Advertisment

ನಟಿ ಸಮಂತಾ ಬಗ್ಗೆ ವಿವಾದಾತ್ಮಕ ಹೇಳಿಕೆ.. ತಪ್ಪಿನ ಅರಿವಾಗಿ ಕ್ಷಮೆ ಕೋರಿದ ಸಚಿವೆ ಕೊಂಡ ಸುರೇಖಾ

author-image
AS Harshith
Updated On
ನಟಿ ಸಮಂತಾ ಬಗ್ಗೆ ವಿವಾದಾತ್ಮಕ ಹೇಳಿಕೆ.. ತಪ್ಪಿನ ಅರಿವಾಗಿ ಕ್ಷಮೆ ಕೋರಿದ ಸಚಿವೆ ಕೊಂಡ ಸುರೇಖಾ
Advertisment
  • ಸಮಂತಾ ಡಿವೋರ್ಸ್​ ಬಗ್ಗೆ ಸಚಿವೆಯ ವಿವಾದಾತ್ಮಕ ಹೇಳಿಕೆ
  • ಕೊಂಡಾ ಸುರೇಖಾ ಹೇಳಿಕೆಯಿಂದ ಕೋಪಗೊಂಡ ಅಕ್ಕಿನೇನಿ ಕುಟುಂಬ
  • ಕೆಟಿಆರ್ ಕೂಡ ಕ್ಷಮಾಪಣೆ ಕೇಳಬೇಕು ಎಂದ ತೆಲಂಗಾಣದ ಅರಣ್ಯ ಸಚಿವೆ

ಟಾಲಿವುಡ್​ ನಟಿ ಸಮಂತಾ ರುತ್​ ಪ್ರಭು ಮತ್ತು ಮಾಜಿ ಪತಿ ಅಕ್ಕಿನೇನಿ ನಾಗಚೈತನ್ಯ ಡಿವೋರ್ಸ್​ ವಿಚಾರವಾಗಿ ತೆಲಂಗಾಣದ ಅರಣ್ಯ ಸಚಿವೆ ಕೊಂಡಾ ಸುರೇಖಾ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಆದರೀಗ ತಾನಾಡಿದ ಹೇಳಿಕೆ ಕುರಿತು ಕ್ಷಮೆ ಕೇಳಿದ್ದಾರೆ.

Advertisment

ಸಚಿವೆ ಕೊಂಡಾ ಸುರೇಖಾರವರು ಮಾಧ್ಯಮದ ಮುಂದೆ, ಸಮಂತಾ ಡಿವೋರ್ಸ್​ಗೆ ತೆಲಂಗಾಣ ಮಾಜಿ ಸಿಎಂ ಕೆಸಿಆರ್‌ ಪುತ್ರ ಮಾಜಿ ಸಚಿವ ಕೆಟಿ ರಾಮರಾವ್ ಕಾರಣ ಅಂತ ಹೇಳಿದ್ದರು. ಈ ವಿವಾದಾತ್ಮಕ ಹೇಳಿಕೆ ನಟಿ ಸಮಂತಾರಿಗೆ ಬೇಸರ ತರಿಸಿದ್ದಲ್ಲದೆ, ಆಕ್ಷೇಪ ವ್ಯಕ್ತಪಡಿಸಿದ್ದರು. ಅತ್ತ ಅಕ್ಕಿನೇನಿ ಕುಟುಂಬಕ್ಕೂ ಅಚ್ಚರಿಯ ಈ ಹೇಳಿಕೆ ಕಾರಣವಾಗಿತ್ತು. ಆದರೀಗ ಸುರೇಖಾ ತಾನಾಡಿದ ಮಾತನ್ನು ವಾಪಸ್​​ ಹಿಂಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ದಯವಿಟ್ಟು ನಿಮ್ಮ ರಾಜಕೀಯ ಜಗಳದಿಂದ ನನ್ನ ಹೆಸರು ಹೊರಗಿಡಿ.. ಸಚಿವೆಯ ವಿವಾದಿತ ಹೇಳಿಕೆಗೆ ನಟಿ ಸಮಂತಾ ಬೇಸರ

ಸಚಿವೆ ಸುರೇಖಾ ಈ ಬಗ್ಗೆ ಮಾತನಾಡಿದ್ದು, ನಾನು ನಟಿ ಸಮಂತಾ, ನಾಗಾರ್ಜುನ ಕುಟುಂಬಕ್ಕೆ ಮಾತ್ರ ಕ್ಷಮೆ ಕೇಳುತ್ತೇನೆ. ಆದರೆ, ನನ್ನ ವಿರುದ್ಧ ಬಿಆರ್‌ಎಸ್ ನಾಯಕರು ನಿಂದನಾತ್ಮಕ ಹೇಳಿಕೆ ನೀಡಿದ್ದಾರೆ. ಇದಕ್ಕೆ ಕೆಟಿಆರ್ ಕೂಡ ಕ್ಷಮಾಪಣೆ ಕೇಳಬೇಕು ಎಂದ ತೆಲಂಗಾಣದ ಅರಣ್ಯ ಸಚಿವೆ ಹೇಳಿದ್ದಾರೆ.

Advertisment

ಇದನ್ನೂ ಓದಿ: ಯುವತಿಯನ್ನು ಇಸ್ಲಾಂಗೆ ಮತಾಂತರಿಸಿ ಮದ್ವೆಯಾದ Bigg Boss​ ಸ್ಪರ್ಧಿ! ಸಹೋದರಿಯೇ ಬಿಚ್ಚಿಟ್ಟ ಶಾಕಿಂಗ್​ ಮಾಹಿತಿ

ನಾನು ನಿನ್ನೆ ಭಾವೋದ್ವೇಗಕ್ಕೊಳಗಾಗಿ ಹೇಳಿಕೆ ನೀಡಿದ್ದೆ. ನನಗೆ ಯಾರ ವಿರುದ್ಧವೂ ವೈಯಕ್ತಿಕ ದ್ವೇಷವಿಲ್ಲ. ನಾನು ಯಾರಿಗೂ ನೋವು ಉಂಟು ಮಾಡಲ್ಲ ಎಂದ ಕೊಂಡ ಸುರೇಖಾ ಹೇಳಿದ್ದಾರೆ.

ಸಮಂತಾ ಆಕ್ಷೇಪ

ಸಚಿವೆಯ ಹೇಳಿಕೆಗೆ ನಟಿ ಸಮಂತಾ ಆಕ್ಷೇಪ ವ್ಯಕ್ತಪಡಿಸಿದ್ದರು. ನನ್ನ ಡಿವೋರ್ಸ್ ಪರಸ್ಪರ ಒಪ್ಪಿಗೆಯಿಂದ ಆಗಿದೆ. ಡಿವೋರ್ಸ್​ನಲ್ಲಿ ಯಾವುದೇ ರಾಜಕೀಯ ಷಡ್ಯಂತ್ರ ಇಲ್ಲ. ದಯವಿಟ್ಟು ರಾಜಕೀಯ ಜಗಳದಿಂದ ನನ್ನ ಹೆಸರನ್ನು ಹೊರಗಿಡಿ ಅಂತ ಇನ್​​ಸ್ಟಾಗ್ರಾಮ್​ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment