newsfirstkannada.com

ನನಗೆ ರಾತ್ರಿಯಿಡೀ ಡ್ರಗ್ಸ್​ ನೀಡಿ ಲೈಂಗಿಕ ದೌರ್ಜನ್ಯವೆಸಗಿದ್ದಾರೆ.. ಪೊಲೀಸ್​ ಠಾಣೆ ಮೆಟ್ಟಿಲೇರಿದ ಸಂಸದೆಯ ಆರೋಪ

Share :

Published May 6, 2024 at 2:02pm

Update May 6, 2024 at 2:04pm

    ಸಂಸದೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​

    ಮೂವತ್ತೇಳು ವರ್ಷ ವಯಸ್ಸಿನ ಸಂಸದೆಯ ಮೇಲೆ ಲೈಂಗಿಕ ದೌರ್ಜನ್ಯ

    ನನಗೆ ಡ್ರಗ್ಸ್​ ನೀಡಿ ಲೈಂಗಿಕ ದೌರ್ಜ್ಯವೆಸಗಿದ್ದಾರೆಂದು ಆರೋಪಿಸಿದ ಸಂಸದೆ

ಮಹಿಳಾ ಸಂಸದೆಯೊಬ್ಬರು ನನಗೆ ರಾತ್ರಿ ವೇಳೆ ಡ್ರಗ್ಸ್​ ನೀಡಿ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಆರೋಪಿಸಿದ ಘಟನೆ ಆಸ್ಟ್ರೇಲಿಯಾದಲ್ಲಿ ಬೆಳಕಿಗೆ ಬಂದಿದೆ. ಈ ಆರೋಪದ ಕುರಿತು ಕೇಸ್​ ಕೂಡ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಕ್ವೀನ್ಸ್​ಲ್ಯಾಂಡ್​​ ಲೇಬರ್​ ಪಕ್ಷದ 37 ವರ್ಷ ವಯಸ್ಸಿನ ಸಂಸದೆ ಬ್ರಿಟಾನಿ ಲೌಗಾ ಅವರು ತನ್ನ ಮೇಲೆ ನಡೆದ ದೌರ್ಜ್ಯನ್ಯದ ಕುರಿತಾಗಿ ಧ್ವನಿ ಎತ್ತಿದ್ದಾರೆ. ಬ್ರಿಟಾನಿ ಲೌಗಾ ಕ್ವೀನ್​ಲ್ಯಾಂಡ್​ ನಗರವಾದ ಯೆಪ್ಪೂನ್​​ನಲ್ಲಿ ರಾತ್ರಿ ವಿಹಾರಕ್ಕೆ ಹೋದಾಗ ಈ ಘಟನೆ ಎದುರಾಗಿದೆ ಎಂದಿದ್ದಾರೆ.

ಬ್ರಿಟಾನಿ ಲೌಗಾ ಅವರಿಗಾದ ಲೈಂಗಿಕ ದೌರ್ಜನ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಈ ಕುರಿತಾಗಿ ಅವರು ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ.

ಬ್ರಿಟಾನಿ ಲೌಗಾ

ಏಪ್ರಿಲ್​ 27ರಂದು ಬ್ರಿಟಾನಿ ಲೌಗಾ ವಿಹಾರಕ್ಕೆ ಹೊರಗೆ ಹೋಗಿದ್ದರು. ಈ ವೇಳೆ ಅವರಿಗೆ ಡ್ರಗ್ಸ್​ ನೀಡಿ ಲೈಂಗಿಕ ಕಿರುಕುಳ ನೀಡಿದ್ದಾರೆ. ಇದೇ ಸಮಯದಲ್ಲಿ ಅನೇಕ ಮಹಿಳೆಯರ ಮೇಲೂ ಲೈಂಗಿಕ ದೌರ್ಜನ್ಯ ನಡೆದಿರೋದು ಬೆಳಕಿಗೆ ಬಂದಿದೆ.

ಇದನ್ನೂ ಓದಿ: KSRTC ಬಸ್​-ಬೈಕ್​ ಮುಖಾಮುಖಿ ಡಿಕ್ಕಿ.. ಓರ್ವ ಸ್ಥಳದಲ್ಲೇ ಸಾವು, ಮತ್ತಿಬ್ಬರು ಗಂಭೀರ

ಸಂಸದೆ ಬ್ರಿಟಾನಿ ಲೌಗಾ ಆಸ್ಪತ್ರೆಯಲ್ಲಿ ಪರಿಶೀಲಿಸಿದಾಗ ತನ್ನ ದೇಹದಲ್ಲಿ ಡ್ರಗ್ಸ್​ ಪದಾರ್ಥ ಇರೋದು ಬೆಳಕಿಗೆ ಬಂದಿದೆ. ಇದು ನನ್ನ ದೇಹದ ಮೇಲೆ ಕೆಟ್ಟ ಪರಿಣಾಮ ಬೀರಿದೆ. ನಾನು ನನ್ನಂತೆಯೇ ಸಮಸ್ಯೆ ಎದುರಾದ ಇತರ ಮಹಿಳೆಯರನ್ನು ಸಂಪರ್ಕಿಸಿದ್ದೇನೆ. ಸದ್ಯ ಈ ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನನಗೆ ರಾತ್ರಿಯಿಡೀ ಡ್ರಗ್ಸ್​ ನೀಡಿ ಲೈಂಗಿಕ ದೌರ್ಜನ್ಯವೆಸಗಿದ್ದಾರೆ.. ಪೊಲೀಸ್​ ಠಾಣೆ ಮೆಟ್ಟಿಲೇರಿದ ಸಂಸದೆಯ ಆರೋಪ

https://newsfirstlive.com/wp-content/uploads/2024/05/Brittany-Lauga.jpg

Load More