/newsfirstlive-kannada/media/post_attachments/wp-content/uploads/2024/11/DHONI-DAUGHTER-1.jpg)
ಮಹೇಂದ್ರ ಸಿಂಗ್ ಧೋನಿ, ಭಾರತದ ಕ್ರಿಕೆಟ್ ಜಗತ್ತು ಎಂದಿಗೂ ಮರೆಯದ ಒಂದು ಹೆಸರು. ಕೂಲ್ ಕ್ಯಾಪ್ಟನ್ ಅಂತಲೇ ಕರೆಸಿಕೊಂಡಿರುವ ಮಹೇಂದ್ರ ಸಿಂಗ್ ಧೋನಿ ಭಾರತಕ್ಕೆ ಎರಡು ವಿಶ್ವಕಪ್ ತಂದುಕೊಟ್ಟ ನಾಯಕ ಒಂದು ಟಿ20 ಹಾಗೂ ಒಂದು ಏಕದಿನ ಪಂದ್ಯದ ವಿಶ್ವಕಪ್ ಧೋನಿ ನಾಯಕತ್ವದಲ್ಲಿಯೇ ಬಂದಿವೆ. ಭಾರತ ಕಂಡ ಸೆಲೆಬ್ರೆಟಿ ಕ್ರಿಕೆಟರ್ನಲ್ಲಿ ಧೋನಿ ಕೂಡ ಒಬ್ಬರು
ಮಹೇಂದ್ರ ಸಿಂಗ್ ಧೋನಿ 2010ರಲ್ಲಿ ತಮ್ಮ ಗೆಳತಿ ಸಾಕ್ಷಿ ಜೊತೆ ಹಸೆಮಣೆ ಏರಿದರು ಅವರ ದಾಂಪತ್ಯದ ಪ್ರೀತಿಯ ಗುರುತಾಗಿ 2015ರಲ್ಲಿ ಪುತ್ರಿ ಝೀವಾ ಅವರ ಬದುಕಲ್ಲಿ ಬಂದಳು. ಅವರ ತಂದೆಯಂತೆಯೇ ಝೀವಾ ಕೂಡ ಮೀಡಿಯಾ ಹಾಗೂ ಸೋಷಿಯಲ್ ಮೀಡಿಯಾಗಳಲ್ಲಿ ಸೆನ್ಷೆಷನ್ ಕ್ರಿಯೇಟ್ ಮಾಡಿದರು. ಝೀವಾಳ ಇನ್ಸ್ಟಾಗ್ರಾಂನ ಅಧಿಕೃತ ಖಾತೆಗೆ ಒಟ್ಟು 28 ಲಕ್ಷ ಜನರು ಫಾಲೋವರ್ಸ್ ಇದ್ದಾರೆ.
ಇದನ್ನೂ ಓದಿ:13 ವರ್ಷದ ಹುಡುಗನ ಮೇಲೆ ಕೋಟಿ ಕೋಟಿ ಸುರಿದ ರಾಜಸ್ಥಾನ್; ಕಾರಣ ಬಿಚ್ಚಿಟ್ಟ ದ್ರಾವಿಡ್
ದೊಡ್ಡ ದೊಡ್ಡ ಸಲೆಬ್ರೆಟಿಗಳ ಮಕ್ಕಳು ಮುಂಬೈನ ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್ನಲ್ಲಿ ಕಲಿಯುತ್ತಿದ್ದಾರೆ, ಆದ್ರೆ ಝೀವಾ ಸದ್ಯ ರಾಂಚಿಯಲ್ಲಿಯೇ ತನ್ನ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ.ತೌರಿಯನ್ ವರ್ಲ್ಡ್ ಸ್ಕೂಲ್ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ಸದ್ಯ ಝೀವಾ ಕಲಿಯುತ್ತಿರುವ ಸ್ಕೂಲ್ ಫೀಸ್ ಬಗ್ಗೆ ದೊಡ್ಡ ಚರ್ಚೆಯಾಗುತ್ತಿದೆ. ಬೋರ್ಡಿಂಗ್ ಸ್ಕೂಲ್ ಹಾಗೂ ಡೇ ಸ್ಕೂಲ್ ವ್ಯವಸ್ಥೆಯೂ ಕೂಡ ಇದೆ. ಪ್ರಮುಖವಾಗಿ ಈ ಶಾಲೆ ತನ್ನ ವರ್ಷದ ಫೀಸ್ನಿಂದಲೇ ಹೆಚ್ಚು ಖ್ಯಾತಿ ಪಡೆದುಕೊಂಡಿದೆ.
ಇದನ್ನೂ ಓದಿ:IPL ಸ್ಕ್ಯಾಮ್ ಬಗ್ಗೆ ಮೌನಮುರಿದ ಲಲಿತ್ ಮೋದಿ; ದೇಶ ಬಿಡಲು ದಾವೂದ್ ಕಾರಣವೇ?
ಈ ಶಾಲೆಯಲ್ಲಿ ವರ್ಷಕ್ಕೆ ಎಲ್ಕೆಜಿಯಿಂದ 8ನೇ ತರಗತಿ ಕಲಿಯುವ ವಿದ್ಯಾರ್ಥಿಗಳಿಗೆ ಸುಮಾರು 4.40 ಲಕ್ಷ ರೂಪಾಯಿ ವಾರ್ಷಿಕ ಫೀಸ್ ಇದೆ. ಸದ್ಯ ಇದೇ ಶಾಲೆಯಲ್ಲಿ ಝೀವಾ ಮಹೇಂದ್ರ ಸಿಂಗ್ ಧೋನಿ 3ನೇ ತರಗತಿಯಲ್ಲಿ ಕಲಿಯುತ್ತಿದ್ದಾರೆ.ಇನ್ನು 9ನೇ ತರಗತಿಯಿಂದ 12ನೇ ತರಗತಿಯವರೆಗೆ ಕಲಿಯುವ ಮಕ್ಕಳಿಗೆ ವಾರ್ಷಿಕ್ ಫೀಸ್ 4.80 ಲಕ್ಷ ರೂಪಾಯಿ ಇದೆ. ಸದ್ಯ ಧೋನಿ ಪುತ್ರಿ ಇಲ್ಲಿ ವಾರ್ಷಿಕವಾಗಿ 4.40 ಲಕ್ಷ ರೂಪಾಯಿ ನೀಡಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಫೀಸ್ ಶಾಲೆಯ ಸಮವಸ್ತ್ರ ಪಠ್ಯಪುಸ್ತಕಗಳು ಹಾಗೂ ಶೈಕ್ಷಣಿಕ ಮಟಿರಿಯಲ್ಸ್ಗಳನ್ನು ಒಳಗೊಂಡಿದೆ ಎಂದು ಹೇಳಲಾಗಿದೆ.
ಇನ್ನ ತೌರಿಯನ್ ವರ್ಲ್ಡ್ ಸ್ಕೂಳ್ ಹಿನ್ನೆಲೆಯನ್ನು ನೋಡುವುದಾದ್ರೆ ಇದು 2008ರಲ್ಲಿ ಅಮಿತ್ ಬಜ್ಲಾ ಎಂಬ ಲಂಡನ್ ಸ್ಕೂಲ್ ಆಫ್ ಎಕನಾಮಮಿಕ್ಸ್ನ ಹಳೆಯ ವಿದ್ಯಾರ್ಥಿ ಸ್ಥಾಪಿಸಿದ್ದಾರೆ. 65 ಎಕರೆ ವಿಶಾಲವಾದ ಜಾಗದಲ್ಲಿ ಹರಡಿಕೊಂಡಿರುವ ಈ ಶಾಲೆ ಜಾರ್ಖಂಡ್ನ ಟಾಪ್ ಱಂಕಿಂಗ್ ಶಾಲೆಯಲ್ಲಿ ಒಂದಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ