newsfirstkannada.com

ಧೋನಿಯ 100 ಅಡಿ ಕಟೌಟ್​.. ಪವರ್ ಸ್ಟಾರ್ ಜೊತೆ ಇರೋ ಪೋಸ್ಟರ್ ಅಂಟಿಸಿ ಸಂಭ್ರಮ

Share :

Published July 7, 2024 at 11:06am

  ಕೂಲ್ ಕ್ಯಾಪ್ಟನ್ ಧೋನಿ ಜೀವನಾಧಾರಿತ ಮೂವಿ ಮತ್ತೆ ರಿಲೀಸ್

  ಫ್ಯಾನ್ಸ್ ಅನ್ನದಾಸೋಹ, ರಕ್ತದಾನ ಮಾಡುವ ಮೂಲಕ ಸೆಲೆಬ್ರೆಷನ್

  ಬರ್ತ್​ಡೇಯನ್ನೇ ಬ್ಯುಸಿನೆಸ್ ಮಾಡಿದ ಕಂಪನಿ ಇ-ಸೈಕಲ್ ರಿಲೀಸ್

ಮಹೇಂದ್ರ ಸಿಂಗ್ ಧೋನಿ.. ಮೂರು ಐಸಿಸಿ ಟ್ರೋಫಿಗಳನ್ನ ಗೆದ್ದ ಏಕೈಕ ಕ್ಯಾಪ್ಟನ್. ಹೀಗೆ ಐತಿಹಾಸಿಕ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿರುವ ಮಾಜಿ ನಾಯಕನಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ತಲಾ ಬರ್ತ್​ಡೇಗೆ ಅಭಿಮಾನಿಗಳೆಲ್ಲ ಸ್ಪೆಷಲ್ ವಿಶ್ ಹೇಳುತ್ತಿದ್ದಾರೆ. ದಿ ಲೆಜಂಡರಿ ನಾಯಕನ ಹುಟ್ಟುಹಬ್ಬವನ್ನ ಫ್ಯಾನ್ಸ್​ ಹೇಗೆಲ್ಲ ಸೆಲೆಬ್ರೇಟ್ ಮಾಡ್ತಿದ್ದಾರೆ.

ಇದನ್ನೂ ಓದಿ: ನಿಂತಿದ್ದ ಲಾರಿಗೆ ಹಿಂಬದಿಯಿಂದ ಬಂದ ಬೈಕ್​ ಡಿಕ್ಕಿ​.. ಸ್ಥಳೀಯ ಪತ್ರಿಕೆ ವರದಿಗಾರ ಸಾವು

ಮಹೇಂದ್ರ ಸಿಂಗ್ ಧೋನಿ.. ವಿಶ್ವ ಕ್ರಿಕೆಟ್​ನ​​ ಗ್ರೇಟ್ ಲೀಡರ್​. ಭಾರತೀಯ ಕ್ರಿಕೆಟ್​ಗೆ ಹೊಸ ರೂಪ ಕೊಟ್ಟ ಮಹಾನ್ ನಾಯಕ. ದಶಕಗಳ ಕಾಲ ವಿಶ್ವ ಕ್ರಿಕೆಟ್ ಆಳಿದ ದಿಗ್ಗಜ. ಅಭಿಮಾನಿಗಳ ಪಾಲಿಗೆ ನೆಚ್ಚಿನ ತಲೈವಾ. ಕ್ಲಾಸಿಗೂ ಸೈ, ಮಾಸಿಗೂ ಜೈ ಅನ್ನೋ ರಾಂಚಿ ಱಂಬೋಗೆ, ಇಂದು ಜನುಮ ದಿನದ ಸಂಭ್ರಮ.

ಇದನ್ನೂ ಓದಿ: ಪೊಲೀಸ್​ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಖಡಕ್ ವಾರ್ನಿಂಗ್

ಜಾರ್ಖಂಡ್‌ನ ರಾಂಚಿಯಲ್ಲಿ ಜುಲೈ 7, 1981 ರಂದು ಜನಿಸಿದ ಧೋನಿ, ಇಂದು 43ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಸಕ್ಸಸ್​​​ಫುಲ್ ನಾಯಕನ ಹುಟ್ಟುಹಬ್ಬಕ್ಕೆ ದಿಗ್ಗಜ ಕ್ರಿಕೆಟಿಗರು ಸೇರಿದಂತೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಈ ಸ್ಪೆಷಲ್ ಡೇ ಅನ್ನ ಫ್ಯಾನ್ಸ್,​ ಅದ್ಧೂರಿಯಾಗೇ ಸೆಲೆಬ್ರೇಟ್ ಮಾಡ್ತಿದ್ದಾರೆ.

ಇದನ್ನೂ ಓದಿ: ಧಾರಾಕಾರ ಮಳೆಗೆ 100ಕ್ಕೂ ಹೆಚ್ಚು ರಸ್ತೆಗಳು ಬಂದ್.. ಭಾರೀ ಅನಾಹುತಕ್ಕೆ 13ಕ್ಕೂ ಹೆಚ್ಚು ಜನ ಸಾವು

ಹುಟ್ಟುಹಬ್ಬದ ಸಂಂಭ್ರಮಲ್ಲಿರುವ ಧೋನಿ, ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಮದುವೆ ಸಂಭ್ರಮದಲ್ಲಿ ಬ್ಯುಸಿಯಾಗಿದ್ದಾರೆ. ಆದ್ರೆ, ಇತ್ತ ಫ್ಯಾನ್ಸ್​ ಮಾತ್ರ ರಾತ್ರಿ 12 ಗಂಟೆಯಿಂದಲೇ ಕೇಕ್​ ಕತ್ತರಿಸಿ, ಪಟಾಕಿ ಸಿಡಿಸಿ ತಮ್ಮ ನೆಚ್ಚಿನ ಆಟಗಾರನ ಹುಟ್ಟುಹಬ್ಬವನ್ನ ಸ್ಪೆಷಲ್ ಆಗಿ ಸೆಲೆಬ್ರೇಟ್ ಮಾಡ್ತಿದ್ದಾರೆ.

ಧೋನಿ ಹುಟ್ಟುಹಬ್ಬಕ್ಕಾಗಿ 100 ಅಡಿ ಕಟೌಟ್

ಧೋನಿ ಹುಟ್ಟೂರು ಆಂಧ್ರಪ್ರದೇಶವಾಗದಿದ್ರು. ಧೋನಿಯ ಹುಟ್ಟುಹಬ್ಬದ ಜಾತ್ರೆ ಜೋರಾಗಿ ನಡೀತಿದೆ. ವಿಜಯವಾಡದ ನಂದಿಗ್ರಾಮದಲ್ಲಿ ಬರೋಬರಿ 100 ಅಡಿಯ ಕಟೌಟ್ ನಿರ್ಮಿಸಿದ್ದಾರೆ. ಕೆಲವಡೆ ನಟ ಹಾಗೂ ಆಂಧ್ರಪ್ರದೇಶದ ಡಿಸಿಎಂ ಪವನ್ ಕಲ್ಯಾಣ್​ ಜೊತೆ ಧೋನಿಯ ಪೋಸ್ಟರ್ ಅಂಟಿಸಿ ಸಂಭ್ರಮಿಸ್ತಿದ್ದಾರೆ.

ಧೋನಿ ಅನ್​ ಟೋಲ್ಡ್​ ಸ್ಟೋರಿ ರೀ ರಿಲೀಸ್​..!

2016ರಲ್ಲಿ ತೆರೆ ಕಂಡಿದ್ದ ಧೋನಿ ಜೀವನಧಾರಿತ ಚಿತ್ರ ಇಂದು ಮತ್ತೆ ರೀ ರಿಲೀಸ್ ಆಗಿದೆ. ಮಾಹಿಯ ಹುಟ್ಟುಹಬ್ಬದ ಅಂಗವಾಗಿ ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲಿ ರೀ ರಿಲೀಸ್ ಮಾಡಲಾಗಿದ್ದು, ನಿನ್ನೆಯಿಂದಲೇ ಫ್ಯಾನ್ಸ್​ ಥಿಯೇಟರ್​ಗಳ ಬಳಿ ಜಮಾಯಿಸಿದ್ದಾರೆ.

ಅಭಿಮಾನಿಗಳಿಂದ ಸ್ಪೆಷಲ್ ಮೋಷನ್ ಫೋಸ್ಟರ್ಸ್!

ವಿಶ್ವ ಶ್ರೇಷ್ಠ ನಾಯಕನಿಗೆ ಫ್ಯಾನ್ಸ್​ ತಮ್ಮದೇ ಶೈಲಿಯಲ್ಲಿ ಶುಭಾಶಯ ತಿಳಿಸುತ್ತಿದ್ದಾರೆ. ಕೆಲ ಫ್ಯಾನ್ಸ್ ಅನ್ನದಾಸೋಹ, ರಕ್ತದಾನ ಮಾಡುವ ಮೂಲಕ ಹುಟ್ಟುಹಬ್ಬವನ್ನ ಆಚರಿಸುತ್ತಿದ್ರೆ. ಇನ್ನು ಕೆಲ ಫ್ಯಾನ್ಸ್, ಧೋನಿ ಸಾಧನೆಗಳನ್ನ ಸೂಚಿಸುವಂತ ಸ್ಪೆಷಲ್ ಪೋಸ್ಟರ್ ಆ್ಯಂಡ್ ಟೀಸರ್​ಗಳ ವಿಡಿಯೋಗಳ ಮೂಲಕ ಶುಭ ಹಾರೈಸಿರುವುದು ವಿಶೇಷವಾಗಿದೆ.

ಧೋನಿ ಬರ್ತ್​ಡೇ ಸ್ಪೆಷಲ್​.. ಇ-ಸೈಕಲ್ ಬಿಡುಗಡೆ..!

ಒಂದೆಡೆ ಧೋನಿ ಫ್ಯಾನ್ಸ್​, ಹಂಗಾಮ ಸೃಷ್ಟಿಸುತ್ತಿದ್ರೆ. ಮತ್ತೊಂದೆಡೆ ಕೆಲ ಕಂಪನಿಗಳು ಧೋನಿ ಹುಟ್ಟುಹಬ್ಬವನ್ನೇ ಬ್ಯುಸಿನೆಸ್ ಮಾಡ್ತಿದೆ. ಪುಣೆ ಮೂಲದ EMotorad ಎಲೆಕ್ಟ್ರಿಕ್ ಸೈಕಲ್ ಕಂಪನಿ, MSD ಲೆಜೆಂಡ್ 07 ವಿಶೇಷ ಆವೃತ್ತಿಯ​​ ಸೈಕಲ್​ ಬಿಡುಗಡೆ ಮಾಡಿದೆ. ಕಳೆದ 7 ದಿನಗಳ ಹಿಂದೆಯೇ ವಿಶೇಷ ಆಫರ್ ಪ್ರಕಟಿಸಿದೆ.

ಇದನ್ನೂ ಓದಿ: ದರ್ಶನ್​​ಗಾಗಿ ಶಕ್ತಿ ದೇವತೆಯ ಮೊರೆ ಹೋದ ವಿಜಯಲಕ್ಷ್ಮಿ.. ಬಂಧನಕ್ಕೂ ಮೊದಲು ನಟ ಅದೇ ದೇಗುಲಕ್ಕೆ ಹೋಗಿದ್ದರು..!

ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್​​ಗೆ ಗುಡ್​ ಬೈ ಹೇಳಿ 5 ವರ್ಷಗಳೇ ಉರುಳಿದ್ರು. ಫ್ಯಾನ್ಸ್ ಅಂತೂ ನೆಚ್ಚಿನ ನಾಯಕನ ಹುಟ್ಟುಹಬ್ಬವನ್ನ ವರ್ಷದಿಂದ ವರ್ಷಕ್ಕೆ ಮತ್ತಷ್ಟು ರಂಗೇರಿಸ್ತಿರೋದು ಸುಳ್ಳಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಧೋನಿಯ 100 ಅಡಿ ಕಟೌಟ್​.. ಪವರ್ ಸ್ಟಾರ್ ಜೊತೆ ಇರೋ ಪೋಸ್ಟರ್ ಅಂಟಿಸಿ ಸಂಭ್ರಮ

https://newsfirstlive.com/wp-content/uploads/2024/07/DHONI_CUTOUT_FAN.jpg

Load More