/newsfirstlive-kannada/media/post_attachments/wp-content/uploads/2024/10/kalaburagi-2.jpg)
ಮಗನೊಬ್ಬ ತನ್ನ ಹೆತ್ತ ತಾಯಿಗೆ ಹೊಡೆದು ಕೊಲೆ ಮಾಡಿರುವ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ರಾಜೋಳಾ ಗ್ರಾಮದಲ್ಲಿ ನಡೆದಿದೆ. ದೇವಕಮ್ಮ ಪೂಜಾರಿ (68) ಕೊಲೆಯಾದ ತಾಯಿ.
ಹೆತ್ತಮ್ಮನನ್ನೇ ಕೊಂದ ಪಾಪಿ ಮಗ ಜೆಟ್ಟೆಪ್ಪ ಪೂಜಾರಿ. ಅಂದಹಾಗೆಯೇ ದೇವಕಮ್ಮ ಮಗ ಜೆಟ್ಟೆಪ್ಪ ಇಬ್ಬರೇ ರಾಜೋಳಾ ಗ್ರಾಮದಲ್ಲಿ ವಾಸವಿದ್ದರು. ಜೆಟ್ಟೆಪ್ಪ ಹೆಂಡತಿಗೆ ಹೊಡಿಬಡಿ ಮಾಡುತ್ತಿದ್ದ ಕಾರಣ ಆಕೆ ಮಕ್ಕಳೊಂದಿಗೆ ತವರು ಸೇರಿದ್ದಾಳೆ.
ಕಳೆದ ನಾಲ್ಕು ದಿನಗಳ ಹಿಂದಷ್ಟೇ ದೇವಕಮ್ಮ ತನ್ನ ಮಗಳ ಮನೆಗೆ ಹೋಗಿ ಎರಡು ದಿನ ಮಗಳ ಮನೆಯಲ್ಲೇ ಇದ್ದು ವಾಪಸ್ ರಾಜೋಳಾ ಗ್ರಾಮಕ್ಕೆ ಬಂದಿದ್ದಾಳೆ. ತಾಯಿ ಊರಿಗೆ ಹೋಗಿದಕ್ಕೆ, ತನಗೆ ಊಟ ಮಾಡಿಕೊಡೊರು ಯಾರು ?, ಬಟ್ಟೆ ಒಗೆಯುವವರು ಯಾರು ಎಂದು ಸಿಟ್ಟಿಗೆದ್ದಿದ್ದಾನೆ.
ಇದನ್ನೂ ಓದಿ: ಹೊಳೆಯಂತಾದ ಬೆಂಗಳೂರು.. ಒಂದಾ, ಎರಡಾ, ಸಾಲು ಸಾಲು ಅವಾಂತರಗಳ ನಡುವೆ ಸಂಕಷ್ಟದಲ್ಲಿ ಜನರು
ಇದೇ ವಿಚಾರವಾಗಿ ಜೆಟ್ಟೆಪ್ಪ ತಾಯಿ ಜೊತೆ ಜಗಳ ತೆಗೆದು ವಯಸ್ಸಾದ ತಾಯಿಗೆ ಬಡಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಘಟನೆ ಹಿನ್ನೆಲೆ ಕೇಸ್ ದಾಖಲಿಸಿಕೊಂಡಿರುವ ಚಿತ್ತಾಪುರ ಠಾಣೆ ಪೊಲೀಸರು ಆರೋಪಿ ಜೆಟ್ಟೆಪ್ಪನನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us