newsfirstkannada.com

30 ವರ್ಷದ ಬಳಿಕ ಅಯೋಧ್ಯೆಯಲ್ಲಿ ಮಾತನಾಡಿದ ಮೌನಿ ಮಾತಾ; ಯಾರಿವರು?

Share :

Published January 25, 2024 at 8:20pm

    30 ವರ್ಷದ ಬಳಿಕ ಅಯೋಧ್ಯೆ ರಾಮಮಂದಿರದಲ್ಲಿ ಮೊದಲ ಮಾತು

    ಬಾಲರಾಮನ ದರ್ಶನ ಪಡೆದ ಬಳಿಕ ಜೈಶ್ರೀರಾಮ್ ಎಂದ ಸರಸ್ವತಿ ದೇವಿ

    1992ರಲ್ಲಿ ಬಾಬರಿ ಮಸೀದಿ ಧ್ವಂಸವಾದ ದಿನದಂದು ಪ್ರತಿಜ್ಞೆ ಮಾಡಿದ್ದರು

ರಾಮಜನ್ಮಭೂಮಿ ಅಯೋಧ್ಯೆ ಭಕ್ತರಿಂದ ತುಂಬಿ ತುಳುಕುತ್ತಿದೆ. ಪ್ರತಿದಿನ 3 ರಿಂದ 5 ಲಕ್ಷ ಭಕ್ತರು ಬಾಲರಾಮನ ದರ್ಶನ ಪಡೆಯುತ್ತಿದ್ದಾರೆ. ಭಕ್ತಸಾಗರದಲ್ಲಿ ರಾಮನಾಮ ಮುಗಿಲು ಮುಟ್ಟಿದ್ರೆ ರಾಮಲಲ್ಲಾ ಮೂರ್ತಿಯ ದರ್ಶನ ಪಡೆದವರಿಗೆ ಆಗುತ್ತಿರುವ ಆನಂದ ವರ್ಣಿಸೋದು ಅಸಾಧ್ಯ.

ರಾಮಜನ್ಮಭೂಮಿಯಲ್ಲಿ ಅಪಾರ ಭಕ್ತರ ಮಧ್ಯೆ ಹಲವು ಆಶ್ಚರ್ಯಕರ ಘಟನೆಗಳು ನಡೆಯುತ್ತಿವೆ. ಖುದ್ದು ರಾಮನ ಭಂಟ ಹನುಮನೇ ಶ್ರೀರಾಮನ ದರ್ಶನಕ್ಕೆ ಬಂದು ಹೋಗಿದ್ದು ಅಚ್ಚರಿಗೆ ಕಾರಣವಾಗಿತ್ತು. ಇದೀಗ ಮತ್ತೊಂದು ಘಟನೆ ಭಕ್ತಕೋಟಿಯ ಗಮನ ಸೆಳೆದಿದೆ.

85 ವರ್ಷದ ಸರಸ್ವತಿ ದೇವಿ 30 ವರ್ಷದ ಬಳಿಕ ಅಯೋಧ್ಯೆ ರಾಮಮಂದಿರದಲ್ಲಿ ತಮ್ಮ ಮೌನ ವ್ರತವನ್ನು ಮುರಿದಿದ್ದಾರೆ. ಅಯೋಧ್ಯೆಗೆ ಭೇಟಿ ಕೊಟ್ಟ ಮೌನಿ ಮಾತಾ ಜೈಶ್ರೀರಾಮ್, ಸೀತಾ ರಾಮ ಅನ್ನೋ ಮೂಲಕ ತಮ್ಮ 30 ವರ್ಷದ ಮೌನವ್ರತವನ್ನು ಮುರಿದಿದ್ದಾರೆ.

ಇದನ್ನೂ ಓದಿ: ರಾಮಮಂದಿರಕ್ಕಾಗಿ ಸತತ 30 ವರ್ಷ ಮೌನವ್ರತ; ಈಗ ಪ್ರತಿಜ್ಞೆ ಮುರಿಯಲಿದ್ದಾರೆ ‘ಮೌನಿ ಮಾತಾ’!

ಮೌನಿ ಮಾತಾ ಅಂತಾನೇ ಹೆಸರುವಾಸಿಯಾಗಿದ್ದ ಸರಸ್ವತಿ ದೇವಿ ಜಾರ್ಖಂಡ್​ನ ಧನಬಾದ್ ನಿವಾಸಿ. 1992ರಲ್ಲಿ ಬಾಬರಿ ಮಸೀದಿ ಧ್ವಂಸವಾದ ದಿನದಂದು ಸರಸ್ವತಿ ದೇವಿಯು ಪ್ರತಿಜ್ಞೆ ಮಾಡಿದ್ದರಂತೆ. ಮುಂದೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆಗಬೇಕು. ಅಲ್ಲಿಯವರೆಗೂ ತಾವು ಮೌನವ್ರತ ಮಾಡುವುದಾಗಿ ಶಪಥ ಮಾಡಿದ್ದರಂತೆ. ಇದೀಗ ರಾಮಮಂದಿರದ ಉದ್ಘಾಟನೆ ಹಿನ್ನೆಲೆಯಲ್ಲಿ ಆ ಶಪಥವನ್ನು ಕೈಬಿಡಲು ನಿರ್ಧರಿಸಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

30 ವರ್ಷದ ಬಳಿಕ ಅಯೋಧ್ಯೆಯಲ್ಲಿ ಮಾತನಾಡಿದ ಮೌನಿ ಮಾತಾ; ಯಾರಿವರು?

https://newsfirstlive.com/wp-content/uploads/2024/01/Ayodhya-Jai-Shriram.jpg

Load More