newsfirstkannada.com

ಇವಳು ತಾಯಿಯೋ, ರಾಕ್ಷಸಿಯೋ.. ಪುಟ್ಟ ಬಾಲಕಿ ಮೇಲೆ ಯಮನಂತೆ ವರ್ತಿಸಿದ ಅಮ್ಮ

Share :

Published May 12, 2024 at 8:17am

Update May 12, 2024 at 9:57am

    ಮಗು ಚೇಷ್ಟೆ ಮಾಡಿದ್ದಕ್ಕೆ ತಾಯಿ ಕೊಟ್ಟ ಶಿಕ್ಷೆ ಎಂತಹದ್ದು ಗೊತ್ತಾ?

    ಅಮ್ಮ ಹೊಡೆಯುವಾಗ ಪ್ರಾಣ ಉಳಿದ್ರೆ ಸಾಕೆಂದು ಕಿರುಚುತ್ತಿದ್ದ ಮಗು

    ಕೃತ್ಯದ ವಿಡಿಯೋ ನೋಡಿದ್ರೆ ಎಂಥವರ ಮನಸು ಕದಡದೇ ಇರದು

ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್​​ನಲ್ಲಿ ಹೃದಯ ವಿದ್ರಾವಕ ವಿಡಿಯೋವೊಂದು ಹರಿದಾಡುತ್ತಿದೆ. ಮನೆಯಲ್ಲಿ ತಾಯಿಯೊಬ್ರು ತನ್ನ ಮಗಳ ಮೇಲೆ ಹಲ್ಲೆ ಮಾಡುತ್ತಿರುವ ವಿಡಿಯೋ ನೋಡಿದವರ ಮನಸು ಕದಡದೇ ಇರದು. ಅತ್ಯಂತ ಕ್ರೂರವಾಗಿ ಮಹಿಳೆ ಮಗುವಿನ ಮೇಲೆ ತನ್ನ ವರ್ತನೆ ತೋರಿದ್ದಾಳೆ.

ಗುಜರಾತ್​ ಮೂಲದ ತಾಯಿಯೊಬ್ಬರು ಮನೆಯಲ್ಲಿ ಅಡುಗೆ ಮಾಡುವಾಗ ಮಗು ಏನೋ ಕೀಟಲೆ ಮಾಡಿದೆ. ಇಷ್ಟಕ್ಕೆ ಸುಮ್ಮನಾಗದ ತಾಯಿ ಮಗಳನ್ನು ಚಪಾತಿ ಎತ್ತಿ ಹಾಕುವ ಸೌಟ್​ನಿಂದ ಮನಬಂದಂತೆ ಥಳಿಸಿದ್ದಾಳೆ. ಬಾಲಕಿಯ ಕತ್ತು ಅನ್ನು ಜೋರಾಗಿ ಹಿಸುಕಿ ಮೇಲೆ ಕುಳಿತ್ತಿದ್ದಾಳೆ. ತನ್ನ ಶಕ್ತಿ ಎಷ್ಟಿದಿಯೋ ಅಷ್ಟನ್ನು ಮಗುವಿನ ಮೇಲೆ ಪ್ರಯೋಗಿಸಿದ್ದಾಳೆ. ಮಗುವಿನ ಬಟ್ಟೆ ಹಿಡಿದು ಮೇಲೆ ಎತ್ತಿ ಎಳೆದಾಡಿದ್ದಾಳೆ. ನೆಲಕ್ಕೆ ಹಾಕಿ ಹೊಡೆದಿದ್ದಾಳೆ. ಈ ವೇಳೆ ತಾಯಿಯಿಂದ ಮಗುವಿಗೆ ನರಕ ಸದೃಶ್ಯವಾಗಿದ್ದು ಕಿರುಚಾಡಿದೆ. ಪ್ರಾಣ ಉಳಿದರೆ ಸಾಕು ಎನ್ನುವಂತೆ ಮಗು ಭಯದಲ್ಲಿ ಒದ್ದಾಡಿದೆ ಎನ್ನಲಾಗಿದೆ.

ಸದ್ಯ ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ನೆಟ್ಟಿಗರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು ವಿಡಿಯೋ ಮಾಡುತ್ತಿರುವವರು ಯಾಕೆ ಬಾಲಕಿಯನ್ನು ಬಿಡಿಸಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಬಾಲಕಿಯ ತಂದೆಯೇ ಈ ವಿಡಿಯೋವನ್ನು ಚಿತ್ರೀಕರಿಸಿ ಶೇರ್ ಮಾಡಿರಬಹುದು ಎಂದು ಕೆಲವರು ಊಹೆ ಮಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇವಳು ತಾಯಿಯೋ, ರಾಕ್ಷಸಿಯೋ.. ಪುಟ್ಟ ಬಾಲಕಿ ಮೇಲೆ ಯಮನಂತೆ ವರ್ತಿಸಿದ ಅಮ್ಮ

https://newsfirstlive.com/wp-content/uploads/2024/05/GT_MOM.jpg

Load More