/newsfirstlive-kannada/media/post_attachments/wp-content/uploads/2025/04/MS-DHONI.jpg)
ಸತತ ಸೋಲಿನಿಂದ ಕಂಗಟ್ಟಿದ್ದ ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿನ ಟ್ರ್ಯಾಕ್ಗೆ ಮರಳಿದೆ. ಲಕ್ನೋ ಎದುರು ಗೆದ್ದ ಚೆನ್ನೈ ಉಳಿದ 7ಕ್ಕೆ ಏಳೂ ಪಂದ್ಯಗಳನ್ನು ಗೆದ್ದರೆ, ಪ್ಲೇ ಆಫ್ಗೆ ಎಂಟ್ರಿ ನೀಡೋದು ಪಕ್ಕಾ. ಚೆನ್ನೈನ ಟಾರ್ಗೆಟ್ ಪ್ಲೇ ಆಫ್ ಎಂಟ್ರಿಯಲ್ಲ.. ಸದ್ಯ ಚೆನ್ನೈ ಫ್ರಾಂಚೈಸಿ ಭವಿಷ್ಯದ ಪ್ಲಾನ್ ರೂಪಿಸ್ತಿದೆ.
ಈ ಸೀಸನ್ನಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಚೆನ್ನೈ ಸತತ ಸೋಲುಗಳ ಮುಖಭಂಗ ಅನುಭವಿಸಿದೆ. ಹಿಂದೆಂದೂ ಕಾಣದ ಹೀನಾಯ ಪ್ರದರ್ಶನಕ್ಕೆ ಟೀಕೆಗಳನ್ನ ಎದುರಿಸಿದೆ. ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಆಡಿದ 7ರಲ್ಲಿ ಜಸ್ಟ್ ಎರಡೇ ಎರಡು ಪಂದ್ಯಗಳನ್ನಷ್ಟೇ ಗೆದ್ದಿರುವ ಚೆನ್ನೈನ ಪ್ಲೇ-ಆಫ್ ಹಾದಿ ಕಠಿಣವೆನಿಸಿದೆ. ಮುಂದಿನ ಎಲ್ಲಾ ಪಂದ್ಯಗಳಲ್ಲಿ ಸತತ ಗೆಲುವು ದಾಖಲಿಸಿದ್ರೆ ಪ್ಲೇ-ಆಫ್ ತಲುಪುವುದು ಕಷ್ಟವೇನಲ್ಲ. ಹೀಗಿದ್ರೂ ಚೆನ್ನೈ ಸೂಪರ್ ಕಿಂಗ್ಸ್ ಮ್ಯಾನೇಜ್ಮೆಂಟ್ ಈ ಸೀಸನ್ ಬಗ್ಗೆ ತಲೆ ಕೆಡಸಿಕೊಂಡಿಲ್ಲ. ಚೆನ್ನೈಗೆ ಈ ಐಪಿಎಲ್ ಸೀಸನ್ ಆಟಕ್ಕುಂಟು ಲೆಕ್ಕಕ್ಕಿಲ್ಲ. ಇದಕ್ಕೆ ಕಾರಣ ಚೆನ್ನೈ ಭವಿಷ್ಯದ ಪ್ಲಾನ್ಸ್.
ಭವಿಷ್ಯದತ್ತ ಚೆನ್ನೈ ಸೂಪರ್ ಕಿಂಗ್ಸ್ ಚಿತ್ತ
ಈ ಬಾರಿ ಪ್ರತಿ ಸ್ಲಾಟ್, ಪ್ರತಿ ವಿಭಾಗದಲ್ಲೂ ಚೆನ್ನೈ ಹಿಂದೆಂದೂ ಕಾಣದ ಫೇಲ್ಯೂರ್ ಕಂಡಿದೆ. ಬ್ಯಾಟಿಂಗ್, ಬೌಲಿಂಗ್ ಬಿಡಿ.. ಫೀಲ್ಡಿಂಗ್ನಲ್ಲೂ ಹೀನಾಯ ಪರ್ಫಾಮೆನ್ಸ್ ನೀಡಿದೆ. ಕಳಪೆ ಪರ್ಫಾಮೆನ್ಸ್ನಿಂದ ಬೇಸತ್ತು ಟ್ರೋಫಿ ಕನಸು ಕೈಬ್ಬಿಟ್ಟಿರುವ ಚೆನ್ನೈ ಸೂಪರ್ ಕಿಂಗ್ಸ್, ಇದೀಗ ಭವಿಷ್ಯದತ್ತ ದೃಷ್ಟಿ ನೆಟ್ಟಿದೆ. ಭವಿಷ್ಯಕ್ಕೆ ಯಂಗ್ ಕೋರ್ ಟೀಮ್ ಕಟ್ಟೋ ನಿಟ್ಟಿನಲ್ಲಿ ಹೆಜ್ಜೆಯನ್ನಿಟ್ಟಿದೆ.
ಇದನ್ನೂ ಓದಿ: ಚಿನ್ನಸ್ವಾಮಿಯಲ್ಲಿ RCB ಮ್ಯಾಚ್; ಪಂಜಾಬ್ ಮಣಿಸಲು ಓರ್ವ ಬ್ಯಾಟರ್ ಮೇಲೆ ಭಾರೀ ನಂಬಿಕೆಯಿಟ್ಟ ರಜತ್..!
ಬಲಿಷ್ಠ ತಂಡ ಕಟ್ಟಲು ಪ್ರಯೋಗ
ಲಕ್ನೋ ಸೂಪರ್ ಜೈಂಟ್ಸ್ ಎದುರಿನ ಪಂದ್ಯದೊಂದಿಗೆ ಚೆನ್ನೈ ತಂಡ ಪ್ರಯೋಗಗಳಿಗೆ ಮುಂದಾಗಿದೆ. ಈ ಪಂದ್ಯದಲ್ಲಿ ಇನ್ಕನ್ಸಿಸ್ಟೆಂಟ್ ಅನಿಸಿದ್ದ ಡಿವೋನ್ ಕಾನ್ವೆಯನ್ನ ಬೆಂಚ್ ಕಾಯಿಸಿದ ಮ್ಯಾನೇಜ್ಮೆಂಟ್, 20 ವರ್ಷದ ಶೇಕ್ ರಶೀದ್ಗೆ ಓಪನಿಂಗ್ ಮಾಡುವ ಅವಕಾಶ ನೀಡ್ತು. ಅನುಭವಿ ಸೀನಿಯರ್ ಆಟಗಾರ ಆಫ್ ಸ್ಪಿನ್ನರ್ ಆರ್.ಅಶ್ವಿನ್ನೂ ಪ್ಲೇಯಿಂಗ್ ಇಲೆವೆನ್ನಿಂದ ಹೊರಗಿಟ್ಟಿತ್ತು. ಯುವ ಅಂಶುಲ್ ಕಾಂಬೋಜ್ನ ಬ್ಯಾಕ್ ಮಾಡ್ತು. ಇದಿಷ್ಟೇ ಅಲ್ಲ, ಋತುರಾಜ್ ರಿಪ್ಲೇಸ್ಮೆಂಟ್ ಪ್ಲೇಯರ್ ಆಗಿ ಸ್ಟಾರ್ನ ಕರೆ ತರೋ ಬದಲು 17 ವರ್ಷದ ಆಯುಷ್ ಮ್ಹಾತ್ರೆಗೆ ಮಣೆ ಹಾಕಿದೆ. ಇದೆಲ್ಲವೂ ಭವಿಷ್ಯದ ತಂಡ ಕಟ್ಟೋ ಪ್ರಯೋಗದ ಭಾಗವಾಗಿದೆ.
ಧೋನಿ ಹೆಗಲಿಗೆ ಟೀಮ್ ಕಟ್ಟುವ ಹೊಣೆ
ಚೆನ್ನೈ ತಂಡದ ಚಾಂಪಿಯನ್ ಕ್ಯಾಪ್ಟನ್ ಧೋನಿ ಹೆಗಲಿಗೆ ಟೀಮ್ ಕಟ್ಟುವ ಹೊಣೆಯನ್ನ ಫ್ರಾಂಚೈಸಿ ನೀಡಿದೆ. ಋತುರಾಜ್ಗೆ ಇಂಜುರಿಯಾದ ಬೆನ್ನಲ್ಲೇ ಮತ್ತೆ ಧೋನಿಯನ್ನ ನಾಯಕನನ್ನಾಗಿ ನೇಮಿಸಿದ್ದು ಇದೇ ಕಾರಣಕ್ಕೆ. ಧೋನಿ ಯಾವಾಗ ಐಪಿಎಲ್ಗೆ ಗುಡ್ ಬೈ ಹೇಳ್ತಾರೋ ಗೊತ್ತಿಲ್ಲ. ಧೋನಿ ಜೊತೆಗೆ ಆರ್.ಅಶ್ವಿನ್, ರವೀಂದ್ರ ಜಡೇಜಾ ಕೂಡ ನಿವೃತ್ತಿಯ ಅಂಚಿನಲ್ಲಿದ್ದಾರೆ. ಸದ್ಯ ತಂಡದಲ್ಲಿರುವ ರಾಹುಲ್ ತ್ರಿಪಾಠಿ, ದೀಪಕ್ ಹೂಡಾರಂತ ಆಟಗಾರರು ಸಹ ತಂಡಕ್ಕೆ ಹೊರೆಯೇ ಆಗಿದ್ದಾರೆ. ಇವರಿಗೆ ಪರ್ಯಾಯ ಆಟಗಾರರನ್ನು ಬೆಳಸೋ ಟಾಸ್ಕ್ ಧೋನಿಗೆ ನೀಡಲಾಗಿದೆ.
ಇದನ್ನೂ ಓದಿ:ಚಿನ್ನಸ್ವಾಮಿಯಲ್ಲಿ ಗೆಲ್ಲಲು ಆರ್ಸಿಬಿಗೆ ಇದೆ ಈ ಅಸ್ತ್ರ.. ತಪ್ಪು ತಿದ್ದಿಕೊಳ್ಳಲು ಸುವರ್ಣಾವಕಾಶ..!
ಪ್ರಸಕ್ತ ಸೀಸನ್ನಲ್ಲಿ ವೈಫಲ್ಯ ಕಂಡಿದ್ದಾಗಿದೆ. ಇದ್ರ ಬಗ್ಗೆ ಹೆಚ್ಚು ತಲೆ ಕೆಡೆಸಿಕೊಂಡು ಫಲವಿಲ್ಲ. ಹೀಗಾಗಿ ಚೆನ್ನೈ ಮ್ಯಾನೇಜ್ಮೆಂಟ್, ಈಗಿನಿಂದಲೇ ಭವಿಷ್ಯದತ್ತ ದೃಷ್ಟಿ ನೆಟ್ಟಿದೆ. ಯುವ ಆಟಗಾರರಿಗೆ ತಂಡದಲ್ಲಿ ಹೆಚ್ಚು ಅವಕಾಶ ನೀಡಲು ಫ್ರಾಂಚೈಸಿ ಮುಂದಾಗಿದೆ. ಈ ಪ್ರಯೋಗ ಎಷ್ಟರಮಟ್ಟಿಗೆ ಸಕ್ಸಸ್ ಆಗುತ್ತೆ ಅನ್ನೋದಕ್ಕೆ ಕಾಲವೇ ಉತ್ತರಿಸಲಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್