/newsfirstlive-kannada/media/post_attachments/wp-content/uploads/2025/07/heart-attcak1.jpg)
ಶಿವಮೊಗ್ಗ: ಹೃದಯಾಘಾತಕ್ಕೆ ಯುವತಿಯೊಬ್ಬಳು ಬಲಿಯಾಗಿರೋ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಹಾಸನ ಮೂಲದ ಹರ್ಷಿತಾ (22) ಮೃತ ದುರ್ದೈವಿ.
ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಗುಡ್ನ್ಯೂಸ್; LPG ಸಿಲಿಂಡರ್ ಬೆಲೆಯಲ್ಲಿ ಭಾರೀ ಇಳಿಕೆ..!
ಹರ್ಷಿತಾ ಒಂದೂವರೆ ತಿಂಗಳ ಬಾಣಂತಿಯಾಗಿದ್ದಳು. ಬಾಣಂತನಕ್ಕಾಗಿ ಆಯನೂರು ಬಳಿಯ ಮಂಡಘಟ್ಟಕ್ಕೆ ಹರ್ಷಿತಾ ಬಂದಿದ್ದಳು. ಮೊನ್ನೆ ರಾತ್ರಿ ಹರ್ಷಿತಾಗೆ ಎದೆ ನೋವು ಕಾಣಿಸಿಕೊಂಡಿದೆ. ಹೀಗಾಗಿ ಹಾಸನದಲ್ಲಿದ್ದ ಗಂಡನನ್ನು ಹರ್ಷಿತಾ ಕರೆಸಿಕೊಂಡಿದ್ದಳು. ನಿನ್ನೆ ಬೆಳಗ್ಗೆ ಆಯನೂರು ಆಸ್ಪತ್ರೆಗೆ ಅಂಬ್ಯುಲೆನ್ಸ್ನಲ್ಲಿ ಹೋಗುವಾಗ ಮಾರ್ಗಮಧ್ಯೆ ಜೀವಬಿಟ್ಟಿದ್ದಾಳೆ.
ಮೂರುವರೇ ವರ್ಷದ ಹಿಂದೆ ಮದುವೆಯಾಗಿದ್ದ ಹರ್ಷಿತಾ, ಎರಡನೆ ಮಗು ಬಾಣಂತಕ್ಕೆಂದು ಹೋಗಿದ್ದಾಗ ಹೃದಯಾಘಾತವಾಗಿ ನಿಧನರಾಗಿದ್ದಾರೆ. ಮುದ್ದಾದ ಒಂದು ತಿಂಗಳ ಮಗು ಈಗ ತಾಯಿ ಇಲ್ಲದ ತಬ್ಬಲಿಯಾಗಿದೆ. ಇನ್ನೂ, ಹರ್ಷಿತಾ ಸಾವಿಗೆ ಹೃದಯಾಘಾತವೇ ಕಾರಣ ಎಂಬುದು ಖಚಿತವಾಗಿಲ್ಲ ಎಂದು ಡಿಎಚ್ಒ ಡಾ.ನಟರಾಜ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ