ಸವಾಲು ಮೆಟ್ಟಿನಿಂತು ಸಕ್ಸಸ್ ಆಗಿದ್ದು ಹೇಗೆ..?
ಐಪಿಎಲ್ ಸೀಸನ್ 17 ಆರಂಭಕ್ಕೆ ಕೌಂಟ್ಡೌನ್
ಧೋನಿ ಪಾಲಿಗೆ ಇದು ವೆರಿ ವೆರಿ ಸ್ಪೆಷಲ್ ಟೂರ್ನಿ
ಚೆನ್ನೈ ನಾಯಕ ಧೋನಿ ಪಾಲಿಗೆ ಸಿಕ್ಕಾಪಟ್ಟೆ ಸ್ಪೆಷಲ್. ಸ್ಪೆಷಲ್ ಟೂರ್ನಿ ಅಂದ ಮಾತ್ರಕ್ಕೆ ಧೋನಿ ನಿವೃತ್ತಿ ಹೇಳ್ತಾರೆ ಅನ್ನೋ ತೀರ್ಮಾನಕ್ಕೆ ಬಂದು ಬಿಡಬೇಡಿ. ಧೋನಿ ರಿಟೈರ್ಮೆಂಟ್ ಯಾವಾಗ ಅನ್ನೋದನ್ನ ಯಾರಿಂದಲೂ ಪ್ರಿಡಿಕ್ಟ್ ಮಾಡೋಕಾಗಲ್ಲ ಬಿಡಿ. ಇದ್ರ ಹೊರತಾಗಿ ಈ ಸೀಸನ್ ಮಾಹಿ ಪಾಲಿಗೆ ವಿಶೇಷ.
ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 17ನೇ ಸೀಸನ್ಗೆ ಕೌಂಟ್ಡೌನ್ ಶುರುವಾಗಿದೆ. ಇನ್ನೆರಡು ದಿನಗಳಲ್ಲಿ ಚುಟುಕು ಮಹಾಜಾತ್ರೆ ಆರಂಭವಾಗಲಿದ್ದು ಬೌಂಡರಿ, ಸಿಕ್ಸರ್ ಜಾತ್ರೆ ಕಣ್ತುಂಬಿಕೊಳ್ಳಲು ಫ್ಯಾನ್ಸ್ ತುದಿಗಾಲಲ್ಲಿ ನಿಂತಿದ್ದಾರೆ. ಮೊದಲ ಪಂದ್ಯದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿ, ಹೈವೋಲ್ಟೆಜ್ ಹಣಾಹಣಿಯ ನಿರೀಕ್ಷೆ ಹೆಚ್ಚಿಸಿದೆ.
ಧೋನಿ ಪಾಲಿಗೆ ಇದು ವೆರಿ ವೆರಿ ಸ್ಪೆಷಲ್ ಟೂರ್ನಿ..!
ಚೆನ್ನೈ ಸಾರಥಿ ಧೋನಿಯನ್ನ ಕಣ್ತುಂಬಿಕೊಳ್ಳೋ ಹಂಬಲ ಇಡೀ ದೇಶದ ಕ್ರಿಕೆಟ್ ಅಭಿಮಾನಿಗಳಲ್ಲಿದೆ. ಅದಕ್ಕಾಗಿ ಜಾತಕ ಪಕ್ಷಿಗಳಂತೆ ಕಾದು ಕುಳಿತವರಿಗೇನು ಲೆಕ್ಕವಿಲ್ಲ.. ಧೋನಿ ಈ ಹಿಂದಿನ 16 ಐಪಿಎಲ್ ಸೀಸನ್ಗಳಲ್ಲೂ ಆಡಿದ್ದಾರೆ. ತಂಡವನ್ನ 5 ಬಾರಿ ಚಾಂಪಿಯನ್ ಪಟ್ಟಕ್ಕೂ ಏರಿಸಿದ್ದಾರೆ. ಆದ್ರೆ, ಈ ಬಾರಿಯ ಐಪಿಎಲ್ ಟೂರ್ನಿ ಇದ್ಯಲ್ಲ.. ಅದು ಧೋನಿ ಪಾಲಿಗೆ ಸಿಕ್ಕಾಪಟ್ಟೆ ಸ್ಪೆಷಲ್..!
ಮಾಹಿಗೆ ಆರಂಭದಲ್ಲೇ ಸೀನಿಯರ್ಗಳ ಸವಾಲು
2008ರಲ್ಲಿ ಐಪಿಎಲ್ ಜರ್ನಿ ಆರಂಭವಾದಾಗ ಧೋನಿ ಆಗಿನ್ನೂ ಯಂಗ್ಸ್ಟರ್. ನಾಯಕನಾಗಿ ತಂಡದಲ್ಲಿದ್ದ ಸೀನಿಯರ್ಗಳನ್ನ ಲೀಡ್ ಮಾಡೋದ್ರ ಜೊತೆಗೆ ಎದುರಾಳಿ ತಂಡಗಳಲಿದ್ದ ಸೀನಿಯರ್ಗಳನ್ನ ಎದುರಿಸೋ ಸವಾಲು ಧೋನಿಗಿತ್ತು. ಸಚಿನ್ ತೆಂಡುಲ್ಕರ್, ಸೌರವ್ ಗಂಗೂಲಿ, ಶೇನ್ ವಾರ್ನ್ರಂತಹ ಲೆಜೆಂಡ್ ಆಟಗಾರರನ್ನ ಧೋನಿ ಆಗ ಎದುರಿಸಿದ್ರು. ತಂಡದಲ್ಲಿದ್ದ ಮ್ಯಾಥ್ಯೂ ಹೆಡನ್, ಮೈಕ್ ಹಸ್ಸಿಯಂತಾ ಸೀನಿಯರ್ಗಳನ್ನ ಲೀಡ್ ಮಾಡಿ ಸಕ್ಸಸ್ ಕಂಡರು.
ಗಂಭೀರ್, ಸೆಹ್ವಾಗ್, ಯುವಿ ಸವಾಲಿಗೆ ದಿಟ್ಟ ಆನ್ಸರ್
ನಂತರದ ದಿನಗಳಲ್ಲಿ ಧೋನಿ ಕಾದಾಡಿದ್ದು, ತಮ್ಮ ಸರಿಸಮನಾದವರ ಜೊತೆ. ಗೌತಮ್ ಗಂಭೀರ್, ವಿರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್.. ಮೊದಲಾದ ಆಟಗಾರರ ಜೊತೆ ಧೋನಿ ಐಪಿಎಲ್ ಅಖಾಡದಲ್ಲಿ ಹೋರಾಡಿ ಯಶಸ್ಸನ್ನ ದಕ್ಕಿಸಿಕೊಂಡರು.
ರೋಹಿತ್, ಕೊಹ್ಲಿಗೂ ಕೌಂಟರ್ ಕೊಟ್ಟಿದ್ದ ಮಾಹಿ
2013ರ ಬಳಿಕ ಧೋನಿಗೆ ಸವಾಲ್ ಎಸೆದಿದ್ದು ತಾನೇ ಬೆಳೆಸಿದ ಹುಡುಗರು. ಧೋನಿ ನಾಯಕತ್ವದಲ್ಲಿ ಟೀಮ್ ಇಂಡಿಯಾಗೆ ಡೆಬ್ಯೂ ಮಾಡಿದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾರಂತಹ ಆಟಗಾರರು ಐಪಿಎಲ್ನಲ್ಲಿ ಫ್ರಾಂಚೈಸಿಗಳ ನಾಯಕರಾಗಿ ಬಡ್ತಿ ಪಡೆದ್ರು. ಇವ್ರ ಸವಾಲನ್ನೂ ಕೂಲ್ ಆಗೇ ಸ್ವೀಕರಿಸಿದ ಧೋನಿ ರಣರಂಗದಲ್ಲಿ ಟಫ್ ಫೈಟ್ ಕೊಟ್ಟರು.
ಹೊಸ ಐಪಿಎಲ್ ಸೀಸನ್, ಹೊಸ ಸವಾಲು..!
ಇದೀಗ 17ನೇ ಸೀಸನ್ನ ಐಪಿಎಲ್ನಲ್ಲಿ ಧೋನಿ ನೆಕ್ಸ್ಟ್ ಜನರೇಷನ್ನ ಟ್ಯಾಲೆಂಟ್ಗಳ ಜೊತೆ ಕಾದಾಡಲಿದ್ದಾರೆ. ಭವಿಷ್ಯದ ಸೂಪರ್ ಸ್ಟಾರ್ಸ್ ಎನಿಸಿಕೊಂಡಿರುವ ಶುಭ್ಮನ್ ಗಿಲ್ರಂತಹ ಆಟಗಾರರು ಸವಾಲ್ ಎಸೆಯಲಿದ್ದಾರೆ. ಜೊತೆಗೆ ಆಟದಲ್ಲಿ ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್, ಆರ್ಷ್ದೀಪ್ ಸಿಂಗ್ ಹೀಗೆ ಹಲವಾರು ಯಂಗ್ಸ್ಟರ್ಸ್ ಸೆನ್ಸೇಷನ್ ಸೃಷ್ಟಿಸಿದ್ದಾರೆ. ಈ ಆಟಗಾರರನ್ನ ಕಟ್ಟಿ ಹಾಕೋ ಸವಾಲು ಧೋನಿ ಮುಂದಿದೆ.
2008ರಿಂದ ಆರಂಭವಾಗಿ ಈವರೆಗೆ ಹಲವಾರು ಆಟಗಾರರು ಬಂದು ಹೋಗಿದ್ದಾರೆ. ಆದ್ರೆ, ದೋನಿ ಮಾತ್ರ ಸೀನಿಯರ್ಸ್, ಜೂನಿಯರ್ಸ್, ಇದೀಗ ನೆಕ್ಸ್ಟ್ ಜನರೇಷನ್ನ ಆಟಗಾರರು ಬಂದರೂ ಚೆನ್ನೈ ಸಾರಥಿಯಲ್ಲಿ ತಂಡವನ್ನ ಯಶಸ್ಸಿಯಾಗಿ ಲೀಡ್ ಮಾಡ್ತಿದ್ದಾರೆ. ಇಷ್ಟೇ ಅಲ್ಲ.. 42ರ ವಯಸ್ಸಿನಲ್ಲೂ ಅಭಿಮಾನಿಗಳಿಗೆ ತನ್ನ ಆಟದಿಂದ ಸಖತ್ ಟ್ರೀಟ್ ನೀಡ್ತಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್