newsfirstkannada.com

ಹಾಸನ ಸೆಕ್ಸ್​ ಸ್ಕ್ಯಾಂಡಲ್​​​ ಕೇಸಲ್ಲಿ ನಿಜವಾಗ್ಲೂ ಪ್ರಜ್ವಲ್​ಗೆ ಶಿಕ್ಷೆ ಆಗುತ್ತಾ? ನಿಜಕ್ಕೂ ಸಿಕ್ಕಿ ಬೀಳೋದ್ಯಾರು?

Share :

Published May 1, 2024 at 8:56pm

  ಹೊಳೆನರಸೀಪುರದಲ್ಲಿ ದಾಖಲಾದ FIRನಲ್ಲಿ ಪ್ರಜ್ವಲ್‌ 2ನೇ ಆರೋಪಿ

  ವೈರಲ್‌ ವಿಡಿಯೋದಲ್ಲಿರೋ ಸಂತ್ರಸ್ತೆಯರಲ್ಲಿ ಯಾರೂ ದೂರು ನೀಡಿಲ್ಲ

  ನೈತಿಕವಾಗಿ ಪ್ರಜ್ವಲ್‌ ರೇವಣ್ಣಗೆ ಇದು ಬಹುದೊಡ್ಡ ಹೊಡೆತ ಆದರೆ..

ಹಾಸನ ಅಶ್ಲೀಲ ವಿಡಿಯೋ ಹಗರಣದಲ್ಲಿ ಈಗಾಗಲೇ ತನಿಖೆಗೆ ಎಸ್‌ಐಟಿ ರಚನೆಯಾಗಿದೆ. SIT ಅಧಿಕಾರಿಗಳು ಪ್ರಕರಣದಲ್ಲಿ ತನಿಖೆಯನ್ನೂ ಆರಂಭಿಸಿದ್ದಾರೆ. ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ನ ಆಧಾರದಲ್ಲಿ ತನಿಖೆ ಆರಂಭವಾಗಿದೆ. ಆದ್ರೆ ಈ ಪ್ರಕರಣದಲ್ಲಿ ನಿಜಕ್ಕೂ ಸಂಕಷ್ಟಕ್ಕೀಡಾಗೋರು ಯಾರು ಅನ್ನೋದೇ ಪ್ರಶ್ನೆ. ಯಾಕಂದ್ರೆ ಇಲ್ಲಿ ಪ್ರಜ್ವಲ್‌ಗಿಂತಲೂ ದೊಡ್ಡ ಅಪರಾಧಿಗಳಾಗಿ ಕಾಣ್ತಿರೋದು ವಿಡಿಯೋ ಅನ್ನು ಹರಿಬಿಟ್ಟವರು.

ಇದನ್ನೂ ಓದಿ: ಹಾಸನದ ಬೆನ್ನಲ್ಲೇ ಮತ್ತೊಂದು ಕರ್ಮಕಾಂಡ; ಕಾಂಗ್ರೆಸ್ ಶಾಸಕನದ್ದು ಎನ್ನಲಾದ ಅಶ್ಲೀಲ ವಿಡಿಯೋ ವೈರಲ್‌! 

ಹಾಸನದಲ್ಲಿ ಹರಿದಾಡ್ತಿರೋ ಅಶ್ಲೀಲ ವಿಡಿಯೋ ಹಗರಣದಲ್ಲಿ ಪ್ರಜ್ವಲ್‌ ರೇವಣ್ಣ ಆರೋಪಿಯಾಗಿದ್ದಾರೆ. ಅವರ ವಿರುದ್ಧ ಒಂದು ಎಫ್‌ಐಆರ್‌ ಕೂಡ ದಾಖಲಾಗಿದೆ. ಆದ್ರೆ ದಾಖಲಾಗಿರೋ ಎಫ್‌ಐಆರ್‌ನಲ್ಲಿ ಪ್ರಜ್ವಲ್‌ ರೇವಣ್ಣ 2ನೇ ಆರೋಪಿ. ಮಾಜಿ ಸಚಿವ ಹೆಚ್‌.ಡಿ ರೇವಣ್ಣ ಅವರನ್ನು ಮೊದಲ ಆರೋಪಿ ಅಂತ ಹೆಸರಿಸಲಾಗಿದೆ. ಅಶ್ಲೀಲ ವಿಡಿಯೋ ಹರಿಬಿಟ್ಟ ಆರೋಪದಡಿ ನವೀನ್‌ಗೌಡ ಅನ್ನೋ ಕಾಂಗ್ರೆಸ್‌ ಕಾರ್ಯಕರ್ತನ ಮೇಲೂ ಮತ್ತೊಂದು ಎಫ್‌ಐಆರ್‌ ದಾಖಲಾಗಿದೆ. ದಾಖಲಾಗಿರೋ ಕೇಸ್‌ಗಳ ಪೈಕಿ ನಿಜವಾಗಿಯೂ ಅಪರಾಧಿಗಳು ಯಾರು ಅನ್ನೋದೇ ಪ್ರಶ್ನೆ.

ವಿಡಿಯೋ ಪ್ರಕರಣದಲ್ಲಿ ಪಾರಾಗ್ತಾರಾ ಪ್ರಜ್ವಲ್‌ ರೇವಣ್ಣ?
ಅಶ್ಲೀಲ ವಿಡಿಯೋ ಹರಿಬಿಟ್ಟವರಿಗೆ ಕಾನೂನು ಕುಣಿಕೆ ಸಾಧ್ಯತೆ

ಹಾಸನದಲ್ಲಿ ಹರಿದಾಡ್ತಿರೋ ಅಶ್ಲೀಲ ವಿಡಿಯೋ ಹಗರಣದಲ್ಲಿ ಸಂಸದ ಪ್ರಜ್ವಲ್‌ ರೇವಣ್ಣರ ವಿರುದ್ಧ ಆರೋಪ ಮಾಡಲಾಗುತ್ತಿದೆ. ನೈತಿಕವಾಗಿ ಪ್ರಜ್ವಲ್‌ ರೇವಣ್ಣಗೆ ಇದು ಬಹುದೊಡ್ಡ ಹೊಡೆತವೇ ಆದ್ರೂ ಕಾನೂನಿನ ಅಡಿ ಸಂಕಷ್ಟ ಎದುರಾಗೋ ಸಾಧ್ಯತೆ ಬಹಳ ಕ್ಷೀಣ. ಯಾಕಂದ್ರೆ ಪ್ರಜ್ವಲ್‌ ವಿರುದ್ಧ ವಿಡಿಯೋದಲ್ಲಿರೋ ಯಾವ ಸಂತ್ರಸ್ತೆಯರೂ ದೂರನ್ನೇ ದಾಖಲಿಸಿಲ್ಲ.

ಪ್ರಜ್ವಲ್‌ ರೇವಣ್ಣ ಸೇಫ್‌?

 • ದಾಖಲಾಗಿರೋ ಎಫ್‌ಐಆರ್‌ನಲ್ಲಿ ಪ್ರಜ್ವಲ್‌ 2ನೇ ಆರೋಪಿ
 • ಅಶ್ಲೀಲ ವಿಡಿಯೋಗೂ ಎಫ್‌ಐಆರ್‌ಗೂ ಸಂಬಂಧವಿಲ್ಲ
 • ನೂರಾರು ವಿಡಿಯೋಗಳಲ್ಲಿರೋ ಸಂತ್ರಸ್ತೆಯರೇ ಬೇರೆ
 • ವಿಡಿಯೋದಲ್ಲಿರೋ ಸಂತ್ರಸ್ತೆಯರಲ್ಲಿ ಯಾರೂ ದೂರು ನೀಡಿಲ್ಲ
 • ಪ್ರಜ್ವಲ್‌ ರೇವಣ್ಣ ಈಗಲೂ ಸೇಫ್‌ ಝೋನ್‌ನಲ್ಲೇ ಇದ್ದಾರೆ
 • ಹೇಳಿಕೆ ಆಧಾರದಲ್ಲಿ ಎಫ್‌ಐಆರ್‌ ದಾಖಲು, ಸಾಕ್ಷಿಗಳಿಲ್ಲ
 • ಎಫ್‌ಐಆರ್‌ನಲ್ಲಿ ಅತ್ಯಾಚಾರಕ್ಕೆ ಸಂಬಂಧಿಸಿದ ಸೆಕ್ಷನ್‌ ಹಾಕಿಲ್ಲ
 • ಬೆದರಿಕೆ, ಅಸಭ್ಯ ವರ್ತನೆ, ಕಿರುಕುಳದಂತಹ ಸೆಕ್ಷನ್‌ಗಳಡಿ ಕೇಸ್‌
 • ಸುಲಭವಾಗಿ ಜಾಮೀನು ಪಡೆಯಬಹುದಾದ ಸೆಕ್ಷನ್‌ಗಳಡಿ ಕೇಸ್‌

ಅಶ್ಲೀಲ ವಿಡಿಯೋ ಹರಿಬಿಟ್ಟವರು ಲಾಕ್‌?
ಮಹಿಳೆಯರ ಮೇಲೆ ದೌರ್ಜನ್ಯದ ಆರೋಪ ಒಂದ್ಕಡೆಯಾದ್ರೆ, ವಿಡಿಯೋಗಳನ್ನ ಸಾರ್ವಜನಿಕವಾಗಿ ಹಂಚಿದ್ದು ಕೂಡ ಅಪರಾಧವೇ ಆಗುತ್ತೆ. ಈ ಸಂಬಂಧ ಈಗಾಗಲೇ ನವೀನ್‌ ಗೌಡ ಅನ್ನೋ ಆರೋಪಿ ಮೇಲೆ ಪ್ರಕರಣ ದಾಖಲಾಗಿದೆ. ಆದ್ರೆ ಪೆನ್‌ಡ್ರೈವ್‌ ಮೂಲ ಪ್ರಜ್ವಲ್‌ ರೇವಣ್ಣರ ಮಾಜಿ ಕಾರು ಚಾಲಕ ಕಾರ್ತಿಕ್‌ ಅನ್ನೋದು ಬಯಲಾಗಿದೆ. ಈ ಸಂಬಂಧ ಖುದ್ದು ಕಾರ್ತಿಕ್‌ನಿಂದಲೇ ಹೇಳಿಕೆಯನ್ನೂ ಪಡೆಯಲಾಗಿದೆ. ಆತ ವಕೀಲ ದೇವರಾಜೇಗೌಡರಿಗೆ ಪೆನ್‌ಡ್ರೈವ್‌ ಕೊಟ್ಟಿದ್ದಾಗಿಯೂ ಹೇಳಿದ್ದಾನೆ. ಹೀಗಾಗಿ ಸದ್ಯಕ್ಕೆ ದೇವರಾಜೇಗೌಡ ಹಾಗೂ ಕಾರ್ತಿಕ್‌ ಮೇಲೆ ಅನುಮಾನ ಬಲವಾಗುತ್ತೆ.

ಇದನ್ನೂ ಓದಿ: ಹಾಸನ ಅಶ್ಲೀಲ ವಿಡಿಯೋ ರಿಲೀಸ್​ ಮಾಡಿದ ಕಾರ್ತಿಕ್​ ಮಲೇಷ್ಯಾಗೆ ಹೋದ್ರಾ? HDK ಬಿಚ್ಚಿಟ್ಟ ಸ್ಫೋಟಕ ಮಾಹಿತಿ 

ಪೆನ್‌ಡ್ರೈವ್‌ ಅನ್ನು ಕಾರ್ತಿಕ್‌ ಕಾಂಗ್ರೆಸ್‌ ನಾಯಕರಿಗೂ ಕೊಟ್ಟಿದ್ದಾನೆ ಅಂತ ದೇವರಾಜೇಗೌಡ ಹೇಳ್ತಿದ್ದಾರೆ. ಇದರ ಬಗ್ಗೆ ಕೂಲಂಕುಷ ತನಿಖೆಯ ಅಗತ್ಯವಿದೆ. ಹಾಗೇನಾದ್ರೂ ವಿಡಿಯೋ ಹಂಚಿದವರು ಸಿಕ್ಕಾಕಿಕೊಂಡರೇ ಅವರೂ ಅಪರಾಧಿ ಸ್ಥಾನದಲ್ಲೇ ನಿಲ್ಲಬೇಕಾಗುತ್ತೆ. ಯಾಕಂದ್ರೆ ಕನಿಷ್ಠ ಪರಿಜ್ಞಾನವೂ ಇಲ್ಲದೆ ವಿಡಿಯೋ ಹರಿಬಿಡಲಾಗಿದೆ. ನೂರಾರು ಮಹಿಳೆಯರ ಮಾನಹಾನಿಗೆ ಕಾರಣರಾಗಿದ್ದಾರೆ. ಅದರಲ್ಲೂ ಚುನಾವಣೆಯ ಸಂದರ್ಭದಲ್ಲಿ ವಿಡಿಯೋ ಹರಿಬಿಡಲಾಗಿದೆ. ಪ್ರಜ್ವಲ್‌ ರೇವಣ್ಣರ ವಿರುದ್ಧ ಮುನಿಸಿಗೆ ಅಮಾಯಕ ಮಹಿಳೆಯರ ಮಾನ ಕಳೆಯಲಾಗಿದೆ. ಇದು ಕೂಡ ಘೋರ ಅನ್ಯಾಯ ಆಗಿದ್ದು, ಕಾನೂನಿನ ಸಂಕಷ್ಟದಲ್ಲಿ ಸಿಲುಕಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಾಸನ ಸೆಕ್ಸ್​ ಸ್ಕ್ಯಾಂಡಲ್​​​ ಕೇಸಲ್ಲಿ ನಿಜವಾಗ್ಲೂ ಪ್ರಜ್ವಲ್​ಗೆ ಶಿಕ್ಷೆ ಆಗುತ್ತಾ? ನಿಜಕ್ಕೂ ಸಿಕ್ಕಿ ಬೀಳೋದ್ಯಾರು?

https://newsfirstlive.com/wp-content/uploads/2024/04/siddu-vs-prajju1.jpg

Load More