/newsfirstlive-kannada/media/post_attachments/wp-content/uploads/2025/07/tejasvi-surya.jpg)
ಬೆಂಗಳೂರು ದಕ್ಷಿಣ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ನಮ್ಮ ಮೆಟ್ರೋ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದ್ದಾರೆ. ದರ ಏರಿಕೆ ಪರಿಷ್ಕರಣೆ ಸಮಿತಿ ವರದಿ ಬಿಡುಗಡೆ ಆಗ್ರಹಿಸಿ ಕೋರ್ಟ್ ಮೊರೆ ಹೋಗಿದ್ದಾರೆ. ಬಿಎಂಆರ್ಸಿಎಲ್ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಹೈ ಕೋರ್ಟ್ ಮೆಟ್ಟಿಲೇರಿ ತೇಜಸ್ವಿ ಸೂರ್ಯ ಅವರ ಅರ್ಜಿ ವಿಚಾರಣೆ ಸೋಮವಾರ ನಡೆಯಲಿದೆ.
ಇದನ್ನೂ ಓದಿ: ಗಣಪತಿ, ನಾಗರ ಮೂರ್ತಿಗೆ ಕಾಲಿಂದ ಒದ್ದು ವಿಕೃತಿ; ಶಿವಮೊಗ್ಗದಲ್ಲಿ ಟೈಟ್ ಸೆಕ್ಯೂರಿಟಿ
I am moving the High Court of Karnataka to challenge the arbitrary and opaque conduct by the State government and BMRCL in not making public the Metro Fare Fixation Committee Report. The matter will be heard tomorrow - WP No. 19524/2025 (GM-RES) LS Tejasvi Surya v. BMRCL & Ors.…
— Tejasvi Surya (@Tejasvi_Surya)
I am moving the High Court of Karnataka to challenge the arbitrary and opaque conduct by the State government and BMRCL in not making public the Metro Fare Fixation Committee Report. The matter will be heard tomorrow - WP No. 19524/2025 (GM-RES) LS Tejasvi Surya v. BMRCL & Ors.…
— Tejasvi Surya (@Tejasvi_Surya) July 6, 2025
">July 6, 2025
ಮೆಟ್ರೋ ದರ ಏರಿಕೆ ಪರಿಷ್ಕರಣೆ ಸಮಿತಿ ರಚನೆ ಮಾಡಲಾಗಿತ್ತು. ಆ ಸಮಿತಿ ವಿದೇಶಕ್ಕೆ ಹೋಗಿ ಅಧ್ಯಯನ ಮಾಡಿ ಬಂದಿತ್ತು. ದೆಹಲಿ, ಚೆನ್ನೈ, ಹಾಂಕಾಂಗ್, ಸಿಂಗಾಪುರ್ ಮೆಟ್ರೋ ನಿಲ್ದಾಣಗಳಿಗೆ ಹೋಗಿ ಸ್ಟಡಿ ಮಾಡಿದ್ರು. ಬಳಿಕ ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆ ಮಾಡಿತ್ತು. ಶೇಕಡಾ 130% ದರ ಏರಿಕೆ ಮಾಡಿದ್ರು. ಸಮಿತಿಯ ವರದಿ ಬಹಿರಂಗಪಡಿಸಿ ಅಂತ ಎಷ್ಟೇ ಕೇಳಿದ್ರು ಬಹಿರಂಗ ಮಾಡ್ತಿಲ್ಲ. ಆರ್ಟಿಐ ಮೂಲಕ ಆಗ್ರಹಿಸಿದರು ಬಹಿರಂಗ ಪಡಿಸ್ತಿಲ್ಲ. ಬಿಎಂಆರ್ಸಿಎಲ್ ಎಂಡಿಗೆ ಪತ್ರ ಬರೆದರೂ ಬಿಡುಗಡೆ ಮಾಡ್ತಿಲ್ಲ. ಹಾಗಾಗಿ ಕೋರ್ಟ್ ಮೂಲಕ ನ್ಯಾಯ ಕೇಳಲು ಸಂಸದ ತೇಜಸ್ವಿ ಸೂರ್ಯ ನಿರ್ಧಾರ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ