/newsfirstlive-kannada/media/post_attachments/wp-content/uploads/2025/03/Dhoni-3.jpg)
ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸಿಎಸ್ಕೆಯನ್ನು 50 ರನ್‌ಗಳಿಂದ ಸೋಲಿಸಿದೆ. ಬೆನ್ನಲ್ಲೇ ಸಿಎಸ್‌ಕೆ ಸೋಲಿನ ಬಗ್ಗೆ ಭಾರೀ ಚರ್ಚೆ ಆಗ್ತಿದೆ. ಆರ್ಸಿಬಿ ವಿರುದ್ಧ ಚೆನ್ನೈ ಸೋಲಲು ಕಾರಣ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಎಂದು ಕ್ರಿಕೆಟ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈ ಬಗ್ಗೆ ದೊಡ್ಡ ಹೇಳಿಕೆ ನೀಡಿರುವ ಆಸ್ಟ್ರೇಲಿಯಾದ ಮಾಜಿ ನಾಯಕ ಶೇನ್ ವ್ಯಾಟ್ಸನ್.. ಚೆನ್ನೈ ಸೂಪರ್ ಕಿಂಗ್ಸ್ ಸೋಲಿನ ಹಿಂದೆ, ಆ ತಂಡದ ಬ್ಯಾಟಿಂಗ್ ಕ್ರಮಾಂಕ ಪ್ರಮುಖವಾಗಿದೆ. ಧೋನಿ 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬರೋದನ್ನು ನಾನು ಒಪ್ಪುವುದಿಲ್ಲ. ಧೋನಿ ಮೊದಲೇ ಬ್ಯಾಟಿಂಗ್‌ಗೆ ಬಂದಿದ್ದರೆ, ಚೆನ್ನೈ ತಂಡದ ಗೆಲುವಿನ ಶೇಕಡಾವಾರು ಹೆಚ್ಚಾಗುತ್ತಿತ್ತು. ನಾಯಕ ಋತುರಾಜ್ ಗಾಯಕ್ವಾಡ್ ನಿರ್ಧಾರ ಸರಿ ಇಲ್ಲ. ಧೋನಿಯನ್ನು ಕೆಳ ಕ್ರಮಾಂಕದಲ್ಲಿ ಕಳುಹಿಸೋದು ಸರಿಯಲ್ಲ ಎಂದು ಟೀಕಿಸಿದ್ದಾರೆ.
ಧೋನಿ ದೊಡ್ಡ ತಪ್ಪು..
‘ಧೋನಿ 16 ಎಸೆತಗಳಲ್ಲಿ 30 ರನ್ ಗಳಿಸೋದನ್ನು ನೋಡಲು ಸಿಎಸ್‌ಕೆ ಅಭಿಮಾನಿಗಳು ನಿಜವಾಗಿಯೂ ಬರುತ್ತಾರೆ. ವೈಯಕ್ತಿಕವಾಗಿ ನಾನು, ಧೋನಿ ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡೋದನ್ನು ಇಷ್ಟಪಡುತ್ತೇನೆ. ನನ್ನ ಪ್ರಕಾರ ಅಶ್ವಿನ್‌ಗಿಂತ ಮೊದಲು ಬ್ಯಾಟಿಂಗ್‌ಗೆ ಬರಬೇಕಿತ್ತು. ಪಂದ್ಯದ ಪರಿಸ್ಥಿತಿ ಪರಿಗಣಿಸಿ, 16 ಬಾಲ್ನಲ್ಲಿ 30 ರನ್ ಬಾರಿಸಿದಂತೆ ಹೆಚ್ಚುವರಿಯಾಗಿ ಇನ್ನೂ 15 ಬಾಲ್ ಎದುರಿಸಿ ಅದೇ ಶೈಲಿಯಲ್ಲೇ ಬ್ಯಾಟಿಂಗ್ ಮಾಡಬಹುದಿತ್ತು.
ಧೋನಿಯಿಂದ ಸೋಲು
ಧೋನಿ ಬ್ಯಾಟಿಂಗ್‌ಗೆ ಬೇಗ ಬಂದಿದ್ದರೆ, ಬಹುಶಃ ಚೆನ್ನೈ ಗೆಲ್ಲುವ ಸಾಧ್ಯತೆಗಳು ಹೆಚ್ಚಾಗಿತ್ತು. ಧೋನಿ ಬಾರಿಸಿದ ಬೌಂಡರಿ ಮತ್ತು ಸಿಕ್ಸರ್‌ಗಳು ಪ್ರೇಕ್ಷಕರಿಗೆ ಖಂಡಿತವಾಗಿಯೂ ಇಷ್ಟವಾಗುತ್ತಿದ್ದವು ಎಂದು ವಿವರಿಸಿದ್ದಾರೆ. ನಿನ್ನೆಯ ಪಂದ್ಯದಲ್ಲಿ 9 ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದ ಧೋನಿ, 16 ಬಾಲ್ನಲ್ಲಿ ಎರಡು ಸಿಕ್ಸರ್, ಮೂರು ಬೌಂಡರಿ ಬಾರಿಸಿ 30 ರನ್ಗಳಿಸಿದರು. ಕೇವಲ ಶೇನ್ ವ್ಯಾಟ್ಸನ್ ಮಾತ್ರವಲ್ಲ, ಅನೇಕ ಕ್ರಿಕೆಟ್ ವಿಶ್ಲೇಷಕರು ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರಲ್ಲಿ ಇರ್ಪಾನ್ ಪಠಾಣ್ ಕೂಡ ಒಬ್ಬರು.
ಇದನ್ನೂ ಓದಿ: RCB ಅಭಿಮಾನಿಗಳಿಗೆ ಇದು ಸಖತ್ ಸುದ್ದಿ, ಸಿಎಸ್‌ಕೆ ವಿರುದ್ಧ ಗೆಲ್ತಿದ್ದಂತೆ ಏನಾಗಿದೆ ನೋಡಿ..!
I will never be in favour of Dhoni batting at number 9. Not ideal for team.
— Irfan Pathan (@IrfanPathan) March 28, 2025
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್