ಸೂರ್ಯ- ಶಿವಶ್ರೀ ಕಲ್ಯಾಣ; ವಿವಾಹ ಸಮಾರಂಭಕ್ಕೆ ಯಾರೆಲ್ಲಾ ಬಂದಿದ್ರು..? ಟಾಪ್ 10 ಫೋಟೋಸ್

author-image
Bheemappa
Updated On
ಸೂರ್ಯ- ಶಿವಶ್ರೀ ಕಲ್ಯಾಣ; ವಿವಾಹ ಸಮಾರಂಭಕ್ಕೆ ಯಾರೆಲ್ಲಾ ಬಂದಿದ್ರು..? ಟಾಪ್ 10 ಫೋಟೋಸ್
Advertisment
  • ಗುರು, ಹಿರಿಯರ ನಿಶ್ಚಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಂಸದ
  • ತುಲಾ ಲಗ್ನದಲ್ಲಿ ಶಿವಶ್ರಿ ಕೊರಳಿಗೆ ತೇಜಸ್ವಿ ಸೂರ್ಯ ಮಾಂಗಲ್ಯಧಾರಣೆ
  • ರಾಜಕೀಯ ಗಣ್ಯರು ಸೇರಿ ಮದುವೆಗೆ ಯಾರು ಯಾರು ಆಗಮಿಸಿದ್ದರು?

ಬೆಂಗಳೂರು: ಯುವ ಸಂಸದ ತೇಜಸ್ವಿ ಸೂರ್ಯ ಅವರು ಗಾಯಕಿ ಶಿವಶ್ರೀ ಸ್ಕಂದ ಪ್ರಸಾದ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಸಿಲಿಕಾನ್ ಸಿಟಿಯ ಖಾಸಗಿ ರೆಸಾರ್ಟ್‌ನಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಎರಡು ಕಡೆಯ ಕುಟುಂಬಸ್ಥರು, ಆಪ್ತರು, ರಾಜಕೀಯ ಗಣ್ಯರ ಉಪಸ್ಥಿತಿಯಲ್ಲಿ ನವ ಜೋಡಿ ಸಪ್ತಪದಿ ತುಳಿದಿದೆ.

publive-image

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಯುವ ಸಂಸದ ತೇಜಸ್ವಿ ಸೂರ್ಯ ಹಾಗೂ ಗಾಯಕಿ, ಭರತನಾಟ್ಯ ಕಲಾವಿದೆ ಶಿವಶ್ರೀ ಸ್ಕಂದಪ್ರಸಾದ್ ಅವರ ಮದುವೆ ಅದ್ಧೂರಿಯಾಗಿ ನೆರವೇರಿದೆ. ವೇದಿಕೆ ಮೇಲೆ ನವ ಜೋಡಿ ಫೋಟೋಗೆ ಪೋಸ್ ಕೊಟ್ಟ ಕ್ಷಣವಿದು.

publive-image

ಯುವ ಸಂಸದನ ಮದುವೆ ಸಮಾರಂಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಭಾಗಿಯಾಗಿದ್ದರು. ಈ ವೇಳೆ ನವ ಜೋಡಿಗೆ ಶುಭ ಹಾರೈಸಿದ್ದಾರೆ.

publive-image

ಸಂಸದ ತೇಜಸ್ವಿ ಸೂರ್ಯ ಹಾಗೂ ಶಿವಶ್ರೀ ಸ್ಕಂದಪ್ರಸಾದ್ ಅವರ ವಿವಾಹ ಸಮಾರಂಭದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ, ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಹಾಗೂ ಸಂಸದ ಎಸ್. ಮುನಿಸ್ವಾಮಿ ಅವರು ಭಾಗಿಯಾಗಿದ್ದರು. ಈ ವೇಳೆ ಸಂತಸದ ಕ್ಷಣದಲ್ಲಿ ತೊಡಗಿಕೊಂಡಾಗ ಫೋಟೋ ತೆಗೆಸಿಕೊಂಡರು.

publive-image

ಮದುವೆ ಸಮಾರಂಭಕ್ಕೆ ಆಗಮಿಸಿದ್ದ ಅವಧೂತ ವಿನಯ್ ಗುರೂಜಿ ಅವರನ್ನು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರು ಮಾತನಾಡಿಸಿದರು. ಇದೇ ವೇಳೆ ಅವರತ್ತ ಸಂಸದ ಎಸ್. ಮುನಿಸ್ವಾಮಿ, ಕೆ.ಅಣ್ಣಾಮಲೈ, ಪ್ರತಾಪ್ ಸಿಂಹ ಅವರು ನೋಡುತ್ತಿರುವುದು ಇಲ್ಲಿ ಕಾಣಬಹುದು.

publive-image

ವರ ತೇಜಸ್ವಿ ಸೂರ್ಯ ಅವರು ಬೆಂಗಳೂರು ಕೇಂದ್ರದ ಸಂಸದರಾಗಿರುವ ಪಿಸಿ ಮೋಹನ್ ಅವರನ್ನು ಮಾತನಾಡಿಸಿ ಫೋಟೋ ಕ್ಲಿಕ್ ಮಾಡಿಕೊಂಡರು. ಇನ್ನು ಹೊಸ ಜೀವನಕ್ಕೆ ತೇಜಸ್ವಿ ಸೂರ್ಯ, ಶಿವಶ್ರೀ ಸ್ಕಂದಪ್ರಸಾದ್ ಕಾಲಿಟ್ಟಿದ್ದಾರೆ. ಇನ್ನೊಂದು ಫೋಟೋದಲ್ಲಿ ಪ್ರತಾಪ್ ಸಿಂಹ, ಅಣ್ಣಾಮಲೈ ಅವರನ್ನು ಕಾಣಬಹುದು.

publive-image

ಮದುವೆ ಸಮಾರಂಭದಲ್ಲಿ ಫುಲ್ ಬ್ಯುಸಿ ಇರುವ ವರ ತೇಜಸ್ವಿ ಸೂರ್ಯ ಅವರಿಗೆ ಹೂಗುಚ್ಚ ನೀಡುವ ಮೂಲಕ ಕೇಂದ್ರ ಸಚಿವ ವಿ.ಸೋಮಣ್ಣ ಹಾಗೂ ಅವರ ಪತ್ನಿ ಶುಭ ಕೋರಿದರು.

publive-image

ಸಂಸದ ತೇಜಸ್ವಿ ಸೂರ್ಯ ಅವರ ಮದುವೆ ಶಾಸ್ತ್ರಗಳು ನಡೆಯುತ್ತಿರುವಾಗ ಗುರು, ಹಿರಿಯರು, ಬಂಧುಗಳು ಸ್ನೇಹಿತರು ನೆರೆದಿದ್ದಾರೆ. ಇನ್ನು ಇದರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಭಾಗಿಯಾಗಿರುವುದು ಫೋಟೋದಲ್ಲಿ ಕಾಣಬಹುದು.

publive-image

ಹೊಸ ಬದುಕಿಗೆ ತೇಜಸ್ವಿ ಸೂರ್ಯ, ಶಿವಶ್ರೀ ಸ್ಕಂದಪ್ರಸಾದ್ ವೆಲ್​ಕಮ್ ಹೇಳಿದ್ದಾರೆ. ಈ ಶುಭ ಸಮಾರಂಭದಲ್ಲಿ ಪ್ರತಾಪ್ ಸಿಂಹ, ಅಣ್ಣಾಮಲೈ ಅವರು ಭಾಗವಹಿಸಿದ್ದರು.

ಇದನ್ನೂ ಓದಿ:ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಂಸದ ತೇಜಸ್ವಿ ಸೂರ್ಯ.. ಗಣ್ಯರಿಂದ ಶುಭ ಹಾರೈಕೆ

publive-image

ವಿವಾಹ ಸಮಾರಂಭಕ್ಕೆ ಆಗಮಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರನ್ನು ಮಹಿಳೆಯರು ಸ್ವಾಗತ ಮಾಡಿದರು.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment