newsfirstkannada.com

ವಿಧಾನಸೌಧದ ಗೋಪುರವನ್ನು ಗುಂಬಜ್ ಮಾಡಿ ಆಜಾನ್ ಕೂಗ್ತಾರೆ-ಪ್ರತಾಪ್ ಸಿಂಹ

Share :

Published March 6, 2024 at 8:13am

Update March 6, 2024 at 8:55am

  ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಂಸದ ಪ್ರತಾಪ್ ಸಿಂಹ

  ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿದ ವಿಚಾರಕ್ಕೆ ಕಿಡಿಕಾರಿದ್ದಾರೆ

  ಕೊಡಗಿನಲ್ಲಿ ಮಳೆಯರ ಮೇಲೂ ರೌಡಿಶೀಟರ್ ತೆರೆದಿದ್ದಾರೆ ಎಂದ ಸಂಸದ

2023ರ ವಿಧಾನಸಭಾ ಚುನಾವಣಾ ಪ್ರಚಾರದಲ್ಲೇ ಕಾಂಗ್ರೆಸ್‌ಗೆ ಮತ ಹಾಕಿದ್ರೆ ತಾಲಿಬಾನ್ ಸರ್ಕಾರ ಬರುತ್ತೆ ಎಂದು ಮೊದಲೆ ಹೇಳಿದ್ದೆ ಎಂದು ಸಂಸದ ಪ್ರತಾಪ್​ ಸಿಂಹ ಕಿಡಿಕಾರಿದ್ದಾರೆ.

ಮಡಿಕೇರಿಯಲ್ಲಿ ಮಾತನಾಡಿದ ಅವರು.. ವಿಧಾನಸೌಧದಲ್ಲಿ ಈಗ ಪಾಕಿಸ್ತಾನದ ಪರ ಘೋಷಣೆ ಕೂಗ್ತಾರೆ, ಲಜ್ಜೆಗೆಟ್ಟ ಕಾಂಗ್ರೆಸ್ ಅದನ್ನ ಸಮರ್ಥನೆ ಮಾಡಿದ ಹಾಗೆ ಮಾತನಾಡುತ್ತೆ. ರಾಜ್ಯದಲ್ಲಿ ಈಗ ನಡೀತಿರೋದು ಕೇವಲ ಟ್ರೈಲರ್ ಅಷ್ಟೆ, ಲೋಕಸಭಾ ಚುನಾವಣೆಯಲ್ಲಿ ಜನ ಮೈಮರೆತರೆ ಗಂಡಾಂತರವೇ ಬಂದ್ಬಿಡುತ್ತದೆ, ವಿಧಾನಸೌಧದ ಗೋಪುರವನ್ನ ಗುಂಬಜ್ ಮಾಡಿ ಮೈಕ್ ಇಟ್ಟು‌ ಆಜಾನ್ ಕೂಗ್ತಾರೆ ಎಂದು ವಾಗ್ದಾಳಿ ನಡೆಸಿದರು.

ಹಾಗೆಯೇ ಹಿಂದೂ ಕಾರ್ಯಕರ್ತರನ್ನು ಟಾರ್ಗೆಟ್ ಮಾಡ್ತಿರೋದು ಇದೇನು ಹೊಸದಲ್ಲ. ಕಾಂಗ್ರೆಸ್​ ಈ ಹಿಂದೆ ಅಧಿಕಾರದಲ್ಲಿದ್ದಾಗ ಕೊಡಗಿನ ಮಹಿಳೆಯರ ಮೇಲೂ ರೌಡಿಶೀಟರ್ ಹಾಕಿದೆ. ಈಗ ರಾಮಜನ್ಮಭೂಮಿಗಾಗಿ ಹೋರಾಡಿದ್ದ ನಮ್ಮ ಹುಬ್ಬಳ್ಳಿಯ ವ್ಯಕ್ತಿಯನ್ನು ಜೈಲಿಗೆ ಕಳುಹಿಸುವ ಪ್ರಯತ್ನ ಮಾಡ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿಧಾನಸೌಧದ ಗೋಪುರವನ್ನು ಗುಂಬಜ್ ಮಾಡಿ ಆಜಾನ್ ಕೂಗ್ತಾರೆ-ಪ್ರತಾಪ್ ಸಿಂಹ

https://newsfirstlive.com/wp-content/uploads/2024/03/paratap.jpg

Load More