Advertisment

Video: ಸೆಕ್ಯುರಿಟಿ ಗಾರ್ಡ್​ಗೆ ತನ್ನ ಬೈಕ್​ನಲ್ಲೇ ಲಿಫ್ಟ್​ ಕೊಟ್ಟ ಮಾಹಿ! ಧೋನಿ ಸಿಂಪಲ್​ ಲೈಫ್​​​ಸ್ಟೈಲ್​​​ಗೆ ಫ್ಯಾನ್ಸ್​​ ಫಿದಾ

author-image
AS Harshith
Updated On
Video: ಸೆಕ್ಯುರಿಟಿ ಗಾರ್ಡ್​ಗೆ ತನ್ನ ಬೈಕ್​ನಲ್ಲೇ ಲಿಫ್ಟ್​ ಕೊಟ್ಟ ಮಾಹಿ! ಧೋನಿ ಸಿಂಪಲ್​ ಲೈಫ್​​​ಸ್ಟೈಲ್​​​ಗೆ ಫ್ಯಾನ್ಸ್​​ ಫಿದಾ
Advertisment
  • ಮಹೇಂದ್ರ ಸಿಂಗ್​ ಧೋನಿ ಮನಸ್ಸು ಎಂಥದ್ದು ನೋಡಿ
  • ಸೆಕ್ಯುರಿಟಿ ಗಾರ್ಡ್​ಗೆ ಬೈಕ್​ನಲ್ಲಿ ಲಿಫ್ಟ್​ಕೊಟ್ಟ ತಲೈವಾ
  • ಮಾಹಿ ಲೈಫ್ಟ್​ಸ್ಟೈಲ್​ಗೆ ಮನಸೋತ ಅಭಿಮಾನಿಗಳು

ಮಹೇಂದ್ರ ಸಿಂಗ್​ ಧೋನಿ ಆಟಗಾರರೊಂದಿಗೆ ಎಷ್ಟು ಸ್ನೇಹದಿಂದ ಇರುತ್ತಾರೋ ಅಷ್ಟೇ ಹೊರಗಡೆಯೂ ಇರುತ್ತಾರೆ. ಅದಕ್ಕೆ ಉದಾಹರಣೆ ಎಂಬಂತೆ ವಿಡಿಯೋವೊಂದು ವೈರಲ್​ ಆಗಿದೆ. ವಿಡಿಯೋದಲ್ಲಿ ಮಾಹಿ ತನ್ನ ಬೈಕ್​ನಲ್ಲಿ ಸೆಕ್ಯುರಿಟಿ ಗಾರ್ಡ್​ಗೆ ಲಿಫ್ಟ್​ ನೀಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Advertisment

ಧೋನಿ ಸಿಂಪಲ್​ ಲೈಫ್​

ಧೋನಿಗೆ ಕೂಲ್​ ಕ್ಯಾಪ್ಟನ್​ ಹೆಸರು ಬಂದಿರೋದು ಸುಮ್ಮನೆಯಲ್ಲ. ಅವರ ಸ್ವಭಾವದಿಂದಲೇ ಈ ಹೆಸರು ಬಂದಿರೋದು. ಅನೇಕರು ಧೋನಿಯನ್ನು ಮೈದಾನದಲ್ಲಿ ಕಂಡು ಇಷ್ಟಪಟ್ಟರೆ. ಇನ್ನು ಕೆಲವರು ಅವರ ವೈಯ್ಯಕ್ತಿಕ ಜೀವನವನ್ನು ಕಂಡು ನೆಚ್ಚಿಕೊಂಡಿದ್ದಾರೆ.

ಅನ್ಯೋನ್ಯವಾಗಿ ಬದುಕುವ ಮಾಹಿ

ಮಾಹಿ ಮೈದಾನದಲ್ಲಿ ತನ್ನ ತಂಡದವರೊಂದಿಗೆ ಹೇಗೆ ಅನ್ಯೋನ್ಯವಾಗಿ ಇರುತ್ತಾರೋ ಹಾಗೆಯೇ ಹೊರಗಡೆಯು ಕೂಡ ಅದೇ ಶಾಂತ ಸ್ವಭಾವದಲ್ಲಿ, ಸಿಂಪಲ್ಲಾಗಿ ಬದುಕುತ್ತಿದ್ದಾರೆ. ಅಂದಹಾಗೆಯೇ ಸ್ಟಾರ್​ ಕ್ರಿಕೆಟಿಗ ಮಾಹಿ ಒಂದುಚೂರು ಅಹಂ ಇಲ್ಲದೆ, ತಾನು ಸೆಲೆಬ್ರಿಟಿ ಎಂಬುದು ತಲೆಗೇರದೆ ಬದುಕುವ ಸಾಮಾನ್ಯ ವ್ಯಕ್ತಿ ಅಂದರೆ ಅದು ಮಾಹಿ.

Advertisment

ಮನೆಯ ಸೆಕ್ಯುರಿಟಿ ಗಾರ್ಡ್​

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಧೋನಿ ಸೆಕ್ಯುರಿಟಿ ಗಾರ್ಡ್​ಗೆ ಲಿಫ್ಟ್​ ನೀಡುತ್ತಿದ್ದಾರೆ. ತನ್ನ ಬೈಕ್​ನಲ್ಲಿ ಸೆಕ್ಯುರಿಟಿ ಗಾರ್ಡ್​ನನ್ನು ಕೂರಿಸಿಕೊಂಡು ಮನೆಯ ಮುಖ್ಯಗೇಟ್​​ ಬಳಿ ಇಳಿಸುವುದನ್ನು ದೃಶ್ಯದಲ್ಲಿ ಕಾಣಬಹುದಾಗಿದೆ. ಅಂದಹಾಗೆಯೇ ಗೇಟ್​ ಮುಂಭಾಗ ಅಭಿಮಾನಿಗಳು ಧೋನಿ ಬರುವಿಕೆಗಾಗಿ ಕಾಯುತ್ತಿರುವುದು ಕಾಣಬಹುದಾಗಿದೆ. ಅದರಲೊಬ್ಬರು ಮಾಹಿ ಹುಟ್ಟು ಹಬ್ಬದ ಶುಭಾಶಯ ಹೇಳುತ್ತಿರುವುದು ಕೇಳಿಬಂದಿದೆ. ಮೋಲ್ನೋಟಕ್ಕೆ ಈ ವಿಡಿಯೋ ಹಳೆಯದು ಎನ್ನಲಾಗುತ್ತಿದೆ. ಕಾರಣ ಇದೇ ಜುಲೈ 7 ರಮದು ಮಾಹಿ 41ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment