newsfirstkannada.com

ಟೀಂ ಇಂಡಿಯಾಗೆ ಮತ್ತೆರಡು ವೆಪನ್ ಗಿಫ್ಟ್​ ಕೊಟ್ಟ ಧೋನಿ.. ಇನ್ಮೇಲೆ ಮ್ಯಾಚ್ ಫಿನಿಷರ್ಸ್​ ಇವರೇ..!

Share :

Published January 16, 2024 at 1:40pm

Update January 16, 2024 at 1:42pm

    ಮ್ಯಾಚ್ ಫಿನಿಷರ್ಸ್​ ಗಿಫ್ಟ್​ ನೀಡಿದ ಧೋನಿ

    ನಯಾ ಫಿನಿಷರ್​​ಗಳ ಯಶಸ್ಸಿನ ಹಿಂದೆ ಮಹೇಂದ್ರ

    ಧೋನಿ ನೀಡಿದ್ರು ಟಿಪ್ಸ್​, ಸಿಕ್ಕೇ ಬಿಡ್ತು ಸಕ್ಸಸ್​

ಎಮ್​.ಎಸ್.ಧೋನಿ.. ಗ್ರೇಟ್ ಕ್ಯಾಪ್ಟನ್ ಮಾತ್ರವಲ್ಲ. ಗ್ರೇಟ್ ಮ್ಯಾಚ್ ಫಿನಿಷರ್ ಕೂಡ. ಧೋನಿ ನಿರ್ಗಮನದ ಬಳಿಕ ಟೀಮ್ ಇಂಡಿಯಾಗೆ ಸೂಕ್ತ ಮ್ಯಾಚ್ ಫಿನಿಷರ್ ಕೊರತೆ ಕಾಡ್ತಿತ್ತು. ಇದೀಗ ಅದೇ ಧೋನಿ, ಟೀಮ್ ಇಂಡಿಯಾಗೆ ಇಬ್ಬರು ಮ್ಯಾಚ್ ಫಿನಿಷರ್​​ಗಳನ್ನ ಗಿಫ್ಟ್​ ರೀತಿಯಲ್ಲಿ ಕೊಟ್ಟಿದ್ದಾರೆ.

ಎಮ್​.ಎಸ್.ಧೋನಿ, ವಿಶ್ವ ಕ್ರಿಕೆಟ್​ ಲೋಕದ ಗ್ರೇಟ್​​​ ಫಿನಿಷರ್​. ಅದೆಷ್ಟೋ ಮ್ಯಾಚ್​ಗಳನ್ನ ಸಿಂಗಲ್ ಹ್ಯಾಂಡೆಡ್ಲಿ ಗೆಲ್ಲಿಸಿಕೊಟ್ಟವರು. ಅಸಾಧ್ಯದ ಗುರಿ ಬೆನ್ನಟ್ಟಿದ ಅಪದ್ಬಾಂಧವ. ಈ ಗ್ರೇಟ್​ ಮ್ಯಾಚ್ ಫಿನಿಷರ್ ಅಂತಾರಾಷ್ಟ್ರೀಯ ಕ್ರಿಕೆಟ್​​ಗೆ ಗುಡ್​ ಬೈ ಹೇಳಿದ ಬಳಿಕ ಟೀಮ್​ ಇಂಡಿಯಾದಲ್ಲಿ ಸಮಸ್ಯೆ ಶುರುವಾಗಿ ಬಿಡ್ತು. ಮ್ಯಾಚ್ ಫಿನಿಷರ್​ಗಳ ಕೊರತೆ ಇನ್ನಿಲದೇ ಕಾಡಿದೆ.

ಧೋನಿ ನಿರ್ಗಮನದ ಬಳಿಕ ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್​​​​​​​​​ ಹೀಗೆ ಒಂದಿಬ್ಬರೂ ಬಂದರೂ, ಪರ್ಫೆಕ್ಟ್​ ಆಗಿ ಫಿನಿಷರ್ ರೋಲ್ ಪ್ಲೇ ಮಾಡುವಲ್ಲಿ ವಿಫಲರಾಗಿದ್ರು. ಇದೀಗ ಈ ರೋಲ್​ ನಿಭಾಯಿಸುವ ಸಲುವಾಗಿಯೇ ಮಾಹಿ ಎರಡು ವೆಪನ್​​ಗಳನ್ನ ಟೀಮ್ ಇಂಡಿಯಾಗೆ ಗಿಫ್ಟ್​ ಆಗಿ ನೀಡಿದ್ದಾರೆ.

ದುಬೆಗೆ ಫಿನಿಷರ್ ರೂಪ ತುಂಬಿದ ಮಾಹಿ

ಶಿವಂ ದುಬೆ.. ಸಿಕ್ಸರ್ ಕಿಂಗ್ ಆಗಿ ಟೀಮ್​ ಇಂಡಿಯಾಗೆ ಎಂಟ್ರಿ ನೀಡಿದ್ದ ಈತ, ಬಂದಷ್ಟೇ ವೇಗವಾಗಿ ಹಿಂತಿರುಗಿದ್ದರು. ಬರೋಬ್ಬರಿ 3 ವರ್ಷಕ್ಕೂ ಹೆಚ್ಚು ಕಾಲದಿಂದ ತಂಡದಿಂದ ದೂರ ಉಳಿದಿದ್ರು. ಈತನ ಕಮ್​ಬ್ಯಾಕ್ ಕೂಡ ಅಸಾಧ್ಯ ಅನ್ನೋದು ಎಲ್ಲರ ಭಾವವಾಗಿತ್ತು. ಮಹೇಂದ್ರ ಸಿಂಗ್ ಧೋನಿ ದುಬೆಯ ಹಣೆಬರಹವನ್ನೇ ಬದಲಿಸಿಬಿಟ್ರು. ಈ ವಿಚಾರವನ್ನ ಸ್ವತಃ ಶಿವಂ ದುಬೆಯೇ ಹೇಳಿಕೊಂಡಿದ್ದಾರೆ.

ಚೆನ್ನೈಗೆ ಬಂದ ಮೇಲೆ ಶಿವಂ ದುಬೆ ಬಹಳ ಬದಲಾಗಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ. ಮಾಹೀ ಭಾಯ್ ಬೆಂಬಲ, ಮಾಹಿ ಭಾಯ್ ಮಾರ್ಗದರ್ಶನದ ಬಳಿಕ ನನ್ನ ಪ್ರದರ್ಶನ ಉತ್ತುಂಗಕ್ಕೇರಿದೆ. ಮಾಹಿ ಭಾಯ್​​ಯಿಂದ ಮ್ಯಾಚ್ ಫಿನಿಷ್ ಮಾಡೋದು ಕಲಿತಿದ್ದೇನೆ. ನಾನು, ಧೋನಿಯವರು ಏನ್ ಮಾಡ್ತಾರೆ ಅನ್ನೋದು ಗಮನಿಸುತ್ತಿರುತ್ತೇನೆ. ಅವರು ಯಾವ ಪರಿಸ್ಥಿತಿಯಲ್ಲಿ ಏನ್ ಮಾಡಬೇಕು ಅನ್ನೋದು ಹೇಳ್ತಿರ್ತಾರೆ. ಎರಡು, ಮೂರು ಟಿಪ್ಸ್​ ನೀಡಿದ್ದಾರೆ. ನನ್ನ ಕಾನ್ಫಿಡೆನ್ಸ್ ಸಹ ಹೆಚ್ಚಾಗಿದೆ –ಶಿವಂ ದುಬೆ, ಆಟಗಾರ

ಕಳೆದ ಐಪಿಎಲ್​ ವೇಳೆ ಚೆನ್ನೈ ಫ್ರಾಂಚೈಸಿ ಸೇರಿಕೊಂಡಿದ್ದೇ ತಡ, ಆತ್ಮ ವಿಶ್ವಾಸವೇ ಕಳೆದುಕೊಂಡಿದ್ದ ಶಿವಂಗೆ ಮರು ಜೀವ ಸಿಕ್ತು. ನಯಾ ಮ್ಯಾಚ್ ಫಿನಿಷರ್ ಆಗಿ ರೂಪುಗೊಂಡ ಶಿವಂ ದುಬೆ, ಟೀಮ್ ಇಂಡಿಯಾಗೂ ಎಂಟ್ರಿ ಕೊಟ್ಟರು. ಇದೀಗ ಪವರ್ ಹಿಟ್ಟಿಂಗ್ ಬ್ಯಾಟಿಂಗ್ ಮೂಲಕ ಟೀಮ್ ಇಂಡಿಯಾದ ಮ್ಯಾಚ್ ಫಿನಿಷರ್ ಆಗಿ ಭರವಸೆ ಮೂಡಿಸಿದ್ದಾರೆ.

ರಿಂಕು ಆಟದ ಮೇಲು ಧೋನಿ ಪ್ರಭಾವ

ಚೆನ್ನೈ ತಂಡದಲ್ಲಿದ್ದ ಶಿವಂ ದುಬೆ ಆಟದ ಮೇಲೆ ಮಾತ್ರವೇ ಅಲ್ಲ. ನಯಾ ಮ್ಯಾಚ್ ಫಿನಿಷರ್ ಆಗಿ ಗುರುತಿಸಿಕೊಂಡಿರುವ ರಿಂಕು ಸಿಂಗ್ ಸಕ್ಸಸ್​ ಹಿಂದೂ ಧೋನಿಯ ಕೃಪಾ ಕಟಾಕ್ಷವಿದೆ. ಈ ವಿಚಾರವನ್ನು ಸ್ವತಃ ರಿಂಕು ಸಿಂಗ್​​​​​ ಬಹಿರಂಗ ಪಡಿಸಿದ್ದಾರೆ.

ಐಪಿಎಲ್​ ವೇಳೆ ನಾನು ಮಾಹಿ ಭಾಯ್ ಜೊತೆ ಮಾತುಕತೆ ನಡೆಸಿದ್ದೇನೆ. ಆಗ ಅವರು, ನೀನು ಕ್ರೀಸ್‌ನಲ್ಲಿ ಶಾಂತಚಿತ್ತನಾಗಿ ಇರಲು ಪ್ರಯತ್ನಿಸು, ಸಾಧ್ಯವಾದಷ್ಟು ನಿರ್ಭೀತಿಯಿಂದ ಬ್ಯಾಟಿಂಗ್ ಮಾಡುವಂತೆ ಹೇಳಿದ್ದರು. ನಾನು ಅವರು ಹೇಳಿದ ಮಾತನ್ನು ಪಾಲಿಸುತ್ತಿದ್ದು, ಕ್ರೀಸ್‌ನಲ್ಲಿ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದೆ ಶಾಂತವಾಗಿರುತ್ತೇನೆ. ಇದೇ ನನ್ನ ಯಶಸ್ಸಿಗೆ ಕಾರಣವಾಗಿದೆ -ರಿಂಕು ಸಿಂಗ್, ಆಟಗಾರ

ಟೀಮ್ ಇಂಡಿಯಾದಲ್ಲಿ ಈ ಫಿನಿಷರ್​ಗಳಿಂದಲೇ ಹೊಸ ಇಂಪ್ಯಾಕ್ಟ್​ ಕ್ರಿಯೇಟ್ ಮಾಡಿದೆ. ಫಿನಿಷರ್​ಗಳಿಲ್ಲದೆ ಬಡವಾಗಿದ್ದ ಟೀಮ್ ಇಂಡಿಯಾಗೆ ಇದೀಗ ಬಲ ಬಂದಿದೆ. ಈ ಬಾರಿಯ ಟಿ20 ವಿಶ್ವಕಪ್​ಗೂ ಮುನ್ನ ಐಸಿಸಿ ಟೂರ್ನಿಯ ನಾಕೌಟ್​​ಗಳಲ್ಲಿ ವೈಫಲ್ಯ ಅನುಭವಿಸ್ತಿದ್ದ ಟೀಮ್ ಇಂಡಿಯಾಗೆ, ಹೊಸ ಬಂದಿದೆ.

ಅದೇನೇ ಆಗಲಿ. ಟೀಮ್ ಇಂಡಿಯಾದ ಕಟ್ಟಾಳಾಗಿ ಹಲವು ಮ್ಯಾಚ್​​​​​​ಗಳನ್ನ ಗೆಲ್ಲಿಸಿಕೊಟ್ಟ ಮಾಹಿ, ತಂಡದಿಂದ ಹೊರಗುಳಿದರೂ ಟೀಮ್ ಇಂಡಿಯಾ ಗೆಲುವಿನಲ್ಲಿ ಪರೋಕ್ಷವಾಗಿ ರೋಲ್ ಪ್ಲೇ ಮಾಡ್ತಿದ್ದಾರೆ. ಮಾಹಿ ಗರಡಿಯಲ್ಲಿ ಬೆಳೆದವರು ಇದೀಗ ಸೂಪರ್​ ಸ್ಟಾರ್​ಗಳಾಗಿ ಮಿಂಚುತ್ತಿದ್ದಾರೆ. ಟೀಮ್​ ಇಂಡಿಯಾ ಕೂಡ ಸಕ್ಸಸ್ ಕಾಣ್ತಿದೆ. ಇದಕ್ಕಾಗಿ ಧೋನಿಗೆ ಧನ್ಯವಾದ ಹೇಳಲೇಬೇಕು.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಟೀಂ ಇಂಡಿಯಾಗೆ ಮತ್ತೆರಡು ವೆಪನ್ ಗಿಫ್ಟ್​ ಕೊಟ್ಟ ಧೋನಿ.. ಇನ್ಮೇಲೆ ಮ್ಯಾಚ್ ಫಿನಿಷರ್ಸ್​ ಇವರೇ..!

https://newsfirstlive.com/wp-content/uploads/2023/12/MS-DHONI-2.jpg

Load More