MS​ ಧೋನಿ ಬರ್ತ್​​ಡೇಗೆ ಬಂದಿದ್ದಕ್ಕೆ ಆನಂದಭಾಷ್ಪ.. ಕೇಕ್ ತಿನ್ನಿಸುತ್ತಿದ್ದಂತೆ ಗೆಳೆಯ ಭಾವುಕ!​

author-image
Bheemappa
MS​ ಧೋನಿ ಬರ್ತ್​​ಡೇಗೆ ಬಂದಿದ್ದಕ್ಕೆ ಆನಂದಭಾಷ್ಪ.. ಕೇಕ್ ತಿನ್ನಿಸುತ್ತಿದ್ದಂತೆ ಗೆಳೆಯ ಭಾವುಕ!​
Advertisment
  • ಸರ್ವಕಾಲಕ್ಕೂ ಸಲ್ಲುವ ಶ್ರೇಷ್ಠ ಕ್ರಿಕೆಟರ್ ಎಂದರೆ ಅದು ಧೋನಿ
  • ಯಶಸ್ಸು ಸಿಕ್ಕ ಮೇಲೆ ಬಂದ ದಾರಿಯನ್ನ ಮರೆಯದ ಕ್ಯಾಪ್ಟನ್.!
  • ಬಹುತೇಕರಿಗೆ ಧೋನಿ ಇಷ್ಟ ಆಗೋದು ಈ ಕಾರಣಗಳಿಂದಲೇ!

ನೇಮ್​​ ಆ್ಯಂಡ್ ಫೇಮ್​​​​​. ಎರಡು ಬಂದ್ಮೇಲೆ ಕೆಲ ಕ್ರಿಕೆಟಿಗರನ್ನ ಹಿಡಿಯೋಕೆ ಆಗಲ್ಲ. ಆಕಾಶದಲ್ಲೇ ಹಾರಾಡ್ತಾರೆ. ಅವರ ಜೀವನ ಶೈಲಿ, ಆ್ಯಟಿಡ್ಯೂಡ್​​​ ಎಲ್ಲವೂ ಬದಲಾಗುತ್ತೆ. ಆದ್ರೆ, ಎಲ್ಲವೂ ಸಿಕ್ಕ ಮೇಲೂ ಮೊದಲಿದ್ದಂತೆ ಇರೋರು ತುಂಬಾ ಕಡಿಮೆ. ಮಿಸ್ಟರ್​ ಕೂಲ್​ ಎಂ​.ಎಸ್​​ ಧೋನಿ ಅದರಲ್ಲಿ ಒಬ್ಬರು. ಸರಳತೆಯ ಸಾಹುಕಾರ ಎಂ​.ಎಸ್​ ಧೋನಿ ಮತ್ತೆ ತಮ್ಮ ನಡೆಯಿಂದಲೇ ಅಭಿಮಾನಿಗಳ ಮನ ಗೆದ್ದಿದ್ದಾರೆ.

ಮಹೇಂದ್ರ ಸಿಂಗ್ ಧೋನಿ..! ವಿಶ್ವಕ್ರಿಕೆಟ್​ನ ದಂತಕಥೆ. ಸರ್ವಕಾಲಕ್ಕೂ ಸಲ್ಲುವ ಶ್ರೇಷ್ಠ ಕ್ರಿಕೆಟರ್​​​. ಮಾಹಿಯ ಆಟ, ನಡೆ, ನುಡಿ ಎಲ್ಲವೂ ಅನುಕರಣೀಯ. ಧೋನಿಗೆ ಸಿಕ್ಕಿರೋ ಅಪಾರ ಯಶಸ್ಸು, ಗೌರವ ಎಲ್ಲಾರಿಗೂ ಸಿಗುವಂತದ್ದಲ್ಲ. ವಿಶ್ವವನ್ನೇ ಗೆದ್ದ ಇಂಥಾ ಧೋನಿಗೆ ಕೊಂಚವೂ ಹಮ್ಮು-ಬಿಮ್ಮಿಲ್ಲ. ನಿಜ ಹೇಳಬೇಕಂದ್ರೆ ಧೋನಿ ಒಬ್ಬ ಸರಳತೆಯ ಸಾಹುಕಾರ. ತಮ್ಮ ಖುಷಿಯ ಜೊತೆಗೆ ಫ್ಯಾನ್ಸ್​​ ಹಾಗೂ ಫ್ರೆಂಡ್ಸ್ ಕೂಡ ಖುಷಿಯಿಂದ ಇರಬೇಕು ಅಂತ ಬಯಸುವ ಹೃದಯವಂತ.

publive-image

ಆಪ್ತ ಗೆಳೆಯನಿಗೆ ಮಿಸ್ಟರ್​ ಕೂಲ್​ ಮಾಹಿ ಸರ್​​ಪ್ರೈಸ್​​​..!

ಧೋನಿ ತನ್ನ ಸರಳತೆಯಿಂದ ಆಗಾಗ ಇಡೀ ಜಗತ್ತಿನ ಗಮನ ಸೆಳೀತಾ ಇರ್ತಾರೆ. ಇದೇ ಕಾರಣಕ್ಕೆ ಧೋನಿ ಬಹುತೇಕರಿಗೆ ಇಷ್ಟ ಆಗೋದು ಕೂಡ. ಇದೀಗ ಮತ್ತೆ ಸುದ್ದಿಯಲ್ಲಿರೋದು ಮತ್ತೆ ಇದೇ ಸರಳತೆಯ ಕಾರಣಕ್ಕೆ.

ಸಾಮಾನ್ಯರಲ್ಲಿ ಸಾಮಾನ್ಯನಾಗಿ ವಿಶ್ವ ಕ್ರಿಕೆಟ್​ ಲೋಕ ಕಂಡ ಶ್ರೇಷ್ಠ ಕ್ಯಾಪ್ಟನ್​ ಹೇಗೆ ನಿಂತಿದ್ದಾರೆ ಅಂತಾ. ಇತ್ತೀಚೆಗೆ ಧೋನಿಯ ಸ್ನೇಹಿತರೊಬ್ಬರು ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದಾರೆ. ಈ ಬರ್ತ್​ಡೇ ಸೆಲಬ್ರೇಶನ್​ಗೆ ಧೋನಿ ಸರ್​​​ಪ್ರೈಸ್​ ಎಂಟ್ರಿಕೊಟ್ಟಿದ್ದಾರೆ. ಸಾಮಾನ್ಯನಂತೆ ನಿಂತು ಗೆಳೆಯನ ಹುಟ್ಟುಹಬ್ಬವನ್ನ ಆಚರಿಸಿದ್ದಾರೆ.

ಕೇಕ್​​ ತಿನ್ನಿಸಿದ ಧೋನಿ, ಆನಂದಭಾಷ್ಪ ಸುರಿಸಿದ ಗೆಳೆಯ

ಕೇಕ್​ ಕಟ್​ ಮಾಡಿದ ಗೆಳೆಯ ಧೋನಿ ಕೇಕ್​ ತಿನ್ನಿಸಲು ಮುಂದಾಗಿದ್ದಾರೆ. ಈ ವೇಳೆ ತಡೆದ ಧೋನಿ ಪಕ್ಕದಲ್ಲಿದ್ದವರಿಗೆ ತಿನ್ನಿಸಲು ಸೂಚಿಸಿ ಹಾಸ್ಯ ಚಟಾಕಿ ಹಾರಿಸಿದ್ದಾರೆ. ಆ ಬಳಿಕ ತಾವು ಮುಂದೆ ಬಂದು ಗೆಳೆಯನಿಗೆ ಮೊದಲು ಕೇಕ್​ ತಿನ್ನಿಸಿದ್ದಾರೆ. ಈ ವೇಳೆ ಸಂತೋಷದಲ್ಲಿ ಗೆಳೆಯ ಆನಂದಭಾಷ್ಪ ಸುರಿಸಿದ್ದಾರೆ.

ಈ ವರ್ಷ ಮಾತ್ರವಲ್ಲ.. ಕಳೆದ ವರ್ಷ ಕೂಡ ಧೋನಿ ತಮ್ಮ ಗೆಳೆಯನ ಹುಟ್ಟುಹಬ್ಬದ ಸೆಲಬ್ರೇಷನ್​ನಲ್ಲಿ ಭಾಗಿಯಾಗಿದ್ದರು. ಆಗಲೂ ಸಾಮಾನ್ಯನಂತೆ ನಿಂತು ಧೋನಿ ಸಂಭ್ರಮಿಸಿದರು. ಅಂದು ಫ್ಯಾಮಿಲಿಯವರಿಗೆ ಆದ ಸಂತಸವನ್ನಂತೂ ಹೇಳತೀರದು.

ಇದನ್ನೂ ಓದಿ:ರಿಂಕು ಸಿಂಗ್, ಸಂಸದೆ ಪ್ರಿಯಾ ಸರೋಜ್ ಮದುವೆ ದಿನ ಮುಂದೂಡಿಕೆ.. ಕಾರಣವೇನು?

publive-image

ಧೋನಿಯ ಈ ಆಪ್ತ ಗೆಳೆಯ ಯಾರು ಗೊತ್ತಾ.?

ಅಂದ್ಹಾಗೆ ಧೋನಿಯ ಈ ಆಪ್ತ ಗೆಳೆಯನ ಹೆಸರು. ಸುರೆಂದರ್​ ಕಾಕಾ ಅಂತ. ಭಾರತದ ಮಾಜಿ ಟೆನ್ನಿಸ್​ ಪ್ಲೇಯರ್​​. 1977ರಲ್ಲಿ ಥಾಯ್ಲೆಂಡ್​ನಲ್ಲಿ ನಡೆದಿದ್ದ ಏಷ್ಯನ್​ ಗೇಮ್ಸ್​ನಲ್ಲಿ ಗೋಲ್ಡ್​ ಮೆಡಲ್​ ಗೆದ್ದ ಸಾಧಕ. ಈ ಸುರೆಂದರ್​ ಕಾಕಾ ಮತ್ತು ಧೋನಿ ಬಹುಕಾಲದ ಗೆಳೆಯರು. ಸದ್ಯ ಕಾಕಾ ಜಾರ್ಖಂಡ್​ನಲ್ಲಿ ಟೆನ್ನಿಸ್​ ಅಕಾಡೆಮಿ ನಡೆಸ್ತಿದ್ದಾರೆ. ಈ ಅಕಾಡೆಮಿಯಲ್ಲೇ ಧೋನಿ ಕೂಡ ಹಲವು ವರ್ಷಗಳಿಂದ ಅಭ್ಯಾಸ ನಡೆಸ್ತಿದ್ದಾರೆ.

ಸುರೆಂದರ್​ ಕಾಕಾ ವಿಚಾರದಲ್ಲಿ ಮಾತ್ರವಲ್ಲ, ಧೋನಿ ತಮ್ಮ ಆಪ್ತರನ್ನ ತುಂಬಾ ಕೇರ್​ ಮಾಡ್ತಾರೆ. ಯಶಸ್ಸು ಸಿಕ್ಕ ಮೇಲೆ ನಡೆದು ಬಂದ ದಾರಿಯನ್ನೇ ಮರೆಯೋರೆ ಹೆಚ್ಚು. ಆದ್ರೆ, ಮಾಹಿ ತಾವು ಖುಷಿ ಆಗಿರೋದಲ್ಲದೇ ತಮ್ಮ ಸುತ್ತಮುತ್ತಲಿನವರು ಖುಷಿಯಿಂದ ಇರಬೇಕು ಅಂತ ಬಯಸ್ತಾರೆ. ನಿಜಕ್ಕೂ ಧೋನಿಯದ್ದು ಎಂಥಾ ಕ್ಯಾರಕ್ಟರ್ ಅಲ್ವಾ?.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment