newsfirstkannada.com

IPL ಮುಗಿಯುತ್ತಿದ್ದಂತೆ ಆಸ್ಪತ್ರೆ ಸೇರಿದ CSK ತಂಡದ ಕ್ಯಾಪ್ಟನ್​​ ಎಂ.ಎಸ್​​ ಧೋನಿ; ಕಾರಣವೇನು?

Share :

Published May 31, 2023 at 11:11am

Update May 31, 2023 at 11:14am

    ಇಂಡಿಯನ್​ ಪ್ರೀಮಿಯರ್​ ಲೀಗ್​ 2023 ಟೂರ್ನಿ ಮುಕ್ತಾಯ

    IPL ಮುಗಿಯುತ್ತಿದ್ದಂತೆ ಆಸ್ಪತ್ರೆ ಸೇರಿದ CSK ತಂಡದ ಕ್ಯಾಪ್ಟನ್​​

    CSK ತಂಡದ ಕ್ಯಾಪ್ಟನ್​​ ಧೋನಿ ಆಸ್ಪತ್ರೆ ಸೇರಲು ಕಾರಣವೇನು?

ಬಹುನಿರೀಕ್ಷಿತ ಇಂಡಿಯನ್​ ಪ್ರೀಮಿಯರ್​ ಲೀಗ್​ 2023 ಟೂರ್ನಿ ಮುಕ್ತಾಯವಾಗಿದೆ. ಸೋಮವಾರ ನಡೆದ ಐಪಿಎಲ್​​​​ ಫೈನಲ್​ ಪಂದ್ಯದಲ್ಲಿ ಗುಜರಾತ್​​ ಟೈಟಾನ್ಸ್​ ವಿರುದ್ಧ ಗೆದ್ದು ಬೀಗಿದ ಚೆನ್ನೈ ಸೂಪರ್​​ ಕಿಂಗ್ಸ್​ ತಂಡವು ಚಾಂಪಿಯನ್​ ಆಗಿ ಹೊರಹೊಮ್ಮಿದೆ. ಈ ಮೂಲಕ 5ನೇ ಬಾರಿಗೆ ಚಾಂಪಿಯನ್​ ಆಗಿರೋ ಎಂ.ಎಸ್​​ ಧೋನಿ ನಾಯಕತ್ವದ ಚೆನ್ನೈ ಸೂಪರ್​ ಕಿಂಗ್ಸ್​​​ ತಂಡವು ಮುಂಬೈ ಇಂಡಿಯನ್ಸ್​​ ದಾಖಲೆ ಸರಿಗಟ್ಟಿದೆ.

ಇನ್ನು, ಐಪಿಎಲ್​​ ಮುಗಿಯುತ್ತಿದ್ದಂತೆಯೇ ಚೆನ್ನೈ ಸೂಪರ್​​ ಕಿಂಗ್ಸ್​ ತಂಡದ ಕ್ಯಾಪ್ಟನ್​​​ ಎಂ.ಎಸ್​ ಧೋನಿ ಸದ್ಯದಲ್ಲೇ ಮುಂಬೈನ ಪ್ರತಿಷ್ಠಿತ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದಾರೆ. ತೀವ್ರ ಮಂಡಿ ನೋವಿನಿಂದ ಬಳಲುತ್ತಿರೋ ಧೋನಿ ಒಂದೆರಡು ದಿನಗಳಲ್ಲಿ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಅಡ್ಮಿಟ್​​ ಆಗಿದ್ದಾರೆ ಎಂದು ವರದಿಯಾಗಿದೆ.

2023 ಐಪಿಎಲ್​ ಸೀಸನ್​​ ಶುರುವಾಗೋ ಮುನ್ನವೇ ಎಂ.ಎಸ್​ ಧೋನಿಗೆ ಮಂಡಿ ನೋವು ಇತ್ತು. ಈ ಬಗ್ಗೆ ಖುದ್ದು ಸಿಎಸ್‌ಕೆ ತಂಡದ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ಅವರೇ ಧೋನಿ ಮೊಣಕಾಲಿನ ಗಾಯದೊಂದಿಗೆ ಟಿ20 ಲೀಗ್‌ ಆಡುತ್ತಿದ್ದಾರೆ ಎಂದು ಒಪ್ಪಿಕೊಂಡಿದ್ದರು.

ವಿಶೇಷ ಸೂಚನೆ: ಕ್ರಿಕೆಟ್‌ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನಿಮ್ಮ ನ್ಯೂಸ್‌ ಫಸ್ಟ್‌ ಚಾನೆಲ್‌ನಲ್ಲಿ

IPL ಮುಗಿಯುತ್ತಿದ್ದಂತೆ ಆಸ್ಪತ್ರೆ ಸೇರಿದ CSK ತಂಡದ ಕ್ಯಾಪ್ಟನ್​​ ಎಂ.ಎಸ್​​ ಧೋನಿ; ಕಾರಣವೇನು?

https://newsfirstlive.com/wp-content/uploads/2023/05/MS-Dhoni-1.jpg

Load More