ಜೀವನ ಕೊಟ್ಟ ಅಮ್ಮನ ಉಸಿರು ನಿಲ್ಲಿಸಿದ ದತ್ತು ಪುತ್ರಿ.. ಅನಾಥ ಮಗು ರಕ್ಷಿಸಿ ಬೆಳೆಸಿದ್ದೇ ತಪ್ಪಾಯ್ತು..

author-image
Ganesh
Updated On
ಜೀವನ ಕೊಟ್ಟ ಅಮ್ಮನ ಉಸಿರು ನಿಲ್ಲಿಸಿದ ದತ್ತು ಪುತ್ರಿ.. ಅನಾಥ ಮಗು ರಕ್ಷಿಸಿ ಬೆಳೆಸಿದ್ದೇ ತಪ್ಪಾಯ್ತು..
Advertisment
  • ಪ್ರೀತಿ ನಿರಾಕರಿಸಿದ್ದಕ್ಕೆ ತಾಯಿಯ ಜೀವತೆಗೆದ ದತ್ತುಪುತ್ರಿ
  • ತಾಯಿಯ ಪ್ರೀತಿ, ಶಿಕ್ಷಣ, ಉತ್ತಮ ಸಂಸ್ಕಾರ ನೀಡಿ ಬೆಳೆಸಿದ್ದರು
  • 13 ವರ್ಷದ ಮಗಳಿಗೆ ಇಬ್ಬರ ಜೊತೆಗೆ ಲವ್ ಶುರುವಾಗಿತ್ತು

ಆಕೆಗೆ ಮಕ್ಕಳಿರಲಿಲ್ಲ.. ಒಂಟಿಯಾಗಿದ್ದವಳಿಗೆ ಅನಾಥ ಮಗು ಸಿಕ್ಕಿತ್ತು. ಕಾನೂನು ಪ್ರಕಾರ ದತ್ತು ಪಡೆದು ತಾಯಿಯ ಪ್ರೀತಿ ಕೊಟ್ಟು ಓದಿಸಿ ಬೆಳೆಸಿದ್ದಳು. ಆದ್ರೆ ಇವತ್ತು ಆ ದತ್ತು ಪುತ್ರಿಯೇ ಸಾಕಿದ ತಾಯಿಯ ಉಸಿರನ್ನೇ ನಿಲ್ಲಿಸಿದ್ದಾಳೆ. ಇಂಥಾಂದೊಂದು ಧಾರುಣ ಘಟನೆ ಒಡಿಶಾದಲ್ಲಿ ನಡೆದಿದೆ.

ಪ್ರೀತಿ ನಿರಾಕರಿಸಿದ್ದಕ್ಕೆ ತಾಯಿಯ ಜೀವತೆಗೆದ ದತ್ತುಪುತ್ರಿ

ಇದು ಒಂದು ಜೀವದ ಕಥೆ.. ಬೀದಿಯಲ್ಲಿ ಬಿದ್ದಿದ್ದ ಮೂರು ದಿನದ ನವಜಾತ ಹೆಣ್ಣು ಶಿಶುವನ್ನು ತಂದು ಸಾಕಿ ಬೆಳೆಸಿದ ಕರುಣಾಮಹಿ ತಾಯಿಯ ದುರಂಥ ಕಥೆ. ತಾನು ಸಾಕಿದ ಮಗಳಿಂದಲೇ ತಾಯಿ ಕೊಲೆಯಾಗಿರುವ ಧಾರುಣ ಘಟನೆ ಒಡಿಶಾದ ಗಜಪತಿ ಜಿಲ್ಲೆಯ ಪರಲಖೆಮುಂಡಿಯಲ್ಲಿ ನಡೆದಿದೆ.

ಇದನ್ನೂ ಓದಿ: ‘What is your name..’ ಟ್ರ್ಯಾಕ್ಟರ್ ಅಡ್ಡಗಟ್ಟಿ ಬೆಂಗಳೂರು ಕಮಿಷನರ್​​ಗೆ ಮಹಿಳೆ ಕ್ಲಾಸ್​..! ಅಸಲಿಗೆ ಆಗಿದ್ದೇನು?

publive-image

ಇಬ್ಬರ ಜೊತೆಗೆ ಲವ್ ಶುರುವಾಗಿತ್ತು

ಒಡಿಶಾ ಮೂಲದ ರಾಜಲಕ್ಷ್ಮಿ ಎಂಬ​ ಮಹಿಳೆಗೆ ಮಕ್ಕಳಿರಲಿಲ್ಲ. ಹೀಗೆ 13 ವರ್ಷಗಳ ಹಿಂದೆ ಕೇವಲ 3 ದಿನದ ಹೆಣ್ಣು ಶಿಶುವೊಂದು ಸಿಕ್ಕಿತ್ತು. ಕಾನೂನು ಪ್ರಕಾರ ಆ ಮಗುವನ್ನು ದತ್ತು ಪಡೆದಿದ್ದ ರಾಜಲಕ್ಷ್ಮಿ, ಆ ಮಗುವಿಗೆ ತಾಯಿಯ ಪ್ರೀತಿ, ಶಿಕ್ಷಣ, ಉತ್ತಮ ಸಂಸ್ಕಾರ ನೀಡಿ ಬೆಳೆಸಿದ್ದರು. ಕೇಂದ್ರೀಯ ವಿದ್ಯಾಲಯಕ್ಕೆ ಸೇರಿಸಿ ಶಿಕ್ಷಣ ಕೊಡಿಸುತ್ತಿದ್ದರು. ಆದ್ರೆ 8ನೇ ತರಗತಿಯಲ್ಲಿದ್ದ ಬಾಲಕಿಯ ವರ್ತನೆಯಿಂದ ಆಘಾತ ಆಗಿತ್ತು. 13 ವರ್ಷದ ಮಗಳಿಗೆ ಇಬ್ಬರು ಹುಡುಗರ ಜೊತೆಗೆ ಲವ್ ಶುರುವಾಗಿತ್ತು..

ಬುದ್ದಿ ಹೇಳಿದ್ದಕ್ಕೆ ಸಾಕಿದ ಮಗಳಿಂದಲ್ಲೇ ರಾಜಲಕ್ಷ್ಮಿ ಫಿನಿಶ್

ತಾನು ಪ್ರೀತಿಯಿಂದ ಸಾಕಿ ಬೆಳೆಸಿದ ಮಗಳು ಕೈ ತಪ್ಪುತ್ತಿರುವ ಕಂಡು ರಾಜಲಕ್ಷ್ಮಿ, ಅಪ್ರಾಪ್ತ ಮಗಳನ್ನು ಕರೆದು ಬುದ್ಧಿವಾದ ಹೇಳಿದ್ದಾರೆ. ಇದರಿಂದ ಕೋಪಗೊಂಡ ಮಗಳು ಮುಂದೆ ಮಾಡಿದ್ದು ಘನಘೋರ ಕೃತ್ಯ.. ಬುದ್ಧಿವಾದ ಹೇಳಿದ್ದಕ್ಕೆ ತಾಯಿಯನ್ನೇ ಮುಗಿಸಲು ದತ್ತುಪುತ್ರಿ ಪ್ಲಾನ್ ಮಾಡಿದ್ದಳು. ಅದರಂತೆ ಏಪ್ರಿಲ್ 29ರಂದು ಮೊದಲು ತಾಯಿ ರಾಜಲಕ್ಷ್ಮಿಗೆ ಊಟದಲ್ಲಿ ನಿದ್ರೆ ಮಾತ್ರೆ ಕೊಟ್ಟಿದ್ದಳು. ಬಳಿಕ ತನ್ನ ಗೆಳೆಯರಾದ ಗಣೇಶ್, ದಿನೇಶ್ ಎಂಬುವರನ್ನು ಮನೆಗೆ ಕರೆಸಿಕೊಂಡು.. ನಂತರ ತಲೆ ದಿಂಬಿ‌ನಿಂದ ಉಸಿರುಗಟ್ಟಿಸಿ ರಾಜಲಕ್ಷ್ಮಿಯ ಮುಗಿಸಿದ್ರು.. ಇದರಿಂದ ತಪ್ಪಿಸಿಕೊಳ್ಳಲು ತಾಯಿಗೆ ಹೃದಯಾಘಾತವಾಗಿದೆ ಎಂದು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು ಹೈಡ್ರಾಮಾ ಮಾಡಿ, ಸಂಬಂಧಿಕರನ್ನು ನಂಬಿಸಿ ಅಂತ್ಯಕ್ರಿಯೆಯನ್ನು ಮಾಡಲಾಗಿತ್ತು.

ಇದನ್ನೂ ಓದಿ: ಪಂಜಾಬ್ ಕಿಂಗ್ಸ್​ ಸ್ಟ್ರಾಂಗ್ ಕಂಬ್ಯಾಕ್.. ಯುವ ಆಟಗಾರನಿಗಾಗಿ ಸ್ಥಾನ ತ್ಯಾಗ ಮಾಡಿದ ಸಂಜು

ಮೊಬೈಲ್​ನಲ್ಲಿ ಸಿಕ್ತು ರಾಜಲಕ್ಷ್ಮಿಯ ಸುಳಿವು

ಇನ್ನು ರಾಜಲಕ್ಷ್ಮಿ ಅಂತ್ಯಕ್ರಿಯೆ ಎಲ್ಲ ಮುಗಿದ ಬಳಿಕ ರಾಜಲಕ್ಷ್ಮಿಯ ಸದೋದರ ಮನೆಗೆ ಬಂದಿದ್ದಾನೆ. ಆಗ ಆತನಿಗೆ ರಾಜಲಕ್ಷ್ಮಿ ಸಾಕು ಮಗಳ ಮೊಬೈಲ್​ ಸಿಕ್ಕಿದ್ದು, ಅದನ್ನು ಚೆಕ್​ ಮಾಡಿದಾಗ ಇನ್ ಸ್ಟಾ ಗ್ರಾಮ್​ನಲ್ಲಿ ಕೊಲೆಗೆ ಮೇಸೇಜ್ ಮಾಡಿರುವುದು ಪತ್ತೆ ಆಗಿದೆ. ಹಾಗೂ ಮನೆಯಲ್ಲಿದ್ದ ರಾಜಲಕ್ಷ್ಮಿಯ ಚಿನ್ನದ ಆಭರಣ, 60 ಸಾವಿರ ನಗದು ನಾಪತ್ತೆ ಆಗಿತ್ತು. ಇದರಿಂದ ಅನುಮಾನಗೊಂಡ ರಾಜಲಕ್ಷ್ಮಿ ಸಹೋದರ ಮೊಬೈಲ್​ ಸಮೇತ ಪೊಲೀಸರಿಗೆ ದೂರು ನೀಡಿದ್ದಾನೆ. ಕೇಸ್​ ದಾಖಲಿಸಿಕೊಂಡ ಪೊಲೀಸರು ದತ್ತು ಮಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಾಯ್ಬಿಟ್ಟಿದ್ದಾಳೆ. ಈಕೆಗೆ ಸಾಥ್​ ನೀಡಿದ ಆರೋಪಿ ದಿನೇಶ್, ಗಣೇಶ್​ನನ್ನು ಪೊಲೀಸರು ಬಂಧಿಸಿದ್ದಾರೆ.

ಬೀದಿಯಲ್ಲಿ ಅನಾಥವಾಗಿದ್ದ ನವಜಾತ ಶಿಶುವನ್ನು ತಂದು ಸಾಕಿ ಬೆಳೆಸಿದ ತಾಯಿಗೆ ಸಾವಿನ ಶಿಕ್ಷೆ ಸಿಕ್ಕಿದ್ರೆ.. ಇತ್ತ ಹದಿಹರಯದ ವಯಸ್ಸು ಮಾಡಬಾರದ ಕೆಲಸ ಮಾಡಿಸಿ ಜೈಲು ಸೇರುವಂತೆ ಮಾಡಿದೆ.

ಇದನ್ನೂ ಓದಿ: ಅಂತಿಮ ಹಂತ ತಲುಪಿದ್ದರೂ ಪ್ಲೇ-ಆಫ್​ ಬಗ್ಗೆ ಕ್ಲಾರಿಟಿನೇ ಇಲ್ಲ.. 5 ತಂಡ, 4 ಸ್ಥಾನ..! RCB ಕತೆ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment