‘ಫೋನ್ ಬರ್ತಿದ್ದಂತೆ ಅರ್ಧಕ್ಕೆ ಊಟ ಬಿಟ್ಟ’.. ಸಾವಿಗೀಡಾದ SDA ರುದ್ರಣ್ಣನ ಬಗ್ಗೆ ತಾಯಿ ಏನಂದ್ರು?

author-image
AS Harshith
Updated On
ತಹಶೀಲ್ದಾರ್ ಕಚೇರಿಯಲ್ಲಿಯೇ SDA ಸಾ*ವು.. ಡೆತ್​ನೋಟ್​​​ನಲ್ಲಿ ಸಚಿವೆಯ ಪಿಎ ಹೆಸರು ಉಲ್ಲೇಖ
Advertisment
  • ನಿನ್ನೆ ರಾತ್ರಿ ಇಬ್ಬರು ಸೇರಿಕೊಂಡು ಊಟ ಮಾಡಿದ್ದೆವು
  • ಎಲ್ಲೋ ವಾಕಿಂಗ್ ಹೋಗಿದ್ದಾನೆ ಅಂದುಕೊಂಡೆವು
  • ಎರಡು ತಿಂಗಳ ಹಿಂದೆ 2 ಲಕ್ಷ ರೂಪಾಯಿ ತೆಗೆದುಕೊಂಡಿದ್ದ

ಬೆಳಗಾವಿ: ತಹಶೀಲ್ದಾರ್​ ಕಚೇರಿಯಲ್ಲಿ ಎಸ್‌ಡಿಎ ರುದ್ರಣ್ಣ ಯಡವಣ್ಣ ನೇಣಿಗೆ ಶರಣಾಗಿದ್ದಾರೆ. ತಹಶೀಲ್ದಾರ್ ಬಸವರಾಜ ನಾಗರಾಳ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಪಿಎ ಸೋಮು ನನ್ನ ಸಾವಿಗೆ ಕಾರಣ ಅಂತಾ ವಾಟ್ಸ್​ಆ್ಯಪ್​ನಲ್ಲಿ ಸಂದೇಶ ಬರೆದು ನೇಣಿಗೆ ಕೊರಳೊಡ್ಡಿದ್ದಾರೆ. ಸದ್ಯ ಈ ಪ್ರಕರಣದ ಕುರಿತಾಗಿ ರುದ್ರಣ್ಣ ಅವರ ತಾಯಿ ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ

ರುದ್ರಣ್ಣ ಯಡವಣ್ಣ ತಾಯಿ ಮಲ್ಲವ್ವ, ‘ನಿನ್ನೆ ರಾತ್ರಿ ಇಬ್ಬರು ಸೇರಿಕೊಂಡು ಊಟ ಮಾಡಿದ್ದೆವು. ಊಟ ಮಾಡುವಾಗ ಯಾರದ್ದೋ ಫೋನ್ ಬಂತು. ಪೋನ್ ಬರ್ತಿದ್ದಂತೆ ಅರ್ಧಕ್ಕೆ ಊಟ ಬಿಟ್ಟ. ಕೇಳಿದ್ರೂ ಎನೂ ಹೇಳಲಿಲ್ಲ. ಯಾರು ಅಂತಾ ಗೊತ್ತಾಗಲಿಲ್ಲ ಎಂದು ಹೇಳಿದ್ದಾರೆ.

[caption id="attachment_95410" align="alignnone" width="800"]publive-image ಎಸ್‌ಡಿಎ ರುದ್ರಣ್ಣ ಯಡವಣ್ಣ ಮತ್ತು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​ ಪಿಎ ಸೋಮು[/caption]

ಇದನ್ನೂ ಓದಿ: ತಹಶೀಲ್ದಾರ್ ಕಚೇರಿಯಲ್ಲಿಯೇ SDA ಸಾ*ವು.. ಡೆತ್​ನೋಟ್​​​ನಲ್ಲಿ ಸಚಿವೆಯ ಪಿಎ ಹೆಸರು ಉಲ್ಲೇಖ

ಬಳಿಕ ‘ಮನೆಯಲ್ಲಿ ಯಾರ ಕಿರುಕುಳ ಇದೆ ಅಂತಾ ಎನೂ ಹೇಳುತ್ತಿರಲಿಲ್ಲ. ಊಟ ಮಾಡಿ ರಾತ್ರಿ ಮಲಗಿದ. ಬೆಳಗ್ಗೆ ಯಾವಾಗ ಹೋಗಿದ್ದಾನೆ ಗೊತ್ತಿಲ್ಲ. ವಾಚ್, ಮೊಬೈಲ್, ಹೆಲ್ಮೆಟ್ ಮನೆಯಲ್ಲಿ ಇತ್ತು. ಎಲ್ಲೋ ವಾಕಿಂಗ್ ಹೋಗಿದ್ದಾನೆ ಅಂದುಕೊಂಡು ಸುಮ್ಮನಾಗಿದ್ದೆ ಎಂದು ತಾಯಿ ಮಲ್ಲವ್ವ ಹೇಳಿದ್ದಾರೆ.

ಇದನ್ನೂ ಓದಿ: ಕಲ್ಯಾಣ ಕರ್ನಾಟಕ ಭಾಗದವರಿಗೆ ಉದ್ಯೋಗಾವಕಾಶ.. ಅರ್ಜಿ ಆಹ್ವಾನಿಸಿದ ಕರ್ನಾಟಕ ಲೋಕಾಯುಕ್ತ

ಎರಡು ತಿಂಗಳ ಹಿಂದೆ ಎರಡು ಲಕ್ಷ ರೂಪಾಯಿ ತೆಗೆದುಕೊಂಡಿದ್ದ. ಇಲ್ಲೇ ಟ್ರಾನ್ಫರ್ ಮಾಡಿಸಿಕೊಳ್ತೀನಿ ಅಂತಾ ಹಣ ತೆಗೆದುಕೊಂಡು ಹೋಗಿದ್ದ.ಯಾರಿಗೆ ಹಣ ಕೊಟ್ಟ ಎಂಬುದು ಗೊತ್ತಿಲ್ಲ ಎಂದ ತಾಯಿ ಮಲ್ಲವ್ವ ಮಾಧ್ಯಮದ ಮುಂದೆ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment