/newsfirstlive-kannada/media/post_attachments/wp-content/uploads/2024/10/DHONI_NEW.jpg)
ಕ್ರಿಕೆಟ್​ನಲ್ಲಿ ಪಾಕಿಸ್ತಾನ ವಿರುದ್ಧ ಟೀಮ್​ ಇಂಡಿಯಾ ಗೆದ್ದಾಗ ಪಾಕ್​ ಅಭಿಮಾನಿಗಳು ಟಿವಿಗಳನ್ನ ಒಡೆದು ಆಕ್ರೋಶ ಹೊರ ಹಾಕಿರೋದನ್ನ ನೀವು ಕೇಳಿರ್ತಿರಾ. ವಿಡಿಯೋಗಳನ್ನ ನೋಡಿರ್ತಿರಾ.. ಅದೇ ರೀತಿ RCB ವಿರುದ್ಧದ ಪಂದ್ಯದ ಬಳಿಕ ಕೂಲ್​ ಕ್ಯಾಪ್ಟನ್​ ಎಂ​.ಎಸ್​ ಧೋನಿ ಟಿವಿ ಪುಡಿ ಪುಡಿ ಮಾಡಿದ ಘಟನೆಯೊಂದಿದೆ.
/newsfirstlive-kannada/media/post_attachments/wp-content/uploads/2024/10/DHONI_KOHLI.jpg)
ಎಂ​.ಎಸ್​ ಧೋನಿ ವಿಶ್ವ ಕ್ರಿಕೆಟ್ ಕಂಡ ಮಿಸ್ಟರ್​ ಪರ್ಫೆಕ್ಟ್​. ನಾಯಕತ್ವ, ಕೀಪಿಂಗ್, ಬ್ಯಾಟಿಂಗ್​, ಫಿನಿಶಿಂಗ್​ ಎಲ್ಲರದಲ್ಲೂ ಧೋನಿ ಮಿಸ್ಟರ್​ ಪರ್ಫೆಕ್ಟ್​. ಆಟದ ಜೊತೆಗೆ ತನ್ನ ಕೂಲ್​ & ಕಾಮ್​ ಆ್ಯಟಿಟ್ಯೂಡ್​ನಿಂದ ಧೋನಿ ಫೇಮಸ್​. ಅದಕ್ಕೆ ಫ್ಯಾನ್ಸ್​​ ಧೋನಿಯನ್ನ ಮಿಸ್ಟರ್​ ಕೂಲ್​ ಅನ್ನೋದು. ಆದ್ರೆ, ಈ ಮಿಸ್ಟರ್​ ಕೂಲ್​​ಗೆ ಕೋಪ ಬಂದ್ರೆ ಏನಾಗುತ್ತಾ ಗೊತ್ತಾ?.
ಇದನ್ನೂ ಓದಿ:ರೋಚಕ ಘಟ್ಟ ತಲುಪಿದ ಭಾರತ-ಬಾಂಗ್ಲಾ ಟೆಸ್ಟ್​.. ಕೊಹ್ಲಿ, KL ರಾಹುಲ್ ಬ್ಯಾಟಿಂಗ್ ಆರ್ಭಟ ಹೇಗಿತ್ತು?
17ನೇ ಸೀಸನ್ ಐಪಿಎಲ್​​ನ ಕೊನೆ ಲೀಗ್​ ಪಂದ್ಯ ನಿಮಗೆ ನೆನಪಿರಬಹುದು. ಪ್ಲೇ ಆಫ್​ ದೃಷ್ಟಿಯಿಂದ ಚಿನ್ನಸ್ವಾಮಿಯಲ್ಲಿ ನಡೆದ ಪಂದ್ಯ ಎರಡೂ ತಂಡಗಳ ಪಾಲಿಗೆ ಅದು ಡು ಆರ್​ ಡೈ ಆಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ್ದ ಆರ್​​ಸಿಬಿ 218 ರನ್​ ಗಳಿಸಿತ್ತು. 219 ರನ್​ಗಳ ಟಾರ್ಗೆಟ್​ ಬೆನ್ನತ್ತಿದ ಚೆನ್ನೈ ಸೂಪರ್​ ಕಿಂಗ್ಸ್​ ಗೆಲುವಿನಂಚಿನಲ್ಲಿ ಎಡವಿತ್ತು. 27 ರನ್​ಗಳಿಂದ ಆರ್​​ಸಿಬಿ ಗೆದ್ದು ಪ್ಲೇ ಆಫ್​ ಎಂಟ್ರಿ ಕೊಟ್ರೆ, ಸೋತ ಸಿಎಸ್​ಕೆ ಟೂರ್ನಿಯಿಂದ ಹೊರ ಬಿದ್ದಿತ್ತು.
/newsfirstlive-kannada/media/post_attachments/wp-content/uploads/2024/10/harbhajan_singh.jpg)
ಪಂದ್ಯದಲ್ಲಿ 13 ಎಸೆತಗಳಲ್ಲಿ 25 ರನ್​ ಸಿಡಿಸಿದ್ದ ಧೋನಿ, ಬ್ಯಾಡ್​ ಶಾಟ್​ ಬಾರಿಸಿ ಔಟಾಗಿದ್ರು. ಅಂದು ಗೆಲುವಿನ ದಡ ಸೇರಿಸುವಲ್ಲಿ ವಿಫಲರಾಗಿದ್ದಕ್ಕೆ, ಮಿಸ್ಟರ್​ ಕೂಲ್​ ಧೋನಿ ಕೆಂಡಾಮಂಡಲ ಆಗಿದ್ರಂತೆ. ಇದೇ ಕಾರಣಕ್ಕೆ ಪಂದ್ಯ ಬಳಿಕ ಪ್ಲೇಯರ್ಸ್​​ ಜೊತೆಗೆ ಹ್ಯಾಂಡ್​ ಶೇಕ್​ ಮಾಡಲೂ ಕೂಡ ಧೋನಿ ಹೊರ ಬಂದಿರಲಿಲ್ಲ. ಇಷ್ಟೇ ಅಲ್ಲ, ಧೋನಿಯ ಕೋಪಕ್ಕೆ ಡ್ರೆಸ್ಸಿಂಗ್​ ರೂಮ್​ನಲ್ಲಿದ್ದ ಟಿವಿ ಕೂಡ ಪೀಸ್​ ಪೀಸ್​ ಆಗಿತ್ತಂತೆ. ಗಟ್ಟಿಯಾದ ವಸ್ತುವೊಂದನ್ನ ಟಿವಿಯೆಡೆಗೆ ಧೋನಿ ಎಸೆದಿದ್ರು. ಇದ್ರಿಂದ ಟಿವಿ ನುಚ್ಚು ನೂರಾಗಿತ್ತು ಅನ್ನೋ ಮಾಹಿತಿಯನ್ನ ಹರ್ಭಜನ್​ ಸಿಂಗ್​ ರಿವೀಲ್​ ಮಾಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us