newsfirstkannada.com

BREAKING: ನಿಜವಾಯ್ತು ನ್ಯೂಸ್ ಫಸ್ಟ್ ವರದಿ.. ಮಂಡ್ಯ ಚುನಾವಣೆಯಿಂದ ಹಿಂದೆ ಸರಿದ ಸುಮಲತಾ ಅಂಬರೀಶ್‌

Share :

Published April 3, 2024 at 1:08pm

Update April 3, 2024 at 1:23pm

    ನನ್ನ ಕಾರ್ಯಕರ್ತರು, ಅಭಿಮಾನಿಗಳಿಗೆ ಶಕ್ತಿ ತುಂಬಲು ಈ ನಿರ್ಧಾರ

    ಮಂಡ್ಯದಲ್ಲಿ ಪಕ್ಷೇತರ ಸ್ಪರ್ಧೆ ಬೇಡ, ಕಾಂಗ್ರೆಸ್‌ಗೆ ನನ್ನ ಅವಶ್ಯಕತೆ ಇಲ್ಲ

    ಕಾಂಗ್ರೆಸ್ ಪಕ್ಷದ ಕಡೆ ಹೋಗುವುದಿಲ್ಲ ಎಂದ ಸಂಸದೆ ಸುಮಲತಾ ಅಂಬರೀಶ್

ನ್ಯೂಸ್ ಫಸ್ಟ್ ಚಾನೆಲ್ ಮಾಡಿದ್ದ ವರದಿಯೇ ನಿಜವಾಗಿದೆ. ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಈ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡದೇ ಬಿಜೆಪಿ ಸೇರುವುದಾಗಿ ಘೋಷಣೆ ಮಾಡಿದ್ದಾರೆ.

ಸಂಸದೆ ಸುಮಲತಾ ಅಂಬರೀಶ್ ಅವರು ಮಂಡ್ಯದಲ್ಲೇ ತಮ್ಮ ಮುಂದಿನ ರಾಜಕೀಯ ನಡೆ ಏನು ಅನ್ನೋ ಮಹತ್ವದ ನಿರ್ಧಾರವನ್ನು ತಿಳಿಸಿದ್ದಾರೆ. ಬೆಂಬಲಿಗರ ಸಭೆಯಲ್ಲಿ ಭಾವುಕರಾಗಿಯೇ ಮಾತನಾಡಿದ ಅವರು ನಾನು ಈ‌ ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡ್ತಿಲ್ಲ. ಆದರೆ ಮಂಡ್ಯ ಬಿಟ್ಟು ನಾನು‌ ಹೋಗಲ್ಲ. ಕಾಂಗ್ರೆಸ್ ಪಕ್ಷದ ಕಡೆ ಹೋಗುವುದಿಲ್ಲ ಎಂದು ಸುಮಲತಾ ಅಂಬರೀಶ್ ಗುಡುಗಿದ್ದಾರೆ.

ಭಾಷಣದ ವೇಳೆ ಸಂಸದೆ‌ ಸುಮಲತಾ ಭಾವುಕರಾಗಿದ್ದು, ಅಂಬರೀಶ್ ಇದ್ದಲ್ಲಿಯೇ‌‌ ನನ್ನ ಬೆನ್ನು ತಟ್ಟುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಹುಚ್ಚೇಗೌಡರ ಸೊಸೆಯಾಗಿ ಮತ ಕೇಳಿದ್ದೆ. ಹುಚ್ಚೇಗೌಡ್ರು ಹೆಮ್ಮೆಯಿಂದ ಸೊಸೆಗೆ ಆಶೀರ್ವಾದ ಮಾಡ್ತಿದ್ದಾರೆ. ಹುಚ್ಚೇಗೌಡರ ಸೊಸೆಯಾಗಿ ಸ್ವಾಭಿಮಾನ‌ ಉಳಿಸಿಕೊಂಡಿದ್ದೇನೆ. ನನ್ನ ಕಾರ್ಯಕರ್ತರು, ಅಭಿಮಾನಿಗಳಿಗೆ ಶಕ್ತಿ ತುಂಬಲು ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ಹೇಳಿದರು.

ಇನ್ನು, ಈ ಬಾರಿ ಪಕ್ಷೇತರವಾಗಿ ಸ್ಪರ್ಧಿಸುವಾದ ಬೇಡ ಎಂದು ತೀರ್ಮಾನ ಕೈಗೊಂಡಿದ್ದೇನೆ. ಪಕ್ಷೇತರ ಸಂಸದೆಯಾದರೂ 4 ಸಾವಿರ ಕೋಟಿ ರೂಪಾಯಿ ಅನುದಾನ ಕೊಟ್ಟಿದ್ದು ಬಿಜೆಪಿ. ಪ್ರತಿ ವಿಷಯದಲ್ಲೂ ನನ್ನನ್ನು ವಿಶ್ವಾಸಕ್ಕೆ ಪಡೆದರೂ ನಿಮ್ಮ ನಾಯಕತ್ವ ಬೇಕು ಎಂದು ಸ್ವತಃ ಪ್ರಧಾನಿ ನರೇಂದ್ರ ಮೋದಿ ನನಗೆ ಹೇಳಿದ್ದರು. ನಾಯಕತ್ವ ಬೆಳೆಸೋ ಗುಣ ಬಿಜೆಪಿಯಲ್ಲಿದೆ. ಭಾರತವನ್ನ ಇಡೀ ಪ್ರಪಂಚ ತಿರುಗಿ ನೋಡುವಂತೆ ಮೋದಿ ಮಾಡಿದ್ದಾರೆ. ಒಂದೇ ಒಂದು ಕಳಂಕ ಅವರ ಮೇಲಿಲ್ಲ. ಅವರ ನಾಯಕತ್ವದಲ್ಲಿ ಮುನ್ನಡೆಯುತ್ತೇನೆ. ನಾನು ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿಲ್ಲ. ಆದರೆ ಮಂಡ್ಯವನ್ನ ಬಿಡುವ ಪ್ರಶ್ನೆ ಇಲ್ಲ ಎಂದು ಸುಮಲತಾ ಅಂಬರೀಶ್ ಹೇಳಿದ್ದಾರೆ.

ಇದನ್ನೂ ಓದಿ: ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಸ್ಪರ್ಧೆ ಮಾಡ್ತಾರಾ? ಇಲ್ವಾ? ನ್ಯೂಸ್​ಫಸ್ಟ್​​ಗೆ ಸಿಕ್ಕಿದೆ ಎಕ್ಸ್​​ಕ್ಲೂಸಿವ್ ಮಾಹಿತಿ..!

ಕಾಂಗ್ರೆಸ್ ಮೇಲೆ ಸುಮಲತಾ ಕಿಡಿ!

ಇದೇ ವೇಳೆ ಕಾಂಗ್ರೆಸ್ ಮೇಲೆ ಕಿಡಿಕಾರಿದ ಸುಮಲತಾ ಅಂಬರೀಶ್ ಅವರು ಗೌರವ ಇಲ್ಲದ ಪಕ್ಷಕ್ಕೆ ಹೋಗುವಂತೆ ಒತ್ತಾಯ ಮಾಡಬೇಡಿ. ನಿನ್ನೆ ಮೊನ್ನೆ ನೋಡಿದ್ದೀರಾ ಕೈ ನಾಯಕರ ಮಾತನ್ನ ಸುಮಲತಾ ಅವಶ್ಯಕತೆ ಇಲ್ಲ ಎಂದಿದ್ದಾರೆ. ಮಂಡ್ಯದ ಗಂಡು ಅಂಬರೀಶ್ ಸ್ವಾಭಿಮಾನಿ. ಗೌರವ‌ ಇಲ್ಲದ ಕಡೆ ಹೋಗಲು ಒತ್ತಾಯ ಮಾಡಬೇಡಿ. ಭವಿಷ್ಯದ ಬಗ್ಗೆ ಚಿಂತೆ ಇಲ್ಲ. ಇವತ್ತು ನಾನು ಸಂಸದೆ, ನಾಳೆ ಇನ್ನೊಬ್ಬರು ಆ ಜಾಗಕ್ಕೆ ಬರ್ತಾರೆ. ಆದ್ರೆ ಈ ಮಣ್ಣಿನ ಸೊಸೆ ಎನ್ನುವ ಸ್ಥಾನ ಯಾರು ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದು ಸುಮಲತಾ ಅಂಬರೀಶ್ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

BREAKING: ನಿಜವಾಯ್ತು ನ್ಯೂಸ್ ಫಸ್ಟ್ ವರದಿ.. ಮಂಡ್ಯ ಚುನಾವಣೆಯಿಂದ ಹಿಂದೆ ಸರಿದ ಸುಮಲತಾ ಅಂಬರೀಶ್‌

https://newsfirstlive.com/wp-content/uploads/2024/04/mandya-Sumalatha-Ambareesh.jpg

Load More