/newsfirstlive-kannada/media/post_attachments/wp-content/uploads/2025/06/MOTHER.jpg)
ಚಂಡಿಗಢ: ಜೈಲಿನಲ್ಲಿರುವ ಗ್ಯಾಂಗ್​​ಸ್ಟರ್​ವೊಬ್ಬರ ತಾಯಿ ಹಾಗೂ ಇನ್ನೊಬ್ಬ ವ್ಯಕ್ತಿಯ ಮೇಲೆ ಗುಂಡು ಹಾರಿಸಿ ಅಪರಿಚಿತರು ಜೀವ ತೆಗೆದಿರುವ ಘಟನೆ ಪಂಜಾಬ್​ನ ಬಟಲ ನಗರದ ಖಾಡಿಯನ್ ರಸ್ತೆಯಲ್ಲಿ ನಡೆದಿದೆ.
ಗ್ಯಾಂಗ್​​ಸ್ಟರ್ ಜಗ್ಗು ಭಗವಾನ್​​ ಪುರಿಯಾ ಅವರ ತಾಯಿ ಹರ್ಜಿತ್ ಕೌರ್​ ಹಾಗೂ ಇವರ ಸಹಾಯಕ ಕರಣ್​​ವೀರ್ ಸಿಂಗ್ ಜೀವ ಕಳೆದುಕೊಂಡವರು. ಬಟಲ ನಗರದ ಖಾಡಿಯನ್ ರಸ್ತೆಯಲ್ಲಿ ಈ ಇಬ್ಬರು ಕಾರಿನಲ್ಲಿರುವಾಗ ಇಬ್ಬರು ಅಪರಿಚಿತರು ಬೈಕ್​ನಲ್ಲಿ ಬಂದಿದ್ದಾರೆ. ಕೂಡಲೇ ಗನ್ ತೆಗೆದುಕೊಂಡು ಕಾರಿನಲ್ಲಿದ್ದವರ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಹೇಳಲಾಗಿದೆ.
ಇದರಿಂದ ಹರ್ಜಿತ್ ಕೌರ್ ಹಾಗೂ ಕರಣ್​​ವೀರ್ ಸಿಂಗ್ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಅಮೃತಸರದ ಆಸ್ಪತ್ರೆಯೊಂದಕ್ಕೆ ದಾಖಲು ಮಾಡಲಾಗಿತ್ತು. ಆದರೆ ಅವರ ಮುಖಕ್ಕೆ, ಎದೆಗೆ ಹಾಗೂ ಹೊಟ್ಟೆಗೆ ಗುಂಡುಗಳು ತಗುಲಿದ್ದರಿಂದ ಚಿಕಿತ್ಸೆಗೆ ಸ್ಪಂದಿಸದೇ ಉಳಿಯಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಗ್ಯಾಂಗ್​​ಸ್ಟರ್ ಜಗ್ಗು ಭಗವಾನ್​​ ಪುರಿಯಾ ಜೈಲಿನಲ್ಲಿದ್ದಾರೆ. ಇವರ ತಾಯಿ ಮೇಲೆ ನಡೆದ ದಾಳಿ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದು ವೈರಲ್ ಆಗುತ್ತಿದೆ. ಇದರಲ್ಲಿ ಈ ಕೃತ್ಯ ಎಸಗಿದ್ದು ಬಾಂಬೈ ಗ್ಯಾಂಗ್ ಎಂದು ಹೇಳಲಾಗುತ್ತಿದೆ. ಹರಿಯಾಣದ ಪ್ರಭು ದಸುವಾಲ್ ಮತ್ತು ಕೌಶಲ್ ಚೌದರಿ ಈ ಬಾಂಬೆ ಗ್ಯಾಂಗ್​ನಲ್ಲಿ ಮುಖ್ಯವಾಗಿದ್ದಾರೆ. ಆದರೆ ಈವರೆಗೂ ಯಾರು ಅಟ್ಯಾಕ್ ಮಾಡಿದ್ದಾರೆ ಎಂದು ಪೊಲೀಸರು ಅಧಿಕೃತವಾಗಿ ಹೇಳಿಲ್ಲ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ