/newsfirstlive-kannada/media/post_attachments/wp-content/uploads/2025/01/IMRAN-KHAN.jpg)
ಪಾಕಿಸ್ತಾನ ರಾಜಕೀಯವೇ ಒಂದು ತಾಳ ತಂತಿಯಿಲ್ಲದೇ ನಡೆಯುವ ಹುಚ್ಚರ ಸಂತೆ. ಇಲ್ಲಿ ಎಲೆಕ್ಷನ್​ನಲ್ಲಿ ಸೋತ ಮಾಜಿ ಪ್ರಧಾನಿ ಜೈಲಿಗೆ ಹೋಗುವುದು ಪರಂಪರೆಯಂತೆ ನಡೆದುಕೊಂಡು ಬಂದಿದೆ. ಒಂದಲ್ಲ ಒಂದು ಭ್ರಷ್ಟಾಚಾರದ ಆರೋಪ ಅವರ ಕೊರಳಿಗೆ ಸುತ್ತಿಕೊಳ್ಳುತ್ತದೆ. ಈಗ ಪಾಕ್​ನ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ಗೂ ಕೂಡ ಅದೇ ಗತಿ ಬಂದಿದೆ. ಇಮ್ರಾನ್​ ಖಾನ್​ಗೆ ಮತ್ತೊಂದು ಭ್ರಷ್ಟಾಚಾರ ಈಗ ಕಂಟಕವಾಗಿ ಪರಿಣಮಿಸಿದೆ. ಈ ಬಾರಿ ಪತ್ನಿಯೂ ಕೂಡ ಅಕ್ರಮದಲ್ಲಿ ಭಾಗಿಯಾಗಿರುವ ಅರೋಪ ಹೊಂದಿದ್ದು ಅವರು ಕೂಡ ಜೈಲು ಸೇರಿದ್ದಾರೆ.
ಇದನ್ನೂ ಓದಿ: ಲಾಸ್​​ ಏಂಜಲೀಸ್ ಬೆಂಕಿಯಲ್ಲೂ ಸುಡದೇ ಉಳಿದ ಒಂದೇ ಒಂದು ಮನೆ ಇದು! ಏನಿದರ ರಹಸ್ಯ?
ಅಲ್ ಖಾದಿರ್ ವಿವಿವ ಪ್ರಾಜೆಕ್ಟ್​ ಟ್ರಸ್ಟನಲ್ಲಾಗಿದ್ದ ಭ್ರಷ್ಟಾಚಾರದ ಆರೋಪ ಈಗ ಇಮ್ರಾನ್​ ಖಾನ್​ಗೆ ಉರುಳಾಗಿ ಪರಿಣಮಿಸಿದೆ. ಪಾಕ್ ಶ್ರೀಮಂತ ಉದ್ಯಮಿ ಮಲ್ಲಿಕ್ ರಿಯಾಜ್​ ಜೊತೆ ಈ ಡೀಲ್ ನಡೆದಿತ್ತು. ಆತನಿಂದ ಭೂಮಿ ಪಡೆದು ಅವನಿಗೆ ಬೇಕಾದ ನೆರವು ಮಾಡಿಕೊಟ್ಟ ಆರೋಪ ಇಮ್ರಾನ್ ಖಾನ್ ಮೇಲಿದೆ. ಈ ಡೀಲ್​ನಿಂದ ಪಾಕಿಸ್ತಾನದ ಸರ್ಕಾರದ ಖಜಾನೆಗೆ ಸುಮಾರು 5 ಸಾವಿರ ಕೋಟಿ ರೂಪಾಯಿಯಷ್ಟು ನಷ್ಟವಾಗಿದೆ ಎಂಬ ಆರೋಪವಿದೆ.
ಇದನ್ನೂ ಓದಿ:ಕೆನಡಾ ಸಂಸತ್‌ನಲ್ಲಿ ಕನ್ನಡಿಗನ ಹವಾ.. ಪ್ರತಿಯೊಬ್ಬರೂ ನೋಡಲೇಬೇಕಾದ ವಿಡಿಯೋ ಇದು!
2019ರಲ್ಲಿ ಇಮ್ರಾನ್ ಖಾನ್ ಅಧಿಕಾರ ದುರ್ಬಳಕೆ ಮಾಡಿಕೊಂಡು ಈ ಅಕ್ರಮ ಮಾಡಿರುವುದಾಗಿ ಆರೋಪವಿದೆ. 2023ರ ಮೇ 9ರಂದು ಇಮ್ರಾನ್ ಖಾನ್​ರನ್ನು ಬಂಧಿಸಲಾಗಿತ್ತು. ಇಮ್ರಾನ್ ಖಾನ್ ಪತ್ನಿಯನ್ನು ಕೂಡ ವಿಚಾರಣೆಗೆ ಒಳಪಡಿಸಲಾಗಿತ್ತು. ಇದೀಗ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್​​ನಿಂದ ತೀರ್ಪು ಹೊರಬಿದ್ದಿದೆ. ಇಮ್ರಾನ್​ ಖಾನ್​​ಗೆ 14 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ. ಪತ್ನಿ ಬುಶ್ರಾ ಬೀಬಿಗೆ 7 ವರ್ಷ ಜೈಲು ಹಾಗೂ 5 ಲಕ್ಷ ರೂಪಾಯಿ ದಂಡ ವಿಧಿಸಲಾಗಿದ್ದು ಇಮ್ರಾನ್​ ಖಾನ್​ಗೆ 10 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us