Advertisment

3 ವರ್ಷದ ಹೆಣ್ಣು ಮಗುವನ್ನು ಕೊಂದ ತಾಯಿ.. ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸಿಕ್ಕಿಬಿದ್ದಳು!

author-image
AS Harshith
Updated On
3 ವರ್ಷದ ಹೆಣ್ಣು ಮಗುವನ್ನು ಕೊಂದ ತಾಯಿ.. ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸಿಕ್ಕಿಬಿದ್ದಳು!
Advertisment
  • ತಾನೇ ಹೆತ್ತ ಮಗುವನ್ನು ಕೊಂದ ಪಾಪಿ ತಾಯಿ
  • ತಾಯಿಗೆ ಆ ಮಗುವಿನ ಮೇಲೆ ಅಂಥದ್ದೇನಿತ್ತು ಸಿಟ್ಟು?
  • ವೇಲ್ ನಿಂದ ಬಿಗಿದು 3 ವರ್ಷದ ಮಗುವನ್ನು ಕೊಲೆ ಮಾಡಿದ ತಾಯಿ

ಬೆಂಗಳೂರು: ತಾಯಿಯೊಬ್ಬಳು ತಾನು ಹೆತ್ತ ಮೂರು ವರ್ಷದ ಮಗುವನ್ನು ವೇಲ್ ನಿಂದ ಬಿಗಿದು ಕೊಂದ ಘಟನೆಯೊಂದು ಬೆಳಕಿಗೆ ಬಂದಿದೆ. ಸುಬ್ರಮಣ್ಯಪುರ ಠಾಣಾ ವ್ಯಾಪ್ತಿಯ ಮಂಜುನಾಥ ನಗರದಲ್ಲಿ ಈ ಘಟನೆ ನಡೆದಿದೆ.

Advertisment

ರಮ್ಯಾ (35) ಎಂಬಾಕೆ ತನ್ನ ಮಗು ಪ್ರೀತಿಕಾಳನ್ನು ಕೊಂದಿದ್ದಾಳೆ. ಆಕೆಯನ್ನು ಸುಬ್ರಮಣ್ಯಪುರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ರಮ್ಯಾ ತನ್ನ ಮಗುವನ್ನು ಮಾನಸಿಕ ಅಸ್ವಸ್ಥೆ ಎಂಬ ಕಾರಣಕ್ಕೆ ಉಸಿರುಟ್ಟಿಸಿ ಕೊಲೆ ಮಾಡಿದ್ದಾಳೆ. ಕೊಲೆಯಾದ ಮಗು ಪ್ರೀತಿಕಾಳಿಗೆ ಮೂರು ವರ್ಷ ಹತ್ತು ತಿಂಗಳ ಕೂಡಿತ್ತು. ಆದರೆ ತಾಯಿ ಆಕೆಯನ್ನು ವೇಲ್ ನಿಂದ ಬಿಗಿದು ಕೊಂದಿದ್ದಾಳೆ.

ಇದನ್ನೂ ಓದಿ: ಮಂಡ್ಯದಲ್ಲಿ ವರುಣಾರ್ಭಟ ಜೋರು.. KRSಗೆ ಹರಿದು ಬಂತು ನೀರು.. ಇಂದು ನೀರಿನ ಮಟ್ಟ ಎಷ್ಟಿದೆ ಗೊತ್ತಾ?

Advertisment

ಇನ್ನು ಬಂಧಿತೆ ರಮ್ಯ ಗೃಹಿಣಿಯಾಗಿದ್ದು, ಈಕೆಯ ಪತಿ ಸಾಫ್ಟ್ ವೇರ್ ಇಂಜಿನಿಯರ್​ಯಾಗಿದ್ದಾರೆ. ಪತಿ ನಾರ್ವೆಯಲ್ಲಿ ಕೆಲಸ ಮಾಡುತ್ತಿದ್ದು, ರಮ್ಯ ತನ್ನ ಅತ್ತೆ-ಮಾವನ ಜೊತೆಗೆ ವಾಜರಹಳ್ಳಿಯಲ್ಲಿ ವಾಸ ಮಾಡುವಿದ್ದಳು.

publive-image

ಇದನ್ನೂ ಓದಿ: ಕನ್ನಡ ಚಿತ್ರರಂಗಕ್ಕೆ ದರ್ಶನ್ ಪ್ರಕರಣ ಕಪ್ಪು ಚುಕ್ಕೆ; ಮಾಜಿ ಶಾಸಕ ಕುಮಾರ ಬಂಗಾರಪ್ಪ

ರಮ್ಯಾ 11 ವರ್ಷಗಳ ಹಿಂದೆಯಷ್ಟೇ ಮದುವೆಯಾಗಿದ್ದಳು. ಆಕೆಗೆ ಮುದ್ದಾದ ಅವಳಿ ಹೆಣ್ಣು ಮಕ್ಕಳು ಜನಿಸಿತ್ತು. ಎರಡು ಮಗುವಿನ ಪೈಕಿ 3 ವರ್ಷ 10 ತಿಂಗಳ ಪ್ರೀತಿಕಾಳು ಮಾನಸಿಕ ಅಸ್ವಸ್ಥಳಾಗಿದ್ದಳು.

Advertisment

ಇದನ್ನೂ ಓದಿ: ದರ್ಶನ್ ಮತ್ತು ಗ್ಯಾಂಗ್ ವಿರುದ್ದ ಸದ್ಯ ಸಿಕ್ಕಿರುವ ಎವಿಡೆನ್ಸ್​ಗಳಿಷ್ಟು! ಇದರಿಂದ ತಪ್ಪಿಸಿಕೊಳ್ಳೋಕೆ ಸಾಧ್ಯನೇ ಇಲ್ಲ

ಮತ್ತೊಂದು ಮಗು ಸಡೃಢವಾಗಿದ್ದು, ಶಾಲೆಗೆ ಹೋಗುತಿತ್ತು.ಇದರಿಂದ ನೊಂದ ರಮ್ಯಾ ಮಗುವನ್ನ ವೇಲಿನಿಂದ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಅ ಬಳಿಕ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಈ ವೇಳೆ ಅನುಮಾನ‌ಪಟ್ಟ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಕೊಲೆ ಮಾಡಿರುವುದಾಗಿ ರಮ್ಯಾ ಒಪ್ಪಿಕೊಂಡಿದ್ದಾಳೆ.

ಇದನ್ನೂ ಓದಿ: ದರ್ಶನ್​ ಹತ್ರ ಪರಿಹಾರ ಕೇಳೋಕೆ ಹೋದ್ರೆ ನಾಯಿ ಛೂ ಬಿಟ್ರು.. ಕಾಟೇರನ ಕರಾಳ ಮುಖ ಬಿಚ್ಚಿಟ್ಟ ಕೂಲಿ ಕಾರ್ಮಿಕ

Advertisment

ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment