/newsfirstlive-kannada/media/post_attachments/wp-content/uploads/2025/07/spandana-bangaluru.jpg)
ಬೆಂಗಳೂರು: ಇನ್ನೂ ಬಾಳಿ ಬದುಕಬೇಕಾಗಿದ್ದ ಸುಂದರ ಮಹಿಳೆ ಪ್ರಾಣ ಕಳೆದುಕೊಂಡಿದ್ದಾಳೆ. ಪೋಷಕರ ವಿರೋಧದ ನಡುವೆಯೂ ಮದುವೆಯಾದಳು. 1 ವರ್ಷದ 5 ತಿಂಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಸ್ಪಂದನಾ ಅನುಮಾನಾಸ್ಪದವಾಗಿ ಜೀವಬಿಟ್ಟಿದ್ದಾಳೆ. ಈ ಘಟನೆ ಹೊರವಲಯದ ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇದನ್ನೂ ಓದಿ:ಕಾರು ಡ್ರೈವರ್ ಮೇಲೆ MBA ವಿದ್ಯಾರ್ಥಿನಿಗೆ ಲವ್.. ಮದ್ವೆಯಾದ ಒಂದೇ ವರ್ಷದಲ್ಲಿ ಘೋರ ದುರಂತ..!
ಹೌದು, ಮೃತ ಸ್ಪಂದನಾ ಬೃಂದಾವನ ಕಾಲೇಜಿನಲ್ಲಿ ಎಂಬಿಎ ವ್ಯಾಸಾಂಗ ಮಾಡುತ್ತಿದ್ದಳು. ಅದೇ ಸಮಯದಲ್ಲಿ ಇನ್ಸ್ಟಾಗ್ರಾಮ್ನಲ್ಲಿ ಅಭಿಷೇಕ್ ಎಂಬಾತನ ಪರಿಚಯ ಆಗಿತ್ತು. ಈ ಅಭಿಷೇಕ್ ಕಾರ್ ಡ್ರೈವರ್ ಆಗಿ ಕೆಲಸ ಮಾಡ್ತಿದ್ದ. ಇದಾದ ಬಳಿಕ ಪೋಷಕರ ವಿರೋಧದ ನಡುವೆಯೂ ಸ್ಪಂದನಾ ಹಾಗೂ ಅಭಿಷೇಕ್ ರಿಜಿಸ್ಟ್ರರ್ ಮ್ಯಾರೇಜ್ ಆಗಿದ್ದರು. ಮದುವೆಯಾದ ಬಳಿಕ ಸ್ಪಂದನಾಗೇ ಅಭಿಷೇಕ್ ಕುಟುಂಬಸ್ಥರು ವರದಕ್ಷಿಣೆ ತರುವಂತೆ ಟಾರ್ಚರ್ ನೀಡುತ್ತಿದ್ದರು ಎಂದು ಮಹಿಳೆ ಪೋಷಕರು ಗಂಭೀರವಾಗಿ ಆರೋಪ ಮಾಡಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ನನ್ನ ಮಗಳು ಮದುವೆಯಾಗಿ 1 ವರ್ಷದ ಮೇಲೆ 5 ತಿಂಗಳು ಆಯ್ತು. ಬೃಂದಾವನ ಕಾಲೇಜಿನಲ್ಲಿ ಓದಿದ್ಳು. ಮದುವೆ ಆಗಿಲ್ಲ ಅಂದ್ರೆ ಸತ್ತು ಹೋಗುತ್ತೇನೆ ಅಂತ ಔಷಧಿ ಕುಡಿದು ಆಸ್ಪತ್ರೆ ಸೇರಿದ್ದ. ಆಗ ನನ್ನ ಮಗಳು ಆಸ್ಪತ್ರೆಗೆ ಹೋಗಿ ನೋಡಿಕೊಂಡು ಬಂದಿದ್ದಳಂತೆ. ಈ ವಿಚಾರ ನಮಗೆ ಯಾರಿಗೂ ಗೊತ್ತಿರಲಿಲ್ಲ. ಮದುವೆಯಾಗಿ ಆರು ತಿಂಗಳು ಸರಿಯಾಗಿ ಸಂಸ್ಕಾರ ಮಾಡಿಲ್ಲ. ಅತ್ತೆ, ಗಂಡ ಹಿಂಸೆ ಕೊಡ್ತಾ ಇದ್ದಾರೆ ಅಂತ ಫೋನ್ ಮಾಡಿ ಹೇಳಿದ್ಳು. ಅತಿಯಾಗಿ ಹಿಂಸೆಯಾಗಿ ಕೊಟ್ಟಿದ್ದಕ್ಕೆ ಅಪ್ಪನ ಜೊತೆಗೆ ಮಾತೇ ಆಡದೇ ಇರೋಳು, ಫೋನ್ ಮಾಡಿ ಅಪ್ಪ ನನಗೆ ಇಲ್ಲಿ ಇರೋಕೆ ಆಗ್ತಾ ಇಲ್ಲ ಅಂತ ಕಣ್ಣೀರು ಹಾಕಿದ್ದಳು. ನನ್ನ ಮಗಳು ಎಂಬಿಎ ಓದಿದ್ದಳು. ನನಗೆ ಮೂರು ಮಕ್ಕಳು ಇದ್ದಾರೆ. ಸಾಲ ಮಾಡಿ ಅವಳ ಮೇಲೆ ಹಾಕ್ತಾ ಇದ್ದ. ನನ್ನ ಮಗಳಿಗೆ ಹೊಡೆದು ಸಾಯಿಸಿದ್ದಾರೆ ಎಂದು ತಾಯಿ ಚಂದ್ರಪ್ರಭಾ ಆರೋಪ ಮಾಡಿದ್ದಾರೆ.
ಕೊನೆಯದಾಗಿ ಸ್ಪಂದನಾ ತಂಗಿಗೆ ಮೆಸೇಜ್ ಮಾಡಿದ್ದೇನು?
ಸ್ಪಂದನಾ ಕೊನೆಯದಾಗಿ ತನ್ನ ತಂಗಿಗೆ ವಾಟ್ಸಾಪ್ನಲ್ಲಿ ಮೆಸೇಜ್ ಮಾಡಿದ್ದಾಳೆ. ಜುಲೈ 5ರಂದು ಸ್ಪಂದನಾ ತಂಗಿಗೆ ಏನು ಒಂದು ಮೆಸೇಜ್ ಮಾಡಿಲ್ಲ ಅಂತ ಕೇಳಿದ್ದಾಳೆ. ಇದಾದ ಬಳಿಕ ಜುಲೈ 9 ಬುಧವಾರ ಅಮ್ಮ ಹಾಗೂ ಅಪ್ಪನ ಆಧಾರ್ ಕಾರ್ಡ್ ಕೊಡು, ನಮ್ಮ ಆಫೀಸ್ನಲ್ಲಿ ಪಿಎಫ್ (PF) ಅಕೌಂಟ್ ಮಾಡುತ್ತಿದ್ದಾರೆ. ಅದಕ್ಕೆ ಡೀಟೇಲ್ಸ್ ಬೇಕು ಅಂತ ಹಾಕಿದ್ದಾಳೆ. ಇದಾದ ಬಳಿಕ ತಂಗಿ ನಾನು ಕ್ಲಾಸ್ನಲ್ಲಿ ಇದ್ದೇನೆ, ಆಮೇಲೆ ಮೆಸೇಜ್ ಮಾಡುತ್ತೇನೆ ಅಂತ ಹಾಕಿದ್ದಾಳೆ. ಇದಕ್ಕೆ ಮನೆಗೆ ಹೋಗಿ ಜಸ್ಟ್ ಫೋಟೋ ಕಳ್ಸು ಸಾಕು ಅಂತ ರಿಪ್ಲೈ ಕೊಟ್ಟಿದ್ದಾಳೆ. ಇದಾದ ಬಳಿಕ ನಿನ್ನೆ ಮತ್ತೆ ಮೆಸೇಜ್ ಮಾಡಿದ ಸ್ಪಂದನಾ, ನನ್ನ ಸಾವಿಗೆ ಕಾರಣ ಅಭಿ ಹಾಗೂ ಅವರ ಇಡೀ ಕುಟುಂಬ. ಜೊತೆಗೆ ವರ್ಕ್ ಸ್ಥಳದಲ್ಲಿ ಕೆಲಸ ಮಾಡುವ ಎಲ್ಲರ ಉದ್ಯೋಗಿಗಳು ಅಂತ ಕಳುಹಿಸಿದ್ದಾಳೆ.