‘ನಾನು ವೀಲ್‌ಚೇರ್‌ನಲ್ಲಿದ್ರೂ CSK ಎಳೆದು ತಂದು ಕ್ರಿಕೆಟ್​ ಆಡಿಸುತ್ತೆ’.. MS ಧೋನಿ ಹೀಗೆ ಅಂದಿದ್ಯಾಕೆ?

author-image
Bheemappa
Updated On
‘ನಾನು ವೀಲ್‌ಚೇರ್‌ನಲ್ಲಿದ್ರೂ CSK ಎಳೆದು ತಂದು ಕ್ರಿಕೆಟ್​ ಆಡಿಸುತ್ತೆ’.. MS ಧೋನಿ ಹೀಗೆ ಅಂದಿದ್ಯಾಕೆ?
Advertisment
  • ಇದೇ ಮೊದಲ ಬಾರಿಗೆ ನಿವೃತ್ತಿ ಕುರಿತು ಮಾತನಾಡಿದ ಧೋನಿ
  • ಮುಂಬೈ ವಿರುದ್ಧ ಸೂಪರ್ ಫಾಸ್ಟ್ ಸ್ಟಂಪ್ ಔಟ್ ಮಾಡಿದ ತಲಾ​
  • ತಮ್ಮ ರಿಟೈರ್​​ಮೆಂಟ್​ ಬಗ್ಗೆ ಧೋನಿ ಅವ್ರು ಹೇಳಿರುವುದು ಇಲ್ಲಿದೆ

ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್​ನ ದಂತಕಥೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸತತ 18ನೇ ಆವೃತ್ತಿಯಲ್ಲೂ ಕಣಕ್ಕೆ ಇಳಿದಿದ್ದಾರೆ. 43 ವರ್ಷಗಳು ಕಳೆದರೂ ಅವರ ಕ್ರಿಕೆಟ್ ಉತ್ಸಾಹ ಕಡಿಮೆ ಆಗಿಲ್ಲ. ಶರವೇಗದಲ್ಲೇ ವಿಕೆಟ್ ಕೀಪಿಂಗ್ ಮಾಡುವ ಚಾಣಕ್ಷತೆ ಇನ್ನೂ ಅವರಲ್ಲಿದೆ. ಅಲ್ಲದೇ ತಮ್ಮ ನಿವೃತ್ತಿ ಕುರಿತು ಇದೇ ಮೊದಲ ಬಾರಿಗೆ ಎಂ.ಎಸ್ ಧೋನಿ ಮೌನ ಮುರಿದಿದ್ದಾರೆ.

ಎಂಎಸ್​ ಧೋನಿ ಅವರು ಜಿಯೋ ಹಾಟ್​ಸ್ಟಾರ್ ಜೊತೆ ಮಾತನಾಡುವಾಗ ಐಪಿಎಲ್​ನಲ್ಲಿ ತಮ್ಮ ನಿವೃತ್ತಿ ಬಗ್ಗೆ ತಮಾಷೆಯಾಗಿ ಹೇಳಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಕ್ಯಾಪ್ಟನ್ಸಿ ಇಂದ ಕೆಳಗಿಳಿದರೂ ಸಿಎಸ್​ಕೆ ಜೊತೆ ಈಗಲೂ ಮುಂದುವರೆಯುತ್ತಿದ್ದೇನೆ. ಒಂದು ವೇಳೆ ನಾನು ಏನಾದರೂ ವೀಲ್‌ಚೇರ್‌ನಲ್ಲಿ ಇದ್ದರೂ ಸಹ ಫ್ರಾಂಚೈಸಿಯವರು ನನ್ನನ್ನು ಎಳದು ತಂದು ಕ್ರಿಕೆಟ್ ಆಡಿಸುತ್ತಾರೆ ಎಂದು ನಗುತ್ತಲೇ ಪ್ರಶ್ನೆಗೆ ಉತ್ತರಿಸಿದ್ದಾರೆ.

ಇದನ್ನೂ ಓದಿ: 0.12 ಸೆಕೆಂಡ್, MS ಧೋನಿ ಸೂಪರ್ ಫಾಸ್ಟ್​ ಸ್ಟಂಪ್ ಔಟ್.. ಸೂರ್ಯ ಕುಮಾರ್ ಬೇಸರ! -Video

publive-image

ನಾನು ಸಿಎಸ್‌ಕೆ ಪರ ಎಷ್ಟು ಕಾಲ ಬೇಕಾದರೂ ಆಡಬಲ್ಲೆ, ಅದು ನನ್ನ ಫ್ರಾಂಚೈಸಿ ಎಂದಿದ್ದಾರೆ. ಫ್ರಾಂಚೈಸಿಯು ಅವರ ಸಾಮರ್ಥ್ಯದ ಬಗ್ಗೆ ಮಾತನಾಡಿದ್ದು, ಅವರ ಶಕ್ತಿಯ ಕುರಿತು ಅನುಮಾನ ಬೇಡ. ಈ ವಯಸ್ಸಿನಲ್ಲೂ ಅವರು ಬೌಂಡರಿಯ ಆಚೆ ಬಾಲ್ ಬಾರಿಸುತ್ತಾರೆ. ಮಾತ್ರವಲ್ಲ, ಅಭ್ಯಾಸದ ಸಮಯದಲ್ಲಿ ಸ್ಟ್ಯಾಂಡ್‌ಗಳಿಗೂ ಸಿಕ್ಸರ್‌ಗಳನ್ನು ಬಾರಿಸುತ್ತಿದ್ದಾರೆ. ಧೋನಿಗೆ ವಯಸ್ಸು ಕೇವಲ ಒಂದು ಸಂಖ್ಯೆ ಅಷ್ಟೇ ಎಂದು ಅವರು ಹೇಳಿದರು.

ಧೋನಿ ನೇತೃತ್ವದಲ್ಲಿ ಸಿಎಸ್‌ಕೆ ಐಪಿಎಲ್​ ಇತಿಹಾಸದಲ್ಲಿ ಐದು ಬಾರಿ ಟ್ರೋಫಿಯನ್ನು ಗೆದ್ದುಕೊಂಡಿದೆ. ಆದರೆ 2023ರ ಐಪಿಎಲ್​ನಿಂದ ಎಂ.ಎಸ್ ಧೋನಿ ಮೊಣಕಾಲಿನ ಗಾಯದಿಂದ ಬಳಲುತ್ತಿದ್ದಾರೆ. ಅವರು ಈ ಬಾರಿ ನಿವೃತ್ತಿ ಘೋಷಣೆ ಮಾಡುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ ಈಗಾಗಲೇ ಮುಂಬೈ ಇಂಡಿಯನ್ಸ್​ ವಿರುದ್ಧ ಅಖಾಡಕ್ಕೆ ಇಳಿದು ವಿಕೆಟ್​ ಹಿಂದೆ ತಮ್ಮ ಚಾಣಕ್ಷತೆ ತೋರಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment