newsfirstkannada.com

ಹೆಚ್​​​ಡಿಕೆಗೆ ಬೆಂಬಲ ನೀಡುವುದೋ? ಸ್ಪರ್ಧೆ ಮಾಡುವುದೋ? ಸುಮಲತಾ ಮುಂದಿನ ನಡೆಯೇನು?

Share :

Published April 2, 2024 at 6:09am

    ಪಕ್ಷೇತರ ಸ್ಪರ್ಧೆ ಅಥವಾ ಜೆಡಿಎಸ್‌ಗೆ ಬೆಂಬಲ ಎರಡೇ ದಾರಿ

    ಸುಮಲತಾ ಮನವೊಲಿಕೆಗೆ ಹೆಚ್​ಡಿಕೆ & ವಿಜಯೇಂದ್ರ ಸರ್ಕಸ್

    ಸಂಸದೆ ಸುಮಲತಾ ಅವಶ್ಯಕತೆಯೇ ಇಲ್ಲ ಎಂದ ಡಿಸಿಎಂ ಡಿಕೆಶಿ

ಮಂಡ್ಯ ಟಿಕೆಟ್ ಹೆಚ್​ಡಿಕೆ ಪಾಲಾಗಿ ಆಯ್ತು. ಕುಮಾರಸ್ವಾಮಿಯೇ ಬಂದು ಸುಮಲತಾ ಬೆಂಬಲ ಕೇಳಿದ್ದೂ ಆಯ್ತು. ಟಿಕೆಟ್ ಕೈ ತಪ್ಪಿರೋದು ಮಂಡ್ಯ ನಂದೇ ಅಂತಿದ್ದ ಸ್ವಾಭಿಮಾನಿ ಸಂಸದೆಗೆ ಖಂಡಿತವಾಗಿಯೂ ಶಾಕ್. ಹೋಗಲಿ ಕಾಂಗ್ರೆಸ್ ಹೋಗೋಣ ಅಂದ್ರೆ ಆ ಬಾಗಿಲು ಕೂಡ ಮುಚ್ಚಿದೆ. ಇನ್ನೇನಿದ್ರೂ ಪಕ್ಷೇತರ ಸ್ಪರ್ಧೆ ಅಥವಾ ಜೆಡಿಎಸ್‌ಗೆ ಬೆಂಬಲ. ಎರಡೇ ದಾರಿ ಉಳಿದಿರೋದು. ಈ ಪೈಕಿ ಯಾವುದನ್ನ ತುಳಿಯುತ್ತಾರೆ ಅನ್ನೋದೇ ಸದ್ಯದ ಕುತೂಹಲ. ಈ ನಡುವೆ ನಾಡಿದ್ದು ಸುಮಲತಾ ಕರೆದಿರುವ ಸಭೆ ಕೂಡ ಮಹತ್ವ ಪಡೆದಿದೆ.

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಅತೀ ಹೆಚ್ಚು ಕುತೂಹಲ ಮೂಡಿಸಿರುವುದು ಮಂಡ್ಯ ಅಖಾಡ. ಮೊದಲು ಸಂಸದೆ ಸುಮಲತಾಗೆ ಬಿಜೆಪಿಯಿಂದ ಟಿಕೆಟ್ ಸಿಗುತ್ತಾ ಇಲ್ವಾ ಅನ್ನೋ ವಿಚಾರಕ್ಕೆ ಭಾರೀ ಕುತೂಹಲ ಕೆರಳಿಸಿತ್ತು. ಇದೀಗ ಹೆಚ್​ಡಿ ಕುಮಾರಸ್ವಾಮಿ ವರ್ಸಸ್​ ಸ್ಟಾರ್ ಚಂದ್ರು ಸ್ಪರ್ಧೆಯಿಂದ ಅಖಾಡ ಹೈವೋಲ್ಟೇಜ್ ಆಗಿ ಪರಿಣಮಿಸಿದೆ. ಈ ನಡುವೆ ಮಂಡ್ಯ ನಂದೇ ಅಂತಿದ್ದ ಸ್ವಾಭಿಮಾನಿ ಸಂಸದೆ ಸುಮಲತಾ ನಡೆ ಮಾತ್ರ ಪ್ರಶ್ನೆಯಾಗಿಯೇ ಉಳಿದಿದೆ.

ಸಂಸದೆ ಸುಮಲತಾ ಅಂಬರೀಶ್ ರಾಜಕೀಯ ನಡೆ​ಯೇ ಸದ್ಯ ಕುತೂಹಲ ಮೂಡಿಸಿದೆ. ಮಂಡ್ಯ ಟಿಕೆಟ್ ಮೈತ್ರಿ ಅಭ್ಯರ್ಥಿ ಪಾಲಾಗಿದ್ದು, ಮುಂದಿನ ದಾರಿ ಯಾವುದು ಅನ್ನೋದೇ ಅನಿಶ್ಚಿತತೆಯಿಂದ ಕೂಡಿದೆ. ಪಕ್ಷೇತರವಾಗಿ ಸ್ಪರ್ಧೆ ಅಥವಾ ಜೆಡಿಎಸ್‌ಗೆ ಬೆಂಬಲಿಸುವ ಎರಡೇ ದಾರಿ ಅವರ ಬಳಿ ಇದೆ. ಆದ್ರೆ ಪಕ್ಷೇತರ ಸ್ಪರ್ಧೆ ಅಷ್ಟು ಸುಲಭವಾಗಿಲ್ಲ. ಮೊದಲಿನ ಬೆಂಬಲಿಗರ ಪಡೆ ಅವರ ಬಳಿ ಇಲ್ಲ ಅನ್ನೋದು ಅಷ್ಟೇ ಕಟು ವಾಸ್ತವ. ಇತ್ತ ಕೈ ಹಿಡಿಯೋಣ ಅಂದ್ರೆ ಅವರಿಗೆ ಕಾಂಗ್ರೆಸ್ ಬಾಗಿಲು ಕೂಡ ಮುಚ್ಚಿದೆ. ಡಿಕೆ ಮಾತಲ್ಲೇ ಇದು ಸ್ಪಷ್ಟವಾಗುತ್ತದೆ.

ಇಂದು ಅಮಿತ್ ಶಾ‌ ಭೇಟಿಗೆ ಸಂಸದೆ ಸುಮಲತಾ ಸಿದ್ಧತೆ

ಇನ್ನು, ಮೊನ್ನೆ ಸುಮಲತಾರನ್ನು ಭೇಟಿಯಾಗಿ ಹೆಚ್​ಡಿ ಕುಮಾರಸ್ವಾಮಿ ಬೆಂಬಲ ಕೂಡ ಕೇಳಿದ್ದಾರೆ. ಇಂದು ಬೆಂಬಲಿಗರ ಸಭೆ ಕರೆದಿರುವ ಸುಮಲತಾ ಅಂದು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ಆದ್ರೆ ಅದಕ್ಕೂ ಮುನ್ನ ಇಂದು ಅಮಿತ್ ಶಾ‌ ರಾಜ್ಯಕ್ಕೆ ಭೇಟಿ ನೀಡಲಿದ್ದು ಈ ವೇಳೆ ಅವರ ಭೇಟಿಗೆ ಮುಂದಾಗಿದ್ದಾರೆ.

ಅಂಬರೀಷ್‌ ಅವರಿಗೆ ಕಾಂಗ್ರೆಸ್ ಏನು ಮಾಡಿದೆ ಎನ್ನುವುದು ಇಡೀ ದೇಶಕ್ಕೆ ಗೊತ್ತಿದೆ. ಅವರು ಕೊನೆಯುಸಿರು ಬಿಡುವ ವೇಳೆಯಲ್ಲಿ ಏನು ಹೇಳಿದರು ಎಂಬುದು ಗೊತ್ತಿದೆ. ನಾವು ಈಗ ಆ ವಿಚಾರಗಳನ್ನು ಮಾತನಾಡುವುದಿಲ್ಲ. ಅವರು ಕುಂಬಳಕಾಯಿ ಕಳ್ಳ ಎಂದರೆ ಸುಮಲತಾ ಅವರು ಏಕೆ ಹೆಗಲು ಮುಟ್ಟಿ ನೋಡಿಕೊಳ್ಳಬೇಕು? ನಾನು ಸುಮಲತಾ ಅವರ ಸುದ್ದಿಗೆ ಹೋಗಿಲ್ಲ. ಅವರ ಸುದ್ದಿ ನನಗೆ ಅವಶ್ಯಕತೆ ಇಲ್ಲ. ನಾನು ಸುಮಲತಾ ಅವರ ವಿಚಾರಕ್ಕೆ ಇಂದು ಹೋಗಲ್ಲ. ನಾಳೆಯೂ ಹೋಗಲ್ಲ. ನನಗೆ ಅದರ ಅವಶ್ಯಕತೆಯೂ ಇಲ್ಲ. ಅವರ ಬಗ್ಗೆ ನಾನೇಕೆ ತಲೆ ಕೆಡಿಸಿಕೊಳ್ಳಬೇಕು. ಪಕ್ಷದ ಸಿದ್ದಾಂತದ ಬಗ್ಗೆ ಮಾತನಾಡಲಿ, ಉತ್ತರ ಕೊಡುತ್ತೇನೆ.

ಡಿಸಿಎಂ ಡಿಕೆ ಶಿವಕುಮಾರ್

ಇನ್ನು, ನಾನು ವಿಷ ಹಾಕಿದ್ನಾ ಅನ್ನೋ ಸುಮಲತಾ ಮಾತಿಗೆ ಡಿಸಿಎಂ ಡಿಕೆಶಿ ಗರಂ ಆಗಿದ್ದಾರೆ. ಅಲ್ಲದೆ ಸುಮಲತಾ ಅವಶ್ಯಕತೇ ಇಲ್ಲ ಅಂತ ಹೇಳಿದ್ದಾರೆ. ಒಟ್ಟಾರೆ ಇತ್ತ ಸುಮಲತಾ ಮನವೊಲಿಕೆಗೆ ಹೆಚ್​ಡಿಕೆ ಮತ್ತು ವಿಜಯೇಂದ್ರ ಸರ್ಕಸ್ ಮಾಡ್ತಿದ್ದಾರೆ. ಅತ್ತ ಎಲ್ಲಾ ಕಡೆಯಿಂದಲೂ ಸುಮಲತಾಗೆ ಗೇಟ್ ಕ್ಲೋಸ್​ ಆದಂತಿದೆ. ಈ ನಡುವೆ ಇಂದು ಅಮಿತ್ ಶಾ‌ ಭೇಟಿಗೆ ಸುಮಲತಾ ಸಿದ್ಧತೆ ನಡೆಸಿದ್ರೂ ಹೆಚ್ಚಿನ ಬದಲಾವಣೆಯಂತೂ ಆಗೋದಿಲ್ಲ ಅನ್ನೋದು ಸ್ಪಷ್ಟ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೆಚ್​​​ಡಿಕೆಗೆ ಬೆಂಬಲ ನೀಡುವುದೋ? ಸ್ಪರ್ಧೆ ಮಾಡುವುದೋ? ಸುಮಲತಾ ಮುಂದಿನ ನಡೆಯೇನು?

https://newsfirstlive.com/wp-content/uploads/2023/08/Sumalatha-Ambarish.jpg

Load More