newsfirstkannada.com

×

ಅಂದು.. ಟೀಂ ಇಂಡಿಯಾದ ಈ ವ್ಯಕ್ತಿಗಾಗಿ ಧೋನಿ ಒಂದು ತಿಂಗಳ ಮಾಂಸ ಸೇವನೆ ಬಿಟ್ಟಿದ್ದರು..!

Share :

Published September 23, 2024 at 8:31am

    ನೇಮೂ, ಫೇಮೂ ಬರೋದಕ್ಕೂ ಮೊದಲೇ ಧೋನಿ ಹಂಬಲ್

    ಈ ಕತೆ ಕೇಳಿದ್ರೆ ಧೋನಿ ಮೇಲಿನ ಅಭಿಮಾನ ಮತ್ತಷ್ಟು ಹೆಚ್ಚಾಗುತ್ತೆ

    ಬೆಂಗಳರಲ್ಲೇ ನಡೆದಿರುವ ಇಂಟ್ರೆಸ್ಟಿಂಗ್ ಈ ಕತೆ ನಿಮಗೆ ಗೊತ್ತಾ?

ಧೋನಿಯ ಸರಳ ವ್ಯಕ್ತಿತ್ವದ ಕಥೆಗಳನ್ನ ನೀವು ತುಂಬಾ ಕೇಳಿರ್ತಿರಾ. ಅದ್ರಲ್ಲಿ ಬಹುತೇಕ ನೇಮ್​ ಅಂಡ್ ಫೇಮ್​ ಬಂದ ನಂತರದ ಕಥೆಗಳು. ಇಂಟರ್​ನ್ಯಾಷನಲ್​ ಕ್ರಿಕೆಟ್​ಗೆ ಕಾಲಿಡೋಕೂ ಮುನ್ನವೇ ಧೋನಿ ಹಂಬಲ್​ ವ್ಯಕ್ತಿಯಾಗಿದ್ರು.

ಮಿಸ್ಟರ್​ ಕೂಲ್​ ಎಮ್​.ಎಸ್​ ಧೋನಿ.. ವಿಶ್ವ ಕ್ರಿಕೆಟ್​ ಕಂಡ ಶ್ರೇಷ್ಟ ಕ್ರಿಕೆಟಿಗ. ಬ್ಯಾಟಿಂಗ್​, ಕೀಪಿಂಗ್, ಕ್ಯಾಪ್ಟನ್ಸಿ, ಈ ಮೂರೂ ವಿಚಾರದಲ್ಲೂ ಮಿಸ್ಟರ್​ ಪರ್ಫೆಕ್ಟ್​​. ಈ ಮಾಂತ್ರಿಕ ಮಾಹಿಯ ಮೋಡಿಗೆ ಮರುಳಾಗದವರೇ ಇಲ್ಲ. ಭಾರತದ ಮೂಲೆ ಮೂಲೆಯಿಂದ ಹಿಡಿದು ವಿಶ್ವಾದ್ಯಂತ ಧೋನಿಯ ಅಭಿಮಾನಿಗಳ ಪಡೆಯಿದೆ. ಅಂದ್ಹಾಗೆ ಕೇವಲ ಕ್ರಿಕೆಟ್​ನಿಂದ ಧೋನಿ, ಇಷ್ಟೊಂದು ಜನಮನ್ನಣೆಗಳಿಸಿಲ್ಲ. ಧೋನಿಯ ನಡೆ, ನುಡಿ, ವ್ಯಕ್ತಿತ್ವ ಎಲ್ಲವೂ ಅಭಿಮಾನಿಗಳಿಗೆ ಇಷ್ಟ.

ಇದನ್ನೂ ಓದಿ:ಪಾಕಿಸ್ತಾನವನ್ನು ಸೋಲಿಸಿದ ತಂಡವನ್ನು ಹೊಗಳಿದ ಮೋದಿ.. ಅಮೆರಿಕದಲ್ಲಿ ಪ್ರಧಾನಿ ಕ್ರಿಕೆಟ್ ಬಗ್ಗೆ ಮಾತು

ಧೋನಿಯ ಸರಳ ವ್ಯಕ್ತಿತ್ವದ ಕತೆಗಳನ್ನ ನೀವು ತುಂಬಾ ಕೇಳಿ ಇರ್ತಿರಾ? ಆ ಬಹುತೇಕ ಕತೆಗಳು ನೇಮ್​ ಅಂಡ್ ಫೇಮ್​ ಬಂದ ಮೇಲಿನವು. ಅಸಲಿಗೆ ಧೋನಿ ಈಗಲ್ಲ.. ಕ್ರಿಕೆಟ್​ ಲೋಕಕ್ಕೆ ಎಂಟ್ರಿ ಕೊಡೋಕೆ ಮುಂಚಿನ ದಿನಗಳಿಂದಲೂ ಹಂಬಲ್​. ಅದು 2004ರ ಸಮಯ. ಇಂಡಿಯಾ ಎ ತಂಡಕ್ಕೆ ಸೆಲೆಕ್ಟ್​ ಆಗಿದ್ದ ಧೋನಿ, ಬೆಂಗಳೂರಿಗೆ ಕ್ಯಾಂಪ್​ಗೆಂದು ಬಂದಿದ್ರು.

ಆಗ ಅದಾಗಲೇ ಟೀಮ್​ ಇಂಡಿಯಾ ಪರ ಆಡ್ತಿದ್ದ ಆಕಾಶ್​ ಚೋಪ್ರಾ ಜೊತೆಗೆ ಧೋನಿಗೆ ರೂಮ್​​ ನೀಡಲಾಗಿತ್ತು. ಆಕಾಶ್​ ಚೋಪ್ರಾ ಪ್ಯೂರ್​ ವೆಜಿಟೇರಿಯನ್, ರೂಮ್​ಮೇಟ್​ ಧೋನಿ ನಾನ್​ ವೆಜಿಟೇರಿಯನ್​. ಹೀಗಾಗಿ ಊಟದ ವಿಚಾರಕ್ಕೆ ಸಂಕಷ್ಟ ಎದುರಾಗಿತ್ತು. ಈ ವೇಳೆ ಆಕಾಶ್​ ಚೋಪ್ರಾ ವೆಜಿಟೇರಿಯನ್​, ಅವರಿಗೆ ಮುಜುಗರ ಆಗಬಾರದು ಅನ್ನೋ ಕಾರಣಕ್ಕೆ ಧೋನಿ, ಒಂದು ತಿಂಗಳು ಪೂರ್ತಿ ಸಸ್ಯಾಹಾರಿಯಾಗಿ ಬದಲಾಗಿದ್ರಂತೆ. ಪ್ರತಿ ದಿನ ಊಟಕ್ಕೆ ಏನು ಬೇಕೆಂದು ಕೇಳಿದ್ರೂ, ನಿಮಗೇನು ಇಷ್ಟವೋ ಅದೇ ಎಂದು ಧೋನಿ ಹೇಳ್ತಿದ್ರಂತೆ. ಈ ಕಥೆಯನ್ನ ಸ್ವತಃ ಆಕಾಶ್​ ಚೋಪ್ರಾ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:ರೋಹಿತ್, ರಾಹುಲ್​ರನ್ನೇ ಸೈಡಿಗೆ ನಿಲ್ಲಿಸಿದ ಜೈಸ್ವಾಲ್.. ಈ ಯಂಗ್​​ಗನ್​​ನ​​​ ಸ್ಪೆಷಲ್ಲೇ ಬೇರೆ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಂದು.. ಟೀಂ ಇಂಡಿಯಾದ ಈ ವ್ಯಕ್ತಿಗಾಗಿ ಧೋನಿ ಒಂದು ತಿಂಗಳ ಮಾಂಸ ಸೇವನೆ ಬಿಟ್ಟಿದ್ದರು..!

https://newsfirstlive.com/wp-content/uploads/2024/03/MS-DHONI-2.jpg

Load More