/newsfirstlive-kannada/media/post_attachments/wp-content/uploads/2024/08/MONKEY-POX.jpg)
ನವದೆಹಲಿ: ಕೇಂದ್ರ ಆರೋಗ್ಯ ಸಚಿವಾಲಯ ಇತ್ತೀಚೆಗೆ ಆಫ್ರಿಕಾದಿಂದ ಭಾರತಕ್ಕೆ ಬಂದಿದ್ದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ಸೋಂಕು ಕಾಣಿಸಿಕೊಂಡಿದೆ ಎಂದು ಅಧಿಕೃತಗೊಳಿಸಿದೆ. ಈ ಮೂಲಕ ಭಾರತಕ್ಕೆ ಮಹಾಮಾರಿ ಎಂಟ್ರಿ ಕೊಟ್ಟ ಆತಂಕ ಶುರುವಾಗಿದೆ. ಈಗಾಗಲೇ 29 ದೇಶಗಳಲ್ಲಿ ಹಾವಳಿ ಎಬ್ಬಿಸಿರುವ ಈ ಮಂಕಿಪಾಕ್ಸ್ ಈಗ ಭಾರತಕ್ಕೂ ಕಾಲಿಟ್ಟಿದೆ.
ಕೇಂದ್ರ ಆರೋಗ್ಯ ಸಚಿವಾಲಯ ಹೇಳುವ ಪ್ರಕಾರ ಇತ್ತೀಚೆಗೆ ಆಫ್ರಿಕಾದ ದೇಶದಿಂದ ಭಾರತಕ್ಕೆ ಬಂದಿದ್ದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ಲಕ್ಷಣಗಳು ಕಂಡು ಬಂದ ಕೂಡಲೇ ಅವರನ್ನು ಐಸೊಲೇಟ್ ಮಾಡಿ ಸೋಂಕು ಹೆಚ್ಚಿನವರಿಗೆ ಹರಡದಂತೆ ಎಚ್ಚರಿಕೆ ತೆಗೆದುಕೊಳ್ಳಲಾಗಿದೆ, ಈಗಾಗಲೇ ಅವರ ರಕ್ತದ ಮಾದರಿಯನ್ನು ಪರೀಕ್ಷೆ ಮಾಡಿದ್ದು ಪರೀಕ್ಷೆಯಲ್ಲಿ ಮಂಕಿಪಾಕ್ಸ್ ವೈರಸ್ ಇರುವುದು ಕಂಡು ಬಂದಿದೆ. ಮಂಕಿಪಾಕ್ಸ್ಗೆ ಒಳಗಾಗಿರುವ ವ್ಯಕ್ತಿಯ ಹೆಸರನ್ನು ಗೌಪ್ಯವಾಗಿ ಇರಿಸಲಾಗಿದ್ದು. ಅವರ ಆರೋಗ್ಯದಿಂದ ಸದೃಢವಾಗಿದ್ದರೂ ಕೂಡ ಅವರಲ್ಲಿ ವೈರಸ್ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಸೇಡು, ಪ್ರತೀಕಾರ.. ಉತ್ತರ ಪ್ರದೇಶ ತೋಳಗಳ ಭಯಾನಕ ದಾಳಿಯ ಸತ್ಯ ಬಹಿರಂಗ; ಕಾರಣವೇನು?
ಅದರ ಜೊತೆಗೆ ಇದೊಂದು ಕೇವಲ ಐಸೋಲೆಟೆಡ್ ಮಾಡುವಂತಹ ಸಾಮಾನ್ಯ ಪ್ರಕರಣ. ಇದೇ ಮಾದರಿಯ ಒಟ್ಟು 30 ಪ್ರಕರಣಗಳು ಭಾರತದಲ್ಲಿ ಈ ಹಿಂದೆ 2022ರಲ್ಲಿ ವರದಿಯಾಗಿದ್ದವು ಈಗ ಪತ್ತೆಯಾಗಿರುವ ಮಂಕಿಪಾಕ್ಸ್ ವೈರಸ್ ಪ್ರಕರಣ ಯಾವುದೇ ಪಬ್ಲಿಕ್ ಹೆಲ್ತ್ ಏಮರ್ಜೆನ್ಸಿಯ ಭಾಗವಲ್ಲ ಹೀಗಾಗಿ ಯಾರೂ ವಿಚಲಿತರಾಗುವ ಅಗತ್ಯವಿಲ್ಲ ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ