/newsfirstlive-kannada/media/post_attachments/wp-content/uploads/2025/03/Tejasvi_Surya_Marriage.jpg)
ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಯುವ ಸಂಸದ ತೇಜಸ್ವಿ ಸೂರ್ಯ ಹಾಗೂ ಗಾಯಕಿ, ಭರತನಾಟ್ಯ ಕಲಾವಿದೆ ಶಿವಶ್ರೀ ಸ್ಕಂದಪ್ರಸಾದ್ ಅವರ ಮದುವೆ ಅದ್ಧೂರಿಯಾಗಿ ನೆರವೇರಿದೆ.
ಸಂಸದ ತೇಜಸ್ವಿ ಸೂರ್ಯ, ಚೆನ್ನೈ ಮೂಲದ ಗಾಯಕಿ ಶಿವಶ್ರೀ ಸ್ಕಂದಪ್ರಸಾದ್ ಅವರು ಇಂದು ಬೆಳಗ್ಗೆ ಶುಭ ಮೂಹರ್ತದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ವಿವಾಹ ಸಮಾರಂಭವು ಎರಡು ಕಡೆಯ ಕುಟುಂಬಸ್ಥರು, ಆಪ್ತರು, ಕೆಲವೇ ಕೆಲವು ಸ್ನೇಹಿತರ ಸಮ್ಮುಖದಲ್ಲಿ ಸಿಲಿಕಾನ್ ಸಿಟಿಯ ಖಾಸಗಿ ರೆಸಾರ್ಟ್ ಒಂದರಲ್ಲಿ ಸರಳವಾಗಿ, ಸುಂದರವಾಗಿ ನಡೆಯಿತು. ವಿವಾಹ ಸಮಾರಂಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಕೇಂದ್ರ ಸಚಿವ ವಿ.ಸೋಮಣ್ಣ, ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್, ಬಿಜೆಪಿ ಶಾಸಕರು, ಸಂಸದರು, ಹಿಂದೂಪರ ನಾಯಕರು, ಸಂಘ ಪರಿವಾರದ ಮುಖಂಡರು ಭಾಗವಹಿಸಿ ನವಜೋಡಿಗೆ ಶುಭ ಹಾರೈಸಿದರು.
ಮಾರ್ಚ್ 5 ಬುಧವಾರ ಸಂಜೆ ವರಪೂಜೆ ಕಾರ್ಯಕ್ರಮ ನಡೆಯಿತು. ಮಾರ್ಚ್ 6 ಅಂದರೆ ಇಂದು ಬೆಳಗ್ಗೆ ಕಾಶಿಯಾತ್ರೆ, ಜೀರಿಗೆ ಬೆಲ್ಲ ಧಾರೆ, ನಿರೀಕ್ಷಣೆ ಮುಹೂರ್ತ, ಲಾಜಾ ಹೋಮ ನಡೆಸಲಾಯಿತು. ಬಳಿಕ ಇಂದು ಬೆಳಗ್ಗೆ 9:30 ರಿಂದ 10:15ರ ನಡುವಿನ ತುಲಾ ಲಗ್ನದಲ್ಲಿ ವಧು ಶಿವಾಶ್ರೀ ಸ್ಕಂದಪ್ರಸಾದ್ ಅವರನ್ನ ತೇಜಸ್ವಿ ಸೂರ್ಯ ವರಿಸಿದರು. ಇದೆಲ್ಲಾ ಮುಗಿದ ಮೇಲೆ ತೇಜಸ್ವಿ ಸೂರ್ಯ ಅವರ ಗಿರಿನಗರ ನಿವಾಸದಲ್ಲಿ, ವಧುವನ್ನು ಮನೆ ತುಂಬಿಸಿಕೊಳ್ಳುವ ಕಾರ್ಯಕ್ರಮ ನಡೆಯಲಿದೆ.
ಇದನ್ನೂ ಓದಿ: ನಯನತಾರಾಗೆ ದುನಿಯಾ ವಿಜಯ್ ವಿಲನ್.. ಟಾಲಿವುಡ್ ಬೆನ್ನಲ್ಲೇ ಕಾಲಿವುಡ್ನಲ್ಲೂ ಫುಲ್ ದುನಿಯಾ
ಮಾರ್ಚ್ 9 ರಂದು ಭಾನುವಾರ ಆರತಕ್ಷತೆ ಸಮಾರಂಭ ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಬೆಳಗ್ಗೆ 10:30 ರಿಂದ 1:30 ರವರೆಗೆ ರಿಸೆಪ್ಷನ್ ಸಡಗರದಿಂದ ನಡೆಯಲಿದ್ದು ರಾಜಕಾರಣಿಗಳು, ಸಿನಿಮಾರಂಗದವರು, ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡವರು ಹಾಜರಾಗುವ ಸಾಧ್ಯತೆ ಇದೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ