newsfirstkannada.com

ಕುಮಾರಸ್ವಾಮಿ ಕಾಲಿಗೆ ನಮಸ್ಕರಿಸಿ.. ‘ಕಷ್ಟದ ಕಾಲದಲ್ಲಿ ನಿಂತ ಕುಮಾರಣ್ಣ’ಗೆ ಧನ್ಯವಾದ ಎಂದ ಪ್ರತಾಪ್ ಸಿಂಹ..!

Share :

Published January 12, 2024 at 11:41am

Update January 12, 2024 at 11:46am

  ಬಿಡದಿಯ ಫಾರ್ಮ್​​ಹೌಸ್​​ನಲ್ಲಿ ಹೆಚ್​​ಡಿಕೆ ಭೇಟಿ

  ‘ಕಷ್ಟದ ಕಾಲಿಗೆ ನಿಂತ ಕುಮಾರಣ್ಣ’ ಎಂದ ಪ್ರತಾಪ್ ಸಿಂಹ

  ಲೋಕಸಭೆ ಚುನಾವಣೆ ಸಂಬಂಧ ಇಬ್ಬರು ಮಾತುಕತೆ

ರಾಮನಗರ: ಬಿಡದಿಯ ಫಾರ್ಮ್​​ ಹೌಸ್​​ನಲ್ಲಿ ಹೆಚ್‌.ಡಿ.ಕುಮಾರಸ್ವಾಮಿಯನ್ನು ಸಂಸದ ಪ್ರತಾಪ್ ಸಿಂಹ ಭೇಟಿಯಾಗಿದ್ದಾರೆ. ಪ್ರತಾಪ್ ಸಿಂಹ ಅವರ ಭೇಟಿ ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿದೆ.

ಕುಮಾರಸ್ವಾಮಿಯನ್ನು ಭೇಟಿ ಮಾಡಿರುವ ಪ್ರತಾಪ್ ಸಿಂಹ, ಕಷ್ಟಕಾಲದಲ್ಲಿ ಸತ್ಯಸಂಗತಿಯನ್ನು ಜನರ ಮುಂದಿಟ್ಟು ಬೆನ್ನಿಗೆ ನಿಂತ ಕುಮಾರಣ್ಣನಿಗೆ ಕುಮಾರಸ್ವಾಮಿಗೆ ಧನ್ಯವಾದ ತಿಳಿಸಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ರಾಜಕೀಯ ಚರ್ಚೆಗಳ ಪ್ರಕಾರ.. ಇನ್ನೇನು ಕೆಲವೇ ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಜೆಡಿಎಸ್-ಬಿಜೆಪಿ ಮೈತ್ರಿ ಹಿನ್ನೆಲೆಯಲ್ಲಿ ಕುಮಾರಸ್ವಾಮಿಯನ್ನು ಭೇಟಿ ಮಾಡೋದು ಪ್ರತಾಪ್ ಸಿಂಹಗೆ ಅನಿವಾರ್ಯ ಎನ್ನಲಾಗುತ್ತಿದೆ. ಯಾಕಂದರೆ ಸಿಎಂ ಸಿದ್ದರಾಮಯ್ಯ ತವರು ಕ್ಷೇತ್ರದಲ್ಲಿ ಎದುರಾಳಿಗಳನ್ನು ಎದುರಿಸಲು ಪ್ರತಾಪ್ ಸಿಂಹಗೆ ಕುಮಾರಸ್ವಾಮಿ ಬೇಕಿದೆ.

ಭೇಟಿ ವೇಳೆ ಇದೇ ವಿಚಾರದ ಬಗ್ಗೆ ಕುಮಾರಸ್ವಾಮಿ ಪ್ರತಾಪ್ ಸಿಂಹಗೆ ಸಲಹೆ ನೀಡಿದ್ದಾರೆ. ಈ ಹಿಂದೆ ಮಾಜಿ ಪ್ರಧಾನಿ ದೇವೇಗೌಡರನ್ನು ಪ್ರತಾಪ್ ಸಿಂಹ ಭೇಟಿ ಮಾಡಿದ್ದರು. ಮೈತ್ರಿ ಬೆನ್ನಲ್ಲೇ 2024 ರ ಲೋಕಸಭಾ ಚುನಾವಣೆಯಲ್ಲಿ ಮೋದಿಯನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಕುಮಾರಸ್ವಾಮಿ ರಣತಂತ್ರ ರೂಪಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕುಮಾರಸ್ವಾಮಿ ಕಾಲಿಗೆ ನಮಸ್ಕರಿಸಿ.. ‘ಕಷ್ಟದ ಕಾಲದಲ್ಲಿ ನಿಂತ ಕುಮಾರಣ್ಣ’ಗೆ ಧನ್ಯವಾದ ಎಂದ ಪ್ರತಾಪ್ ಸಿಂಹ..!

https://newsfirstlive.com/wp-content/uploads/2024/01/HDK-PRATAP.jpg

Load More