newsfirstkannada.com

ಕೋಲಾರ ಟಿಕೆಟ್ ಬಿಜೆಪಿ ಕೈತಪ್ಪುವುದು ಬಹುತೇಕ ಪಕ್ಕಾ; ನಡ್ಡಾ ಬಳಿ ಬೇಸರ ಹೊರ ಹಾಕಿದ್ರಾ ಮುನಿಸ್ವಾಮಿ..?

Share :

Published March 23, 2024 at 7:02am

    ಕೋಲಾರ ಕ್ಷೇತ್ರ ಜೆಡಿಎಸ್​ಗೆ ಬಿಟ್ಟು ಕೊಡಬೇಡಿ ಎಂದು ಮನವಿ

    ಜೆಡಿಎಸ್ ಶಾಸಕರು ಇದ್ದರೂ ಎಂಪಿ ಸ್ಥಾನ ಗೆಲ್ಲಲು ಸಾಧ್ಯವಾಗಿಲ್ಲ

    ಬಿಜೆಪಿ ಗೆಲ್ಲಲು ಈ ಬಾರಿ ಹೆಚ್ಚು ಅವಕಾಶಗಳಿವೆ- ಮುನಿಸ್ವಾಮಿ ಮನವಿ

ಲೋಕಸಭೆ ಚುನಾವಣೆಗೆ ಮುಹೂರ್ತ ಫಿಕ್ಸ್​ ಆಗಿದೆ. ಬಿಜೆಪಿ ಮತ್ತು ಕಾಂಗ್ರೆಸ್​ ಎರಡೂ ರಾಷ್ಟ್ರೀಯ ಪಕ್ಷಗಳು ಅಧಿಕಾರದ ಗದ್ದುಗೆಗೇರಲು ತಂತ್ರ-ರಣತಂತ್ರ ರೂಪಿಸುತ್ತಿದೆ. ಆದ್ರೆ, ಕೆಲವೊಂದು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆಯ ಕಗ್ಗಂಟುಗಳು ಇನ್ನೂ ಬಗೆಹರಿದಿಲ್ಲ, ಕೋಲಾರಕ್ಕಾಗಿ ಜೆಡಿಎಸ್​, ಬಿಜೆಪಿ ಮಧ್ಯೆ ಹಗ್ಗಜಗ್ಗಾಟ ನಡೆದಿತ್ತು. ಅಂತಿಮವಾಗಿ ಕೋಲಾರದ ಮೈತ್ರಿ ಟಿಕೆಟ್​ ಜೆಡಿಎಸ್​ ಪಾಲಾಗೋದು ಪಕ್ಕಾ ಆಗಿದೆ.

ಲೋಕಸಭಾ ಚುನಾವಣೆಗೆ ಕರ್ನಾಟಕದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡಿವೆ. ಮೈತ್ರಿ ಧರ್ಮದಲ್ಲಿ ಜೆಡಿಎಸ್ ಪಕ್ಷಕ್ಕೆ ಈಗಾಗಲೇ ಬಿಜೆಪಿ ಹೈಕಮಾಂಡ್ 2 ಕ್ಷೇತ್ರಗಳನ್ನು ಬಿಟ್ಟುಕೊಟ್ಟಿದೆ. ಆದ್ರೆ, ಜೆಡಿಎಸ್ ನಾಲ್ಕೈದು ಕೇಳಿರುವುದರಲ್ಲಿ ಕೇವಲ ಎರಡು ಕೊಟ್ಟರೆ ಹೇಗೆ ಎಂದು ಅಸಮಾಧಾನ ಹೊರಹಾಕಿದ್ದು, ಕೋಲಾರ ಕ್ಷೇತ್ರವನ್ನಾದರೂ ಕೊಡಿ ಎಂದು ಬೇಡಿಕೆ ಇಟ್ಟಿತ್ತು, ಈ ಸಂಬಂಧ ಜೆಡಿಎಸ್ ಮತ್ತು ಬಿಜೆಪಿ ನಡುವೆ ಹಗ್ಗಜಗ್ಗಾಟ ನಡೆದಿದು, ಸಂಸದ ಮುನಿಸ್ವಾಮಿ ಕಳೆದ 4 ದಿನಗಳಿಂದ ದೆಹಲಿಯಲ್ಲಿ ಬೀಡುಬಿಟ್ಟು ವರಿಷ್ಠರ ಬಳಿ ಕ್ಷೇತ್ರ ಉಳಿಸಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ರು.

ಕ್ಷೇತ್ರ ಬಿಜೆಪಿ ಉಳಿಸಿಕೊಳ್ಳಬೇಕು ಎಂದು ಜೆ.ಪಿ.ನಡ್ಡಾರಿಗೆ ಮನವಿ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಭೇಟಿಯಾದ ಮುನಿಸ್ವಾಮಿ, ಸುಮಾರು ಅರ್ಧ ಗಂಟೆ ಕಾಲ ಚರ್ಚೆ ನಡೆಸಿದ್ರು.. ಕೋಲಾರ ಕ್ಷೇತ್ರ ಜೆಡಿಎಸ್​ಗೆ ಬಿಟ್ಟು ಕೊಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಕೋಲಾರ ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರು ಇದ್ದರೂ ಎಂಪಿ ಸ್ಥಾನ ಗೆಲ್ಲಲು ಸಾಧ್ಯವಾಗಿಲ್ಲ. ಈ ಬಾರಿ ಬಿಜೆಪಿ ಗೆಲ್ಲಲು ಹೆಚ್ಚು ಅವಕಾಶಗಳಿವೆ. ಎಸ್​ಸಿ ಬಲ ಸಮುದಾಯದಿಂದ ದಕ್ಷಿಣ ಭಾರತದಲ್ಲಿ ಇರೋದು ತಾವೊಬ್ಬರೇ. ಹೀಗಾಗಿ ಕ್ಷೇತ್ರವನ್ನು ಬಿಜೆಪಿ ಉಳಿಸಿಕೊಳ್ಳಬೇಕು ಎಂದು ಜೆ.ಪಿ.ನಡ್ಡಾರಿಗೆ ಮನವಿ ಮಾಡಿದ್ರು.

ಇದನ್ನೂ ಓದಿ‘ಮಂಡ್ಯದಿಂದ ಸುಮಲತಾ ಸೋಲೋದು ಗ್ಯಾರಂಟಿ’-ಬಿಜೆಪಿ ಆಂತರಿಕ ವರದಿಯಲ್ಲಿ ಅಚ್ಚರಿ ಸತ್ಯ!

ಜೆಡಿಎಸ್​ಗೆ ಕೋಲಾರ ಟಿಕೆಟ್​.. ಮುನಿಸ್ವಾಮಿ ಮಾಹಿತಿ
ರಾಷ್ಟ್ರೀಯ ಅದ್ಯಕ್ಷರೊಂದಿಗೆ ಮುನಿಸ್ವಾಮಿ 15 ನಿಮಿಷಗಳ ಕಾಲ‌ ಮಾತುಕತೆ ನಡೆಸಿದ್ದಾರೆ. ಈ ವೇಳೆ ಮುನಿಸ್ವಾಮಿಗೆ ಟಿಕೆಟ್​ ಮಿಸ್​ ಆಗೋ ಸುಳಿವು ಸಿಕ್ಕಿದೆ.

ಜೆಡಿಎಸ್ ಮೈತ್ರಿಯಿಂದಾಗಿ ನಿಮಗೆ ಕೋಲಾರ ಟಿಕೆಟ್ ತಪ್ಪಿದೆ. ಟಿಕೆಟ್​ ತಪ್ಪಿದರೂ ಬಿಜೆಪಿ ಪಕ್ಷ ಯಾವತ್ತೂ ನಿಮ್ಮೊಂದಿಗೆ ಇದೆ. ಸೂಕ್ತ ಸಮಯದಲ್ಲಿ ಸರಿಯಾದ ಸ್ಥಾನಮಾನ‌ವನ್ನು ಪಕ್ಷ ನೀಡಲಿದೆ ಎಂದು ಸಂಸದ ಮುನಿಸ್ವಾಮಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಭರವಸೆ ನೀಡಿದ್ದಾರೆ. ಈ ಮಾಹಿತಿಯನ್ನು ಖುದ್ದು ಮುನಿಸ್ವಾಮಿಯವರೇ ನ್ಯೂಸ್​ಫಸ್ಟ್​ಗೆ ನೀಡಿದ್ದಾರೆ.

ಒಟ್ಟಾರೆ, ನಿರೀಕ್ಷೆಯಂತೆ ಬಿಜೆಪಿ ಹೈಕಮಾಂಡ್, ಕೋಲಾರ ಕ್ಷೇತ್ರವನ್ನು ಜೆಡಿಎಸ್​​ಗೆ ಬಿಟ್ಟುಕೊಟ್ಟು ಕೊಡೋದು ಕನ್ಫರ್ಮ್​ ಆಗಿದೆ. ಹೀಗಾಗಿ ಜೆಡಿಎಸ್​ನಿಂದ ಯಾರು ಸ್ಪರ್ಧೆ ಮಾಡುತ್ತಾರೆ ಎನ್ನುವುದೇ ಕುತೂಹಲ ಮೂಡಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೋಲಾರ ಟಿಕೆಟ್ ಬಿಜೆಪಿ ಕೈತಪ್ಪುವುದು ಬಹುತೇಕ ಪಕ್ಕಾ; ನಡ್ಡಾ ಬಳಿ ಬೇಸರ ಹೊರ ಹಾಕಿದ್ರಾ ಮುನಿಸ್ವಾಮಿ..?

https://newsfirstlive.com/wp-content/uploads/2024/03/MUNISWAMY.jpg

Load More