MS ಧೋನಿ ಮುಂದಿನ ಪಂದ್ಯ​ ಆಡೋದೇ ಡೌಟ್.. ನಿವೃತ್ತಿ ಚರ್ಚೆ ಬಗ್ಗೆ ಕೊನೆಗೂ ತುಟಿ ಬಿಚ್ಚಿ ಹೇಳಿದ್ದೇನು?

author-image
admin
Updated On
MS ಧೋನಿ ಮುಂದಿನ ಪಂದ್ಯ​ ಆಡೋದೇ ಡೌಟ್.. ನಿವೃತ್ತಿ ಚರ್ಚೆ ಬಗ್ಗೆ ಕೊನೆಗೂ ತುಟಿ ಬಿಚ್ಚಿ ಹೇಳಿದ್ದೇನು?
Advertisment
  • 2019 ರಿಂದ 2023 ರವರೆಗೂ ಪ್ರತಿ ಐಪಿಎಲ್​​ನಲ್ಲೂ ಧೋನಿ ನಿವೃತ್ತಿ ಚರ್ಚೆ
  • ಈ ಆನ್ಸರ್​ ನೋಡಿದ್ರೆ, ಧೋನಿಗೆ ಇದೇ ಕೊನೆಯ ಐಪಿಎಲ್ ಸಾಧ್ಯತೆ
  • ಮೇ 12ಕ್ಕೆ ಸಿಎಸ್​ಕೆ ಚೆಪಾಕ್​ನಲ್ಲಿ ಲೀಗ್​ ಹಂತದ ಕೊನೆಯ ಪಂದ್ಯ

ಐಪಿಎಲ್ ಸೀಸನ್-18 ಧೋನಿ ಪಾಲಿಗೆ ಕೊನೆಯ ಐಪಿಎಲ್ ಆಗುತ್ತಾ? 5 ವರ್ಷಗಳಿಂದ ಧೋನಿ ನಿವೃತ್ತಿ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ಆಗ್ತಿದೆ. ಈ ಸೀಸನ್​ ಆರಂಭಕ್ಕೂ ಮುನ್ನ ಕೂಡ ಇದೇ ಚರ್ಚೆ ನಡೆದಿತ್ತು. ಇದೀಗ ನಿನ್ನೆಯ ಪಂಜಾಬ್​ ವಿರುದ್ಧದ ಪಂದ್ಯಕ್ಕೂ ಮುನ್ನ ನಿವೃತ್ತಿ ಬಗ್ಗೆ ಧೋನಿ ತುಟಿ ಬಿಚ್ಚಿದ್ದಾರೆ.

2019 ಟು 2023..! ಧೋನಿ ನಿವೃತ್ತಿಯದ್ದೇ ಚರ್ಚೆ..!
ಇದು ಒಂದಲ್ಲ.. ಎರಡಲ್ಲ.. ಐದು ವರ್ಷದ ಕಥೆ. 2019 ರಿಂದ 2023 ರವರೆಗೂ ಪ್ರತಿ ಐಪಿಎಲ್​​ನಲ್ಲೂ, ಧೋನಿ ನಿವೃತ್ತಿಯ ಚರ್ಚೆ ನಡೆದೇ ನಡೆಯುತ್ತೆ. ಇದೇ ಧೋನಿಯ ಕೊನೆಯ ಐಪಿಎಲ್ ಅಂತ, 5 ವರ್ಷಗಳಿಂದ ಕೇಳಿದ್ದೇ ಕೇಳಿದ್ದು. ಆದ್ರೆ, ಎಷ್ಟೇ ಜೋರಾಗಿ ಆ ಚರ್ಚೆ ನಡೆದ್ರೂ ಅಂತಿಮವಾಗಿ ಸೈಲೆಂಟ್​ ಆಗಿ ಆನ್ಸರ್​ ಕೊಡ್ತಿದ್ದ ಧೋನಿ ನಿವೃತ್ತಿ ಸುದ್ದಿಯನ್ನ ಸಾರಾಸಗಟಾಗಿ ತಿರಸ್ಕರಿಸ್ತಿದ್ರು.

publive-image

ನಿವೃತ್ತಿ ವಿಚಾರದಲ್ಲಿ ಶಾಕ್​ ಕೊಟ್ಟ ಧೋನಿ.!
ನೆಕ್ಸ್ಟ್​​ ಸೀಸನ್​ ಅಲ್ಲ.. ನೆಕ್ಸ್ಟ್​ ಮ್ಯಾಚ್​ ಆಡೋದೆ ಡೌಟ್.!
ಈ ಹಿಂದೆ ಪ್ರತಿ ಬಾರಿ ನಿವೃತ್ತಿ ಸುದ್ದಿ ಎದುರಾದಾಗಲೂ ಧೋನಿ ಡೆಫಿನೆಟ್ಲಿ ನಾಟ್​ ಎಂದು ಕಾನ್ಫಿಡೆಂಟ್​ ಉತ್ತರ ಕೊಡ್ತಿದ್ರು. ಆದ್ರೆ, ಈ ಬಾರಿ ಧೋನಿ ನಿವೃತ್ತಿ ವಿಚಾರದಲ್ಲಿ ಅಡ್ಡ ಗೋಡೆ ಮೇಲೆ ದೀಪವಿಟ್ಟಿದ್ದಾರೆ.

ಧೋನಿ ಹೇಳಿದ್ದೇನು?
ಇದರ ಅರ್ಥ ಮುಂದಿನ ಸೀಸನ್​ನಲ್ಲೂ ನೀವು ಆಡ್ತೀರಾ.? ನನಗೆ ಗೊತ್ತಿಲ್ಲ. ಮುಂದಿನ ಪಂದ್ಯಕ್ಕೆ ಬರ್ತಿನಾ ಅನ್ನೋದೆ ನನಗೆ ಗೊತ್ತಿಲ್ಲ.

ಈ ಸೀಸನ್​ನಲ್ಲಿ ಸಿಎಸ್​ಕೆ ಅತ್ಯಂತ ಹೀನಾಯ ಪರ್ಫಾಮೆನ್ಸ್​ ನೀಡ್ತಿದೆ. ಪಾಯಿಂಟ್ಸ್​ ಟೇಬಲ್‌ನಲ್ಲಿ ಪಾತಾಳಕ್ಕೆ ಕುಸಿದಿದೆ. ಅಟ್ಟರ್​ಫ್ಲಾಪ್​ ಪ್ರದರ್ಶನ ಬದಲಾವಣೆಯ ಬಿರುಗಾಳಿಯನ್ನ ಬೀಸಿದೆ. ಈಗಾಗಲೇ ಯುವ ತಂಡ ಕಟ್ಟೋ ಪ್ರಯತ್ನಗಳು ನಡೀತಿವೆ. ಇದ್ರ ನಡುವೆ ಧೋನಿ ನಿವೃತ್ತಿಯ ಪ್ರಶ್ನೆಗೆ ಅಡ್ಡಗೋಡೆಯ ಮೇಲೆ ದೀಪವಿಟ್ಟಿದ್ದಾರೆ. ಈ ಆನ್ಸರ್​ ನೋಡಿದ್ರೆ, ಧೋನಿಗೆ ಇದೇ ಕೊನೆ ಐಪಿಎಲ್ ಆಗೋ ಸಾಧ್ಯತೆ ಹೆಚ್ಚಿದೆ.

publive-image

ಈ ಧೋನಿ ಹಳೇ ಧೋನಿಯಲ್ಲ..!
ಧೋನಿಗೀಗ 44 ವರ್ಷ. ಧೋನಿ ನೋಡೋಕೆ ಫುಲ್ ಫಿಟ್ ಆಗಿದ್ದಾರೆ. ಆದ್ರೆ, ಪ್ರಾಕ್ಟಿಕಲ್ ಆಗಿ ಹೇಳೋದಾದ್ರೆ, ಧೋನಿ ತನ್ನ ಹಳೆ ಚಾರ್ಮ್ ಕಳೆದುಕೊಂಡಿದ್ದಾರೆ. ಮಂಡಿ ಶಸ್ತ್ರ ಚಿಕಿತ್ಸೆಯ ನಂತರ, ಧೋನಿ ಹಳೇ ಧೋನಿಯಾಗಿ ಕಾಣ್ತಿಲ್ಲ. ಇಂಜುರಿಯ ನೋವು ಮತ್ತೆ ಮತ್ತೆ ಕಾಡ್ತಿದೆ. ಪಂದ್ಯದ ಬಳಿಕ ಕುಂಟುತ್ತಾ ನಡಿಯೋದು ಪದೇ ಪದೇ ಕಾಣ್ತಿದೆ.

ಇದನ್ನೂ ಓದಿ: ಪ್ಲೇ-ಆಫ್​ ರೇಸ್​ನಿಂದ ಅಧಿಕೃತವಾಗಿ ಹೊರಬಿದ್ದ ಧೋನಿ.. IPL ಇತಿಹಾಸದಲ್ಲಿ ಚೆನ್ನೈ ಕೆಟ್ಟ ದಾಖಲೆ..! 

ಚೆನ್ನೈನಲ್ಲೇ ನನ್ನ ಕೊನೆ ಪಂದ್ಯ..!
ನುಡಿದಂತೆ ನಡೆಯುತ್ತಾರಾ ತಲೈವಾ..?
ಕಳೆದ ವರ್ಷ ಚೆನ್ನೈ ಸೂಪರ್​ಕಿಂಗ್ಸ್​​, ಪಾಯಿಂಟ್​ ಟೇಬಲ್​ನಲ್ಲಿ 5ನೇ ಸ್ಥಾನ ಪಡೆದುಕೊಂಡು, ಪ್ಲೇ ಆಫ್​​​​ಗೆ ಕ್ವಾಲಿಫೈ ಆಗಿರಲಿಲ್ಲ. ಇದ್ರಿಂದ ಸಿಎಸ್​​​ಕೆ ಮತ್ತು ಧೋನಿ, ಭಾರೀ ನಿರಾಸೆಗೊಂಡಿದ್ದರು. ಆದ್ರೆ ಎಲ್ಲವೂ ಅಂದುಕೊಂಡಂತೆ ನಡೆದಿದ್ರೆ, ಧೋನಿ ಐಪಿಎಲ್​​ಗೆ ನಿವೃತ್ತಿ ಘೋಷಿಸೋಕೆ ರೆಡಿಯಾಗಿದ್ರು. ಆಗ ಧೋನಿಗೆ ಗುಡ್​​ಬೈ ಹೇಳೋಕೆ ಸೂಕ್ತ ವೇದಿಕೆ ಸಿಗಲಿಲ್ಲ. ಆದ್ರೆ, ಈ ಸೀಸನ್​​​ನಲ್ಲಿ ಧೋನಿಗೆ ವೇದಿಕೆಯೂ ಸಿಗ್ತಿದೆ. ಕನಸನ್ನ ಈಡೇರಿಸಿಕೊಳ್ಳೋ ಅವಕಾಶವೂ ಸಿಗ್ತಿದೆ.

publive-image

ರಾಜಸ್ಥಾನ್​ ವಿರುದ್ಧದ ಪಂದ್ಯದ ಬಳಿಕ ನಿವೃತ್ತಿ.?
ಟೀಮ್​ ಇಂಡಿಯಾ ನಾಯಕತ್ವ ತ್ಯಜಿಸಿದ್ದು, ಇಂಟರ್​​ನ್ಯಾಷನಲ್​ ಕ್ರಿಕೆಟ್​​ಗೆ ಗುಡ್​ ಬೈ ಹೇಳಿದ್ದು ಎಲ್ಲಾ ಫ್ಯಾನ್ಸ್​ಗೆ ಸರ್​​ಪ್ರೈಸ್​ ಅನಿಸಿದ್ರೂ ಧೋನಿಗೆ ಮಾತ್ರ ಈ ವಿಚಾರದಲ್ಲಿ ಕ್ಲಾರಿಟಿ ಹೊಂದಿದ್ರು. ನಿನ್ನೆ ಟಾಸ್​ ವೇಳೆ ಕೊಟ್ಟ ಆನ್ಸರ್​ ನೋಡಿದ್ರೆ, ಐಪಿಎಲ್ ನಿವೃತ್ತಿ ವಿಚಾರದಲ್ಲೂ ಧೋನಿ ಮೈಂಡ್ ಕ್ಲಿಯರ್ ಆದಂತಿದೆ. ಮೇ 12ಕ್ಕೆ ಸಿಎಸ್​ಕೆ ಚೆಪಾಕ್​ನಲ್ಲಿ ಲೀಗ್​ ಹಂತದ ಕೊನೆಯ ಪಂದ್ಯವನ್ನಾಡಲಿದೆ. ಇದೇ ಪಂದ್ಯವೇ ಧೋನಿ ಕೊನೆಯ ಐಪಿಎಲ್​ ಪಂದ್ಯವಾಗೋ ಸಾಧ್ಯತೆ ದಟ್ಟವಾಗಿದೆ.

publive-image

ಎಂಟ್ರಿಯಲ್ಲೇ ಅಂತ್ಯದ ಸೂಚನೆ ಕೊಟ್ಟಿದ್ದ ಧೋನಿ.!
ಈ ಬಾರಿ ಐಪಿಎಲ್​ ಟೂರ್ನಿಯಾಡಲು ಚೆನ್ನೈಗೆ ಬಂದಿಳಿದಾಗಲೇ ಧೋನಿ ಅಂತ್ಯದ ಸೂಚನೆ ನೀಡಿದ್ರು. ಅಂದು ಧೋನಿ ತೊಟ್ಟ ಟೀ ಶರ್ಟ್​​, ಅದ್ರ ಮೇಲಿದ್ದ Morse Code ನಿವೃತ್ತಿಯ ಸೂಚನೆ ನೀಡಿದ್ವು. ಅಂದು ತೊಟ್ಟಿದ್ದ ಟೀ-ಶರ್ಟ್​ ಮೇಲಿದ್ದ ಮೊದಲ ಸಾಲು O N E ಎಂಬ ಅಕ್ಷರವನ್ನ ಹೊಂದಿದ್ರೆ, 2ನೇ ಸಾಲು L A S T ಎಂಬ ಪದವನ್ನ ಸೂಚಿಸ್ತಿತ್ತು. ಕೊನೆ ಸಾಲು T I M E ಅಲ್ಬಬೆಟಿಕ್​​ ನಾ ಸೂಚನೆಯಾಗಿತ್ತು. ಅಂದ್ರೆ, ಒನ್ ಲಾಸ್ಟ್​ ಟೈಮ್ ಎಂಬ ಸಂದೇಶವನ್ನ ಆ ಟಿ ಶರ್ಟ್​ ಮೇಲಿದ್ದ ಅಕ್ಷರಗಳು ನೀಡಿದ್ವು.

ಐಪಿಎಲ್​ನಲ್ಲಿ ಧೋನಿ ದರ್ಬಾರ್ ಮುಗಿಯುವ ಟೈಮ್ ಹತ್ತಿರವಾದಂತಿದೆ. ಇದೇ ಸೀಸನ್​ನಲ್ಲಿ ಧೋನಿ ಗುಡ್​ ಬೈ ಹೇಳೋ ಸಾಧ್ಯತೆಯೂ ದಟ್ಟವಾಗಿದೆ. ಆದ್ರೆ, ನಿವೃತ್ತಿ ವಿಚಾರದಲ್ಲಿ ಧೋನಿ ಯಾವಾಗ್ಲೂ ಸರ್​​ಪ್ರೈಸ್​ ಹೆಜ್ಜೆಯನ್ನಿಡ್ತಾರೆ. ಹೀಗಾಗಿ ಧೋನಿ ತಲೆಯಲ್ಲಿ ಏನಿದೆ.? ಹೇಳಿಕೆ ಹಿಂದಿನ ಮರ್ಮ ಏನು.? ಅನ್ನೋದಕ್ಕೆ ಕಾಲವೇ ಉತ್ತರಿಸಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment