newsfirstkannada.com

ಐಪಿಎಲ್​ನಲ್ಲಿ ಮಾಹಿ ಜರ್ನಿಯೇ ರೋಚಕ; ಸೆಹ್ವಾಗ್​, ಯುವಿ ಸವಾಲ್.. ಕೊಹ್ಲಿ, ರೋಹಿತ್​​ಗೂ ಕೊಟ್ಟಿದ್ರೂ ದಿಟ್ಟ ಆನ್ಸರ್..!

Share :

Published March 21, 2024 at 2:47pm

  ಸವಾಲು ಮೆಟ್ಟಿನಿಂತು ಸಕ್ಸಸ್​ ಆಗಿದ್ದು ಹೇಗೆ..?

  ಐಪಿಎಲ್​ ಸೀಸನ್​ 17 ಆರಂಭಕ್ಕೆ ಕೌಂಟ್​​ಡೌನ್​

  ಧೋನಿ ಪಾಲಿಗೆ ಇದು ವೆರಿ ವೆರಿ ಸ್ಪೆಷಲ್​ ಟೂರ್ನಿ

ಚೆನ್ನೈ ನಾಯಕ ಧೋನಿ ಪಾಲಿಗೆ ಸಿಕ್ಕಾಪಟ್ಟೆ ಸ್ಪೆಷಲ್​. ಸ್ಪೆಷಲ್​ ಟೂರ್ನಿ ಅಂದ ಮಾತ್ರಕ್ಕೆ ಧೋನಿ ನಿವೃತ್ತಿ ಹೇಳ್ತಾರೆ ಅನ್ನೋ ತೀರ್ಮಾನಕ್ಕೆ ಬಂದು ಬಿಡಬೇಡಿ. ಧೋನಿ ರಿಟೈರ್​ಮೆಂಟ್​ ಯಾವಾಗ ಅನ್ನೋದನ್ನ ಯಾರಿಂದಲೂ ಪ್ರಿಡಿಕ್ಟ್​ ಮಾಡೋಕಾಗಲ್ಲ ಬಿಡಿ. ಇದ್ರ ಹೊರತಾಗಿ ಈ ಸೀಸನ್​ ಮಾಹಿ ಪಾಲಿಗೆ ವಿಶೇಷ.

ಇಂಡಿಯನ್​ ಪ್ರೀಮಿಯರ್​ ಲೀಗ್​ ಟೂರ್ನಿಯ 17ನೇ ಸೀಸನ್​ಗೆ ಕೌಂಟ್​ಡೌನ್​ ಶುರುವಾಗಿದೆ. ಇನ್ನೆರಡು ದಿನಗಳಲ್ಲಿ ಚುಟುಕು ಮಹಾಜಾತ್ರೆ ಆರಂಭವಾಗಲಿದ್ದು ಬೌಂಡರಿ, ಸಿಕ್ಸರ್​ ಜಾತ್ರೆ ಕಣ್ತುಂಬಿಕೊಳ್ಳಲು ಫ್ಯಾನ್ಸ್​ ತುದಿಗಾಲಲ್ಲಿ ನಿಂತಿದ್ದಾರೆ. ಮೊದಲ ಪಂದ್ಯದಲ್ಲೇ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹಾಗೂ ಚೆನ್ನೈ ಸೂಪರ್​ ಕಿಂಗ್ಸ್​​ ತಂಡಗಳು ಮುಖಾಮುಖಿ, ಹೈವೋಲ್ಟೆಜ್​ ಹಣಾಹಣಿಯ ನಿರೀಕ್ಷೆ ಹೆಚ್ಚಿಸಿದೆ.

ಧೋನಿ ಪಾಲಿಗೆ ಇದು ವೆರಿ ವೆರಿ ಸ್ಪೆಷಲ್​ ಟೂರ್ನಿ..!
ಚೆನ್ನೈ ಸಾರಥಿ ಧೋನಿಯನ್ನ ಕಣ್ತುಂಬಿಕೊಳ್ಳೋ ಹಂಬಲ ಇಡೀ ದೇಶದ ಕ್ರಿಕೆಟ್​ ಅಭಿಮಾನಿಗಳಲ್ಲಿದೆ. ಅದಕ್ಕಾಗಿ ಜಾತಕ ಪಕ್ಷಿಗಳಂತೆ ಕಾದು ಕುಳಿತವರಿಗೇನು ಲೆಕ್ಕವಿಲ್ಲ.. ಧೋನಿ ಈ ಹಿಂದಿನ 16 ಐಪಿಎಲ್​ ಸೀಸನ್​ಗಳಲ್ಲೂ ಆಡಿದ್ದಾರೆ. ತಂಡವನ್ನ 5 ಬಾರಿ ಚಾಂಪಿಯನ್​ ಪಟ್ಟಕ್ಕೂ ಏರಿಸಿದ್ದಾರೆ. ಆದ್ರೆ, ಈ ಬಾರಿಯ ಐಪಿಎಲ್​ ಟೂರ್ನಿ ಇದ್ಯಲ್ಲ.. ಅದು ಧೋನಿ ಪಾಲಿಗೆ ಸಿಕ್ಕಾಪಟ್ಟೆ ಸ್ಪೆಷಲ್​​..!

ಮಾಹಿಗೆ ಆರಂಭದಲ್ಲೇ ಸೀನಿಯರ್​ಗಳ ಸವಾಲು
2008ರಲ್ಲಿ ಐಪಿಎಲ್​ ಜರ್ನಿ ಆರಂಭವಾದಾಗ ಧೋನಿ ಆಗಿನ್ನೂ ಯಂಗ್​​ಸ್ಟರ್​​. ನಾಯಕನಾಗಿ ತಂಡದಲ್ಲಿದ್ದ ಸೀನಿಯರ್​​ಗಳನ್ನ ಲೀಡ್​ ಮಾಡೋದ್ರ ಜೊತೆಗೆ ಎದುರಾಳಿ ತಂಡಗಳಲಿದ್ದ ಸೀನಿಯರ್​​ಗಳನ್ನ ಎದುರಿಸೋ ಸವಾಲು ಧೋನಿಗಿತ್ತು. ಸಚಿನ್​ ತೆಂಡುಲ್ಕರ್​, ಸೌರವ್​ ಗಂಗೂಲಿ, ಶೇನ್​ ವಾರ್ನ್​​​ರಂತಹ ಲೆಜೆಂಡ್​ ಆಟಗಾರರನ್ನ ಧೋನಿ ಆಗ ಎದುರಿಸಿದ್ರು. ತಂಡದಲ್ಲಿದ್ದ ಮ್ಯಾಥ್ಯೂ ಹೆಡನ್​, ಮೈಕ್​ ಹಸ್ಸಿಯಂತಾ ಸೀನಿಯರ್​ಗಳನ್ನ ಲೀಡ್​ ಮಾಡಿ ಸಕ್ಸಸ್​ ಕಂಡರು.

ಗಂಭೀರ್​, ಸೆಹ್ವಾಗ್​, ಯುವಿ ಸವಾಲಿಗೆ ದಿಟ್ಟ ಆನ್ಸರ್
ನಂತರದ ದಿನಗಳಲ್ಲಿ ಧೋನಿ ಕಾದಾಡಿದ್ದು, ತಮ್ಮ ಸರಿಸಮನಾದವರ ಜೊತೆ. ಗೌತಮ್​ ಗಂಭೀರ್​, ವಿರೇಂದ್ರ ಸೆಹ್ವಾಗ್​, ಯುವರಾಜ್​ ಸಿಂಗ್​.. ಮೊದಲಾದ ಆಟಗಾರರ ಜೊತೆ ಧೋನಿ ಐಪಿಎಲ್​ ಅಖಾಡದಲ್ಲಿ ಹೋರಾಡಿ ಯಶಸ್ಸನ್ನ ದಕ್ಕಿಸಿಕೊಂಡರು.

ರೋಹಿತ್​, ಕೊಹ್ಲಿಗೂ ಕೌಂಟರ್​ ಕೊಟ್ಟಿದ್ದ ಮಾಹಿ
2013ರ ಬಳಿಕ ಧೋನಿಗೆ ಸವಾಲ್​ ಎಸೆದಿದ್ದು ತಾನೇ ಬೆಳೆಸಿದ ಹುಡುಗರು. ಧೋನಿ ನಾಯಕತ್ವದಲ್ಲಿ ಟೀಮ್​ ಇಂಡಿಯಾಗೆ ಡೆಬ್ಯೂ ಮಾಡಿದ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾರಂತಹ ಆಟಗಾರರು ಐಪಿಎಲ್​ನಲ್ಲಿ ಫ್ರಾಂಚೈಸಿಗಳ ನಾಯಕರಾಗಿ ಬಡ್ತಿ ಪಡೆದ್ರು. ಇವ್ರ ಸವಾಲನ್ನೂ ಕೂಲ್​​ ಆಗೇ ಸ್ವೀಕರಿಸಿದ ಧೋನಿ ರಣರಂಗದಲ್ಲಿ ಟಫ್​ ಫೈಟ್​ ಕೊಟ್ಟರು.

ಹೊಸ ಐಪಿಎಲ್​ ಸೀಸನ್​, ಹೊಸ ಸವಾಲು..!
ಇದೀಗ 17ನೇ ಸೀಸನ್​​ನ ಐಪಿಎಲ್​ನಲ್ಲಿ ಧೋನಿ ನೆಕ್ಸ್ಟ್​​ ಜನರೇಷನ್​ನ ಟ್ಯಾಲೆಂಟ್​​ಗಳ ಜೊತೆ ಕಾದಾಡಲಿದ್ದಾರೆ. ಭವಿಷ್ಯದ ಸೂಪರ್​ ಸ್ಟಾರ್ಸ್​ ಎನಿಸಿಕೊಂಡಿರುವ ಶುಭ್​ಮನ್​ ಗಿಲ್​ರಂತಹ ಆಟಗಾರರು ಸವಾಲ್​ ಎಸೆಯಲಿದ್ದಾರೆ. ಜೊತೆಗೆ ಆಟದಲ್ಲಿ ಯಶಸ್ವಿ ಜೈಸ್ವಾಲ್​, ರಿಂಕು ಸಿಂಗ್​, ಆರ್ಷ್​​ದೀಪ್​ ಸಿಂಗ್​ ಹೀಗೆ ಹಲವಾರು ಯಂಗ್​ಸ್ಟರ್ಸ್​​ ಸೆನ್ಸೇಷನ್​​ ಸೃಷ್ಟಿಸಿದ್ದಾರೆ. ಈ ಆಟಗಾರರನ್ನ ಕಟ್ಟಿ ಹಾಕೋ ಸವಾಲು ಧೋನಿ ಮುಂದಿದೆ.

2008ರಿಂದ ಆರಂಭವಾಗಿ ಈವರೆಗೆ ಹಲವಾರು ಆಟಗಾರರು ಬಂದು ಹೋಗಿದ್ದಾರೆ. ಆದ್ರೆ, ದೋನಿ ಮಾತ್ರ ಸೀನಿಯರ್ಸ್​​, ಜೂನಿಯರ್ಸ್​, ಇದೀಗ ನೆಕ್ಸ್ಟ್​​ ಜನರೇಷನ್​ನ ಆಟಗಾರರು ಬಂದರೂ ಚೆನ್ನೈ ಸಾರಥಿಯಲ್ಲಿ ತಂಡವನ್ನ ಯಶಸ್ಸಿಯಾಗಿ ಲೀಡ್​ ಮಾಡ್ತಿದ್ದಾರೆ. ಇಷ್ಟೇ ಅಲ್ಲ.. 42ರ ವಯಸ್ಸಿನಲ್ಲೂ ಅಭಿಮಾನಿಗಳಿಗೆ ತನ್ನ ಆಟದಿಂದ ಸಖತ್​ ಟ್ರೀಟ್​​ ನೀಡ್ತಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಐಪಿಎಲ್​ನಲ್ಲಿ ಮಾಹಿ ಜರ್ನಿಯೇ ರೋಚಕ; ಸೆಹ್ವಾಗ್​, ಯುವಿ ಸವಾಲ್.. ಕೊಹ್ಲಿ, ರೋಹಿತ್​​ಗೂ ಕೊಟ್ಟಿದ್ರೂ ದಿಟ್ಟ ಆನ್ಸರ್..!

https://newsfirstlive.com/wp-content/uploads/2024/03/MS-DHONI-2.jpg

Load More