/newsfirstlive-kannada/media/post_attachments/wp-content/uploads/2025/06/ms-dhoni.jpg)
ವಿಶ್ವ ಕ್ರಿಕೆಟ್ ಲೋಕದ ಮೋಸ್ಟ್ ಸಕ್ಸಸ್ಫುಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ತನ್ನ ಕೂಲ್ ಮತ್ತು ಕಾಮ್ ವ್ಯಕ್ತಿತ್ವಕ್ಕೆ ಹೆಸರುವಾಸಿ. ಧೋನಿ ಸಾಮಾನ್ಯವಾಗಿ ಸಿಟ್ಟು ಮಾಡಿಕೊಳ್ಳಲ್ಲ. ಸಿಟ್ಟು ಮಾಡಿಕೊಂಡ್ರೆ ಸುಲಭಕ್ಕೆ ಶಾಂತನಾಗಲ್ಲ. ಯಾವುದಾದ್ರೂ ವಿಚಾರದಲ್ಲಿ ಧೋನಿಗೆ ಬೇಸರ ಆಯ್ತು ಅಂತಿಟ್ಟುಕೊಳ್ಳಿ. ಧೋನಿಯ ಕೋಪ ಎಷ್ಟು ಎಕ್ಸ್ಟ್ರೀಮ್ಗೆ ಹೋಗುತ್ತೆ ಅನ್ನೋದನ್ನ ಉಹಿಸೋಕೂ ಆಗಲ್ಲ. ಒಡ ಹುಟ್ಟಿದ ಅಣ್ಣನ ಕಥೆಯೇ ಇದಕ್ಕೆ ಬೆಸ್ಟ್ ಎಕ್ಸಾಂಪಲ್.
ಇದನ್ನೂ ಓದಿ:ಶೆಫಾಲಿ ಜರಿವಾಲಾ ಮಾಜಿ ಬಾಯ್ಫ್ರೆಂಡ್.. ಬಿಗ್ಬಾಸ್ ವಿನ್ನರ್ ಕೂಡ ಈ ಹಿಂದೆ ಹೃದಯಾಘಾತದಿಂದ ನಿಧನ!
ವಿಶ್ವಮೆಚ್ಚಿದ ನಾಯಕ ಧೋನಿಯ ಜೀವನಾಧಾರಿತ ಚಿತ್ರ. 2016ರಲ್ಲಿ ತೆರೆಕಂಡು ಸೂಪರ್ ಡೂಪರ್ ಹಿಟ್ ಆಗಿತ್ತು. ಬಾಕ್ಸ್ ಆಫೀಸ್ನಲ್ಲಿ 216 ಕೋಟಿ ರೂ ಬಾಚಿ ಕ್ರಿಕೆಟ್ ಪ್ರೇಮಿಗಳ ಮನ ಗೆದ್ದಿತ್ತು. ದಿವಂಗತ ಶುಶಾಂತ್ ಸಿಂಗ್ ರಜಪೂತ್ ಮಾಹಿಯ ಪಾತ್ರಕ್ಕೆ ಜೀವ ತುಂಬಿ ಶಹಬ್ಬಾಸ್ ಗಿರಿ ಗಿಟ್ಟಿಸಿಕೊಂಡಿದ್ರು. 5 ವರ್ಷಗಳ ಹಿಂದೆ ತೆರೆಕಂಡ ಈ ಬ್ಲಾಕ್ಬಸ್ಟರ್ ಮೂವಿ ಧೋನಿ ಜೀವನದ ಒಂದು ಕಂಪ್ಲೀಟ್ ಪ್ಯಾಕೇಜ್ ಆಗಿತ್ತು. ಧೋನಿಯ ಬಾಲ್ಯ, ಸ್ಟ್ರಗಲಿಂಗ್ ಲೈಫ್, ಲವ್, ಕ್ರಿಕೆಟ್ ಸಾಧನೆ, ಫ್ರೆಂಡ್ಸ್ ಮತ್ತು ಫ್ಯಾಮಿಲಿ ಪಾತ್ರವನ್ನ ಎಳೆಎಳೆಯಾಗಿ ಬಿಚ್ಚಿಡಲಾಗಿತ್ತು. ಇಷ್ಟೆಲ್ಲಾ ಇದ್ದ ಬಯೋಪಿಕ್ನಲ್ಲಿ ಒಂದು ಟಾಪಿಕ್ ಮಿಸ್ಸಾಗಿತ್ತು. ಧೋನಿಯ ಒಡಹುಟ್ಟಿದ ಅಣ್ಣನ ಬಗ್ಗೆ ಎಲ್ಲೂ ತೋರಿಸಿರ್ಲಿಲ್ಲ.
ಧೋನಿ ಬಯೋಪಿಕ್ ಅಣ್ಣ ನರೇಂದ್ರ ಸಿಂಗ್ ಧೋನಿಯ ಪಾತ್ರ ಇಲ್ಲದ್ದು ಯಾಕೆ ಅನ್ನೋ ಪ್ರಶ್ನೆ ಎಲ್ಲರನ್ನೂ ಕಾಡಿತ್ತು.
ನಿಜ ಜೀವನದಲ್ಲೂ ಅಷ್ಟೇ ಧೋನಿ ಜೊತೆಗೆ ಎಲ್ಲೂ ಕೂಡ ಅವರ ಅಣ್ಣ ಕಾಣಿಸಿಕೊಂಡಿಲ್ಲ. ಧೋನಿ ತಮ್ಮ ಒಡಹುಟ್ಟಿದ ಅಣ್ಣನನ್ನೇ ದೂರ ಇಟ್ಟಿರೋದ್ಯಾಕೆ? ಇದಕ್ಕೆ ಕಾರಣ ಏನು? ಅನ್ನೋದು ಕ್ರಿಕೆಟ್ ಲೋಕದ ಉತ್ತರವಿಲ್ಲದ ಪ್ರಶ್ನೆಯಾಗಿತ್ತು. ಇದೀಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಕೊನೆಗೂ ಧೋನಿ ತಮ್ಮ ಸ್ವಂತ ಅಣ್ಣನ ಕೋಪಗೊಂಡಿದ್ದೇಕೆ ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಅಣ್ಣ ನರೇಂದ್ರ ಸಿಂಗ್ ಮಾಡಿದ ಆ ಒಂದು ಯಡವಟ್ಟೇ ಧೋನಿ ಕೋಪಕ್ಕೆ ಕಾರಣ ಅನ್ನೋದು ರಿವೀಲ್ ಆಗಿದೆ. 2008ರ ಆಸುಪಾಸಿನಲ್ಲಿ ಧೋನಿ ರಾಂಚಿಯಲ್ಲಿ ವೃದ್ಧಾಶ್ರಮವೊಂದನ್ನ ಕಟ್ಟೋಕೆ ಮುಂದಾಗಿದ್ರು. ಆ ಜವಾಬ್ಧಾರಿಯನ್ನ ಅಣ್ಣನಿಗೆ ವಹಿಸಿದ್ರು. ಅದಕ್ಕೆಂದು ಹಣವನ್ನೂ ನೀಡಿ ಪ್ರಾಪರ್ಟಿ ಖರೀದಿಗೆ ಸೂಚಿಸಿದ್ರಂತೆ. ಆ ದುಡ್ಡಲ್ಲಿ ಪ್ರಾಪರ್ಟಿ ಖರೀದಿಸಿದ್ದ ಧೋನಿ ಅಣ್ಣ ಅದನ್ನ ತನ್ನ ಪತ್ನಿ ಮನೆಯವರಿಗೆ ಗಿಫ್ಟ್ ನೀಡಿದ್ರಿಂತೆ. ಇದ್ರಿಂದ ಸಿಟ್ಟಾದ ಧೋನಿ ಅಣ್ಣನನ್ನ ದೂರ ಇಟ್ಟಿದ್ರು. ಇಬ್ಬರೂ ಪ್ರತ್ಯೇಕವಾಗಿ ವಾಸ ಮಾಡ್ತಿದ್ರು.
ವೃದ್ಧಾಶ್ರಮ ಕಟ್ಟೋ ವಿಚಾರದಲ್ಲಿ ಅಣ್ಣನ ನಡೆಯಿಂದ ಬೇಸರಗೊಂಡಿದ್ದ ಧೋನಿ ದಶಕಕ್ಕೂ ಅಧಿಕ ಕಾಲ ದೂರ ಉಳಿದಿದ್ರು. ಮಾತು ಕತೆ ಏನೋ ಇಲ್ಲದೇ ಮಹೆಂದ್ರ ಹಾಗೂ ನರೇಂದ್ರ ಜೀವನ ನಡೆಸ್ತಿದ್ರು. ಧೋನಿಯ ಈ ಕೋಪತಾಪ ಕೊನೆಗೂ ಕಡಿಮೆಯಾಗಿದೆ. ಅಣ್ಣನ ಮೇಲಿನ ಮುನಿಸನ್ನ ಮಿಸ್ಟರ್ ಕೂಲ್ ಮರೆತು ಒಂದಾಗಿದ್ದಾರೆ. ಕಳೆದ 3 ವರ್ಷಗಳಗಿಂದ ಇಬ್ಬರೂ ರಾಮ-ಲಕ್ಷ್ಮಣರು ಮತ್ತೆ ಸಂತೋಷದಿಂದ ಒಟ್ಟಾಗಿ ಜೀವನ ನಡೆಸ್ತಿದ್ದಾರೆ. ಐಪಿಎಲ್ ವೇಳೆ ಮಾತ್ರ ದರ್ಶನ ಕೊಡೋ ಧೋನಿ, ಆ ಬಳಿಕ ತಮ್ಮ ಫಾರ್ಮ್ಹೌಸ್ ಬ್ಯುಸಿಯಾಗ್ತಿದ್ದಾರೆ. ಧೋನಿಯ ಅಣ್ಣ ನರೇಂದ್ರ ಸಿಂಗ್ ಧೋನಿ ರಾಜಕೀಯ ರಂಗದಲ್ಲಿ ಸಕ್ರೀಯರಾಗಿದ್ದಾರೆ. ಈ ಹಿಂದೆ ಬಿಜೆಪಿಯಲ್ಲಿದ್ರು. ಈಗ ಸಮಾಜವಾದಿ ಪಕ್ಷದಲ್ಲಿದ್ದಾರೆ. ಫೈನಲಿ ಧೋನಿ ತಮ್ಮ ಒಡ ಹುಟ್ಟಿದ ಅಣ್ಣನನ್ನ ದೂರ ಇಟ್ಟಿದ್ದೇಕೆ? ಬಯೋಪಿಕ್ನಲ್ಲಿ ಧೋನಿಯ ಅಣ್ಣ ಮಿಸ್ ಆಗಿದ್ಯಾಕೆ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ದೂರಾಗಿದ್ದ ಇಬ್ಬರೂ ಒಂದಾಗಿದ್ದೂ ಆಗಿದೆ. ಇನ್ಮುಂದೆ ಮಹೆಂದ್ರ ಮತ್ತು ನರೇಂದ್ರ ರಾಮ-ಲಕ್ಷ್ಮಣರಂತೆ ಕೂಡಿ ಬಾಳಲಿ. ಅಣ್ಣ-ತಮ್ಮನ ಸಹೋದರತ್ವ ಎಲ್ಲರಿಗೂ ಮಾದರಿಯಾಗಲಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ