newsfirstkannada.com

ಅತಿಯಾದ್ರೆ ಅಮೃತವೂ ವಿಷ, ಧೋನಿ ಅಭಿಮಾನಿ ಮಾಡಿದ್ದು ಸರಿನಾ.. ಸೋಶಿಯಲ್ ಮೀಡಿಯಾದಲ್ಲಿ ಪರ- ವಿರೋಧ ಚರ್ಚೆ

Share :

Published April 15, 2024 at 11:04am

    ಐಪಿಎಲ್​ ಟಿಕೆಟ್ ಖರೀದಿಸಿದ್ದ ಧೋನಿ ಫ್ಯಾನ್ ಹೇಳುವುದೇನು?

    43ನೇ ವಯಸ್ಸಿನಲ್ಲೂ MS ಧೋನಿಗೆ ಹ್ಯೂಜ್​​ ಫ್ಯಾನ್ ಬೇಸ್​ ಇದೆ

    ಸ್ಕೂಲ್ ಫೀಸ್​ನಿಂದ IPL ಟಿಕೆಟ್ ಖರೀದಿಸಿದ್ದ ಧೋನಿ ಫ್ಯಾನ್

ಕ್ರೇಜ್​​ಗೆ ಇನ್ನೊಂದು ಹೆಸರೇ ಮಹೇಂದ್ರ ಸಿಂಗ್ ಧೋನಿ. 43ನೇ ವಯಸ್ಸಿನಲ್ಲಿ ತಲಾ ಧೋನಿಗೆ ಹ್ಯೂಜ್​​ ಫ್ಯಾನ್ ಬೇಸ್​ ಇದೆ. ಐಪಿಎಲ್​​​​​​ ಬಂದ್ರಂತೂ ಮುಗಿದೆ ಹೋಯ್ತು. ಫ್ಯಾನ್ಸ್​​ ಮಾಹಿ ಆಟ ನೋಡಲು ನೋಡಲು ಎರಡು ತಿಂಗಳ ಟಿವಿ ಮುಂದೆ ಠಿಕಾಣಿ ಹೂಡ್ತಾರೆ. ಅದ್ರಲ್ಲೂ ತಮಿಳಿನಾಡಿನ ಕ್ರಿಕೆಟ್ ಪ್ರೇಮಿಗಳಂತೂ ಧೋನಿಯನ್ನ ದೇವರಂತೆ ಕಾಣ್ತಾರೆ. ಯಾರೊಬ್ಬರಿಗೂ ಸಿಗದಷ್ಟು ಪ್ರೀತಿ ಮಹಿಗೆ ಸಿಕ್ಕಿದೆ. ನಿಜಕ್ಕೂ ಧೋನಿ ಅದೃಷ್ಟವಂತ ಬಿಡಿ.

ಮಕ್ಕಳ ಸ್ಕೂಲ್ ಫೀಸ್​ ಕಟ್ಟದೇ ಮ್ಯಾಚ್ ವೀಕ್ಷಿಸಿದ ತಂದೆ

ಅತಿಯಾದ್ರೆ ಅಮೃತವೂ ವಿಷ ಅಂತಾರೆ. ಸದ್ಯ ಆ ಮಾತು ಧೋನಿಯ ಅಭಿಮಾನಿಯ ಅಭಿಮಾನದ ವಿಚಾರದಲ್ಲಿ ನಿಜವಾಗಿದೆ.

ನಮಗೆ ಟಿಕೆಟ್ ಸಿಗಲಿಲ್ಲ. ಬ್ಲ್ಯಾಕ್​ನಲ್ಲಿ 64,000 ರೂಪಾಯಿಗೆ ಟಿಕೆಟ್​ ಖರೀದಿಸಿದೆ. ಮಕ್ಕಳ ಸ್ಕೂಲ್ ಫೀಸ್​​​ ಕಟ್ಟಬೇಕು. ಆದರೆ ಅದನ್ನ ಆಮೇಲೆ ಕಟ್ಟಿದರೆ ಆಯ್ತು. ಮೊದಲು ಧೋನಿಯನ್ನ ನೋಡಬೇಕು. ನನ್ನ ಮಕ್ಕಳು ಧೋನಿಯನ್ನ ನೋಡಿದ್ರು. ತುಂಬಾ ಖುಷಿ ಆಯ್ತು. ಸಿಎಸ್​ಕೆ ಗೆಲುವಿನ ಮೇಲೆ ಗೆಲುವು ದಾಖಲಿಸುತ್ತಲೇ ಇರುತ್ತೆ ಎಂದು ಟಿಕೆಟ್ ಖರೀದಿ ಮಾಡಿ ಮ್ಯಾಚ್ ನೋಡಿದ ವ್ಯಕ್ತಿ ಹೇಳಿದ್ದಾರೆ.

ಯಾವ ಟೈಪ್​​​​​ ಫ್ಯಾನ್ಸ್ ಇರ್ತಾರೆ ಅನ್ನೋದನ್ನ ನಿಜಕ್ಕೂ ಊಹಿಸೋದೆ ಅಸಾಧ್ಯ. ಅದಕ್ಕೆ ತಾಜಾ ಉದಾಹರಣೆ ಧೋನಿಯ ಈ ಅಭಿಮಾನಿ. ಚೆಪಾಕ್​ನಲ್ಲಿ ಸಿಎಸ್​ಕೆ ಹಾಗೂ ಕೆಕೆಆರ್ ತಂಡಗಳು ಮುಖಾಮುಖಿಯಾಗಿದ್ವು. ಈ ಪಂದ್ಯವನ್ನ ನೋಡಲು ಧೋನಿಯನ್ನ ನೋಡಲಂತನೇ ಬರೋಬ್ಬರಿ 64 ಸಾವಿರ ರೂಪಾಯಿ ಕೊಟ್ಟು ಬ್ಲ್ಯಾಕ್​​​ನಲ್ಲಿ ಟಿಕೆಟ್ ಖರೀಸಿದ್ದ. ಅದು ಮಕ್ಕಳಿಗಾಗಿ ಕೂಡಿಟ್ಟ ಸ್ಕೂಲ್​ ಫೀಸ್​​ನಲ್ಲಿ. ಮಹಿಯನ್ನ ನೋಡುವ ಒಂದೇ ಕಾರಣಕ್ಕೆ ಮಕ್ಕಳ ಶಿಕ್ಷಣವನ್ನ ಲೆಕ್ಕಿಸದೇ ತಂದೆ 64,000 ರೂಪಾಯಿ ಕೊಟ್ಟು ಮ್ಯಾಚ್ ವೀಕ್ಷಿಸಿದ್ದಾರೆ.

ಮಕ್ಕಳ ಶಿಕ್ಷಣಕ್ಕಿಂತ ಕ್ರಿಕೆಟ್​ ಮ್ಯಾಚ್​ ದೊಡ್ಡದಾಯ್ತಾ..?

ಧೋನಿ ಅಭಿಮಾನಿಯೊಬ್ಬ ಮಕ್ಕಳ ಸ್ಕೂಲ್​ ಫೀಸ್ ಕಟ್ಟದೇ ಮ್ಯಾಚ್​ ನೋಡಿದೆ ಅನ್ನುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಜೊತೆಗೆ ಪರ ವಿರೋಧದ ಚರ್ಚೆಗೆ ಅವಕಾಶ ಮಾಡಿಕೊಟ್ಟಿದೆ. ಬಹುತೇಕರು ತಂದೆಯ ಈ ನಿರ್ಧಾರವನ್ನ ಟೀಕಿಸಿದ್ದಾರೆ. ಇದೊಂದು ಮೂರ್ಖತನದ ನಿರ್ಧಾರ. ಅಭಿಮಾನಕ್ಕಾಗಿ ಮಕ್ಕಳ ಭವಿಷ್ಯವನ್ನ ಬಲಿ ಕೊಡುವುದು ಎಷ್ಟು ಸರಿ ? ಮ್ಯಾಚ್​ಗಿಂತ ಶಿಕ್ಷಣ ದೊಡ್ಡದು. ಇದು ಪ್ಯೂರ್​​ ಅಂದಾಭಿಮಾನ ಎಂದು ಕೆಲವರು ಹೇಳಿದ್ದಾರೆ. ಧೋನಿ ನೋಡುವ ಮಕ್ಕಳ ಆಸೆಯನ್ನ ತಂದೆ ಈಡೇರಿಸಿದ್ದಾರೆ ಎಂದು ಅವರ ಪರ ಬ್ಯಾಟ್ ಬೀಸಿದ್ದಾರೆ.

ಪರ-ವಿರೋಧದ ಚರ್ಚೆ ಏನೇ ಇರ್ಲಿ. ಫ್ಯಾನ್ಸ್ ನೆಚ್ಚಿನ ಆಟಗಾರರ ಮೇಲೆ ಅಭಿಮಾನ ವ್ಯಕ್ತಪಡಿಸುವುದು ತಪ್ಪಲ್ಲ. ಆದರೆ ಅಂದಾಭಿಮಾನ ತಲೆಗೇರಿಸಿಕೊಳ್ಳುವುದು ನಿಜಕ್ಕೂ ತಪ್ಪು. ಕ್ರಿಕೆಟ್ ಪ್ರೇಮಿಗಳು ಇನ್ನಾದ್ರೂ ಇದನ್ನ ಅರ್ಥ ಮಾಡಿಕೊಳ್ಳಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಅತಿಯಾದ್ರೆ ಅಮೃತವೂ ವಿಷ, ಧೋನಿ ಅಭಿಮಾನಿ ಮಾಡಿದ್ದು ಸರಿನಾ.. ಸೋಶಿಯಲ್ ಮೀಡಿಯಾದಲ್ಲಿ ಪರ- ವಿರೋಧ ಚರ್ಚೆ

https://newsfirstlive.com/wp-content/uploads/2024/04/DHONI_FAN.jpg

Load More