅಪ್ಪ; ಅಸಲಿಗೆ ಆಗಿದ್ದೇನು?
ಆ ಕಂದಮ್ಮನಿಗಾಗಿ ಹಸುವನ್ನು ಕೊಡಿಸಿದ್ದಾರೆ ಜಡ್ಜ್!
ಆರೇಳು ದಿನಗಳಿಂದ ಸರಿಯಾದ ಹಾಲು ಸಿಗದೆ ಮಗು ಅಳುತ್ತಲೇ ಇದ್ದ ಸುದ್ದಿ ಸ್ಥಳೀಯ ಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು. ವರದಿ ಕಂಡು ಕಣ್ಣೀರಿಟ್ಟಿದ್ದ ಜಡ್ಜ್ ಖುದ್ದು ಮಗುವಿನ ಮನೆಗೆ ಬಂದಿದ್ರು. ಜೊತೆಯಲ್ಲೇ 50 ಸಾವಿರ ಮೌಲ್ಯದ ಹಸುವನ್ನು ಖರೀದಿಸಿ ತಂದು ಮಗುವಿನ ತಂದೆಗೆ ನೀಡಿದ್ದಾರೆ. ಲಸ್ಮಾ ಬಿಕ್ಕಳಿಸುತ್ತಲೇ ಮಗುವಿಗೆ ಸಹಾಯ ಮಾಡಿದ ಜಡ್ಜ್ ಹುಸೇನ್ರಿಗೆ ಧನ್ಯವಾದ ಸಮರ್ಪಿಸಿದ್ದಾರೆ. ಅಜ್ಜಿಯ ಸೀರೆ ಜೋಲಿಯಲ್ಲಿ ಹಾಲು ಕುಡಿಯುತ್ತಾ ನಗುತ್ತಿರುವ ಕಂದಮ್ಮನ ದೃಶ್ಯ ಕಂಡು ಜಡ್ಜ್ ಕೂಡ ಖುಷಿಯಾಗಿದ್ದಾರೆ.
ಸರಿಯಾದ ರಸ್ತೆ ಇಲ್ಲದ ಕಾರಣಕ್ಕೆ ಪತ್ನಿ ಸತ್ತಳು
ಲಸ್ಮಾ ತನ್ನ ಪತ್ನಿ ಸಾವಿಗೆ ಸರಿಯಾದ ರಸ್ತೆ ಇಲ್ಲದ್ದೂ ಒಂದು ಕಾರಣ ಎಂದು ಜಡ್ಜ್ ಮುಂದೆ ಹೇಳಿಕೊಂಡಿದ್ದಾರೆ. ಸದ್ಯ, ಹಸು ಕೊಟ್ಟು ತನ್ನ ಮಗುವಿನ ಹಸಿವು ನೀಗಿಸಿದಂತೆಯೇ ನಮ್ಮೂರಿಗೆ ಸೂಕ್ತ ರಸ್ತೆ ಮಾಡಿಸಿಕೊಂಡುವಂತೆಯೇ ನ್ಯಾಯಾಧೀಶರನ್ನು ಬೇಡಿಕೊಂಡಿದ್ದಾರೆ. ಜಡ್ಜ್ ಮಾದರಿಯಲ್ಲೇ ಸಾಕಷ್ಟು ಮಂದಿ ಆ ಪುಟ್ಟ ಕಂದಮ್ಮನಿಗಾಗಿ ಸಣ್ಣ ಪುಟ್ಟ ಗಿಫ್ಟ್ಗಳನ್ನು ಇದೀಗ ಕಳುಹಿಸುತ್ತಿದ್ದಾರೆ.
ಇದನ್ನೂ ಓದಿ: ಬರೋಬ್ಬರಿ ₹25 ಕೋಟಿ.. ಕೇರಳದ ಓಣಂ ಬಂಪರ್ ಲಾಟರಿ ಗೆದ್ದ ಕನ್ನಡಿಗ; ಅದೃಷ್ಟಶಾಲಿ ಯಾರು ಗೊತ್ತಾ?
ಹಾಲಿಲ್ಲದೇ ಅತ್ತಿದ್ದ ಮಗು ಭವಿಷ್ಯ ಉಜ್ವಲವಾಗಿರಲಿ ಅಂತ ಜಡ್ಜ್ ಸೇರಿ ಎಲ್ಲರೂ ಆಶೀರ್ವಾದ ಮಾಡುತ್ತಿದ್ದಾರೆ. ಮನಮಿಡಿಯುವ ಈ ಘಟನೆ ಸಾಕಷ್ಟು ವೈರಲ್ ಆಗಿದ್ದು ಈ ಸುದ್ದಿ ಹಲವರು ಈ ಮಗುವಿನ ಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ