ರಿಷಭ್ ಪಂತ್ ಸಹೋದರಿ ಮದುವೆ ಸಂಭ್ರಮ.. ಹಳ್ದಿ, ಸಂಗೀತದಲ್ಲಿ ಮಿಂದೆದ್ದೆ ಕ್ರಿಕೆಟ್ ಸ್ಟಾರ್ಸ್

author-image
Bheemappa
Updated On
ರಿಷಭ್ ಪಂತ್ ಸಹೋದರಿ ಮದುವೆ ಸಂಭ್ರಮ.. ಹಳ್ದಿ, ಸಂಗೀತದಲ್ಲಿ ಮಿಂದೆದ್ದೆ ಕ್ರಿಕೆಟ್ ಸ್ಟಾರ್ಸ್
Advertisment
  • ತಾಯಿ ಸರೋಜ ಡ್ಯಾನ್ಸ್ ಮಾಡಿರುವುದು ನೋಡಿ ಪಂತ್ ಭಾವುಕ
  • ಮೆಹೆಂದಿ ಕಾರ್ಯಕ್ರಮದಲ್ಲಿ ಕುಣಿದು ಕುಪ್ಪಳಿಸಿದ ಕ್ರಿಕೆಟ್ ಸ್ಟಾರ್ಸ್
  • ಸಾಕ್ಷಿ ಪಂತ್ ಸಂಗೀತ ಕಾರ್ಯಕ್ರಮದಲ್ಲಿ ಮಾಹಿ ದಂಪತಿ ಮಿಂಚಿಂಗ್

ಟೀಮ್​ ಇಂಡಿಯಾ ವಿಕೆಟ್ ಕೀಪರ್​​​ ಬ್ಯಾಟ್ಸ್​​ಮನ್​ ರಿಷಭ್​​ ಪಂತ್​ ಕುಟುಂಬದಲ್ಲಿ ಸಂಭ್ರಮವೋ, ಸಂಭ್ರಮ. ಹಾಡು, ಡಾನ್ಸ್​​, ನಾದಸ್ವರದ ಸದ್ದು. ಅಬಬ್ಬಾ..! ​​ ಫ್ಯಾಮಿಲಿಯಲ್ಲಿ ಸಂಭ್ರಮ, ಸಡಗರವೇ ಮನೆ ಮಾಡಿದೆ. ಎಲ್ಲರ ಮುಖದಲ್ಲಿ ನಗು, ಮನದಲ್ಲಿ ಸಂತೋಷ ತುಂಬಿ ತುಳುಕುತ್ತಿದೆ.

ಭಾನುವಾರ ರಾತ್ರಿ ಟೀಮ್​ ಇಂಡಿಯಾ ಚಾಂಪಿಯನ್ಸ್​ ಟ್ರೋಫಿ ಗೆದ್ರೆ, ಸೋಮವಾರ ಬೆಳ್ಳಂಬೆಳಗ್ಗೆ ಡೆಲ್ಲಿ ಏರ್​​ಪೋರ್ಟ್​​ನಲ್ಲಿ ಪಂತ್​ ಕಾಣಿಸಿಕೊಂಡಿದ್ದರು. ಇಡೀ ತಂಡ ಟ್ರೋಫಿ ಗೆದ್ದ ಸಂಭ್ರಮದಲ್ಲಿ ಮಿಂದೇಳುತ್ತಿದ್ರೆ, ಪಂತ್​ ಏಕಾಂಗಿಯಾಗಿ ಭಾರತಕ್ಕೆ ವಾಪಾಸ್ ಆಗಿದ್ದರು. ಪಂತ್​ ಆಗಮನ ತಂಡದಲ್ಲಿ ಎಲ್ಲವೂ ಸರಿ ಇಲ್ವಾ ಅನ್ನೋ ಅನುಮಾನವನ್ನೇ ಹುಟ್ಟು ಹಾಕಿತ್ತು. ಆದ್ರೆ, ಪಂತ್​ ಪಟ್​ ಅಂತಾ ಭಾರತಕ್ಕೆ ಬಂದಿದ್ದಕ್ಕೆ ಕಾರಣ ಪ್ರೀತಿಯ ತಂಗಿಯ ಮದುವೆ.

publive-image

ಈ ಸಂತೋಷ, ಸಂಭ್ರಮ ಎಲ್ಲಾ ಪಂತ್​​ ಚಾಂಪಿಯನ್ಸ್ ಟ್ರೋಫಿ ಗೆದ್ದು ಬಂದಿದ್ದಕ್ಕಲ್ಲ.. ರಿಷಭ್​ ಪಂತ್​​ರ ತಂಗಿ ಸಾಕ್ಷಿ ಪಂತ್​ ವಿವಾಹದ ಸೆಲೆಬ್ರೇಷನ್​. ಉತ್ತರಾಖಾಂಡ್​ನ ಮಸ್ಸೂರಿಯಲ್ಲಿ ಪ್ರಕೃತಿಯ ಸುಂದರ ತಡದಲ್ಲಿರುವ ಖಾಸಗಿ ಹೋಟೆಲ್​ನಲ್ಲಿ ಅದ್ಧೂರಿ ವಿವಾಹ ಕಾರ್ಯಕ್ರಮ ನಡೀತಿದೆ. ಪಂತ್​ ಕುಟುಂಬ ಸಂತಸದ ಕಡಲಲ್ಲಿ ತೇಲಾಡ್ತಿದೆ.

ಮೆಹೆಂದಿ ಕಾರ್ಯಕ್ರಮದಲ್ಲಿ ಕುಣಿದು ಕುಪ್ಪಳಿಸಿದ ನವ ಜೋಡಿ

ಮೆಹೆಂದಿ ಕಾರ್ಯಕ್ರಮದಲ್ಲಿ ಮದುಮಕ್ಕಳೇ ಧೂಳೆಬ್ಬಿಸಿದರು. ಸಾಕ್ಷಿ ಪಂತ್​ ಹಾಗೂ ಭಾವಿ ಪತಿ ಅಂಕಿತ್​ ಚೌಧರಿ ಸಖತ್​ ಸ್ಟೆಪ್ಸ್​ ಹಾಕಿದರು. ತಂಗಿಯ ಸಂಭ್ರಮವನ್ನ ಕಂಡು ಪಂತ್​ ಮುಖದಲ್ಲಿ ವಿಶೇಷವಾದ ಕಳೆ ತಂದಿತ್ತು. ಹಲ್ದಿ ಕಾರ್ಯಕ್ರಮ ಅಕ್ಷರಶಃ ಹೋಳಿ ಸ್ವರೂಪ ಪಡೆದುಕೊಂಡಿತ್ತು. ಬಣ್ಣದೋಕುಳಿ ಜೋರಾಗಿ ನಡೆದಿದೆ. ಈ ಈವೆಂಟ್​ನಲ್ಲೂ ಮದುಮಕ್ಕಳು ಸ್ಟೇಜ್​ ಮೇಲೆ ಧೂಳೆಬ್ಬಿಸಿದ್ದಾರೆ. ಹಲ್ದಿ ಇವೆಂಟ್​ನಲ್ಲಿ ಭಾಗಿಯಾಗಿದ್ದ ಕುಟುಂಬಸ್ಥರು, ಆಪ್ತರು ಕೂಡ ಡಾನ್ಸ್​ ಮಾಡಿ ಮಸ್ತಿ ಮಾಡಿದ್ದಾರೆ. ರಿಷಭ್​ ಪಂತ್​ ಕೂಡ ಸ್ಟೆಪ್ಸ್​ ಹಾಕಿದ್ದಾರೆ.

ಇದನ್ನೂ ಓದಿ:ರನ್ಯಾ ಗೋಲ್ಡ್​ ಸ್ಮಗ್ಲಿಂಗ್, ಹಿರಿಯ ಅಧಿಕಾರಿಗಳಿಗೆ ಢವ ಢವ.. DRI ತನಿಖೆಯಲ್ಲಿ ಹೊರ ಬೀಳುತ್ತಾ ಹೆಸರುಗಳು?

publive-image

ಸಂಗೀತ್ ಕಾರ್ಯಕ್ರಮದಲ್ಲಿ ಮಾಹಿ ಮಿಂಚಿಂಗ್​.!

ರಿಷಭ್​ ಪಂತ್​ ಪಾಲಿಗೆ ಎಲ್ಲವೂ ಆಗಿರುವ ಮೆಂಟರ್, ಗುರು, ಗೆಳೆಯ ಎಂ​.ಎಸ್​ ಧೋನಿ ಕೂಡ ವಿವಾಹ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ಧೋನಿ ಜೊತೆಗೆ ಸುರೇಶ್​ ರೈನಾ ಸೇರಿ ಹಲವು ಕ್ರಿಕೆಟರ್ಸ್​​ ಭಾಗಿಯಾಗಿದ್ದು, ಸಂಗೀತ್​​ ಕಾರ್ಯಕ್ರಮದಲ್ಲಿ ತಲಾ ಧೋನಿ, ಚಿನ್ನತಲಾ ರೈನಾ ಮಾಡಿರೋ ಡಾನ್ಸ್​ ಇಂಟರ್​ನೆಟ್​ನಲ್ಲಿ ಧೂಳೆಬ್ಬಿಸಿದೆ.

ಸಂಗೀತ್​ ಕಾರ್ಯಕ್ರಮದಲ್ಲೂ ಒನ್ಸ್​ ಅಗೇನ್​​ ಸಾಕ್ಷಿ ಪಂತ್​ ಹಾಗೂ ಅಂಕಿತ್​ ಚೌಧರಿ ಸ್ಟೇಜ್​ ಮೇಲೆ ಭರ್ಜರಿ ಸ್ಟೆಪ್ಸ್​ ಹಾಕಿದ್ದಾರೆ. ವಿಶೇಷ ಅಂದ್ರೆ ರಿಷಭ್​ ಪಂತ್​ ತಾಯಿ ಸರೋಜ್​ ಪಂತ್​ ಕೂಡ ಡಾನ್ಸ್​ ಮಾಡಿದ್ದು, ತಾಯಿಯ ಖುಷಿ ಕಂಡು ಸಾಕ್ಷಿ ಪಂತ್​ ಕಣ್ಣಾಲಿಗಳು ತುಂಬಿವೆ.

publive-image

ಲಂಡನ್​ನಲ್ಲಿ ನಡೆದಿದ್ದ ಎಂಗೇಜ್​ಮೆಂಟ್​

ಅಂದ್ಹಾಗೆ ರಿಷಭ್ ಪಂತ್​, ತಂಗಿ ಸಾಕ್ಷಿಯನ್ನ ವರಿಸ್ತಿರೋ ಅಂಕಿತ್​ ಚೌಧರಿ ಲಂಡನ್​​ ಮೂಲದ ಬ್ಯುಸಿನೆಸ್​ಮನ್​. ಬಹುಕಾಲ ಪ್ರೀತಿಸಿದ್ದ ಇವರಿಬ್ರು ಕುಟಂಬಸ್ಥರ ಒಪ್ಪಿಗೆ ಮೇರೆಗೆ 2024ರ ಜನವರಿಯಲ್ಲಿ ಎಂಗೇಜ್​ಮೆಂಟ್​ ಮಾಡಿಕೊಂಡಿದ್ದರು. ಲಂಡನ್​ನಲ್ಲಿ ನಡೆದಿದ್ದ ಈ ಕಾರ್ಯಕ್ರಮ ಕೂಡ ಅದ್ಧೂರಿಯಾಗಿ ನಡೆದಿತ್ತು.

ಕಳೆದ ವರ್ಷ ಜನವರಿಯಲ್ಲಿ ಎಂಗೇಜ್​ಮೆಂಟ್​ ಮಾಡಿಕೊಂಡಿದ್ದ ಸಾಕ್ಷಿ ಪಂತ್​, ಅಂಕಿತ್​ ​ ಈ ವರ್ಷ ಮಾರ್ಚ್​ನಲ್ಲಿ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ. ಸಡಗರ, ಸಂಭ್ರಮದೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿರೋ ಈ ಹೊಸ ಜೋಡಿಯ ಮುಂದಿನ ಜೀವನ ಕೂಡ ಇಷ್ಟೇ ಸಂತೋಷದಿಂದ ಕೂಡಿರಲಿ.


">March 12, 2025

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment