ಕ್ಯಾಪ್ಟನ್​ MS​ ಧೋನಿಗೆ ಭಾರೀ ಅವಮಾನ.. ಕೇವಲ 104 ರನ್​ಗಳ ಟಾರ್ಗೆಟ್ ನೀಡಿದ ಚೆನ್ನೈ

author-image
Bheemappa
Updated On
ಕ್ಯಾಪ್ಟನ್​ MS​ ಧೋನಿಗೆ ಭಾರೀ ಅವಮಾನ.. ಕೇವಲ 104 ರನ್​ಗಳ ಟಾರ್ಗೆಟ್ ನೀಡಿದ ಚೆನ್ನೈ
Advertisment
  • ಹಾಗೇ ಬಂದು ಹೀಗೆ ಹೋದ ಚೆನ್ನೈ ತಂಡದ ಬ್ಯಾಟ್ಸ್​ಮನ್​ಗಳು
  • ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್​ ಪಂದ್ಯ
  • ವರುಣ್​, ನರೈನ್​, ರಾಣಾ ಬೌಲಿಂಗ್​ ಆಕ್ರಮಣಕ್ಕೆ ಚೆನ್ನೈ ಔಟ್

2025ರ ಐಪಿಎಲ್​ ಟೂರ್ನಿಯಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ತನ್ನ ನೆಲದಲ್ಲಿಯೇ ಭಾರೀ ಅವಮಾನಕ್ಕೆ ಒಳಗುತ್ತಿದೆ.​ 20 ಓವರ್​ಗಳಲ್ಲಿ 9 ವಿಕೆಟ್​ ಕಳೆದುಕೊಂಡು 104  ರನ್​ಗಳ ಗುರಿಯನ್ನು ಕೋಲ್ಕತ್ತಾ ನೈಟ್​ ರೈಡರ್ಸ್​ಗೆ ನೀಡಿದೆ.

ಎಂ.ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ 25ನೇ ಐಪಿಎಲ್​ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ ತಂಡದ ನಾಯಕ ಅಜಿಂಕ್ಯಾ ರಹಾನೆ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು ಚೆನ್ನೈ ತಂಡವನ್ನು ಬ್ಯಾಟಿಂಗ್​ಗೆ ಆಹ್ವಾನ ಮಾಡಿದರು. ಕೆಲವೇ ಕ್ಷಣದಲ್ಲಿ ರಹಾನೆಯ ಈ ನಿರ್ಧಾರ ಸರಿಯಾಗಿ ಇದೆ ಎನಿಸಿತು. ಏಕೆಂದರೆ, ಚೆನ್ನೈ ಪರ ಆರಂಭಿಕರಾಗಿ ಬ್ಯಾಟಿಂಗ್​ಗೆ ಬಂದ ರಚಿನ್ ರವೀಂದ್ರ (4) ಹಾಗೂ ಡಿವೋನ್ ಕಾನ್ವೆ (12) ತಂಡದ ಮೊತ್ತ 16 ರನ್​ ಇರುವಾಗಲೇ ಔಟ್ ಆದರು.

ಇದನ್ನೂ ಓದಿ:CSK ಪ್ಲೇ ಆಫ್​ ಹಾದಿ ಭಾರೀ ಕಠಿಣ.. ಕೂಲ್​ ಕ್ಯಾಪ್ಟನ್ ಧೋನಿ​ ಮುಂದೆ ಸಾಲು ಸಾಲು ಚಾಲೆಂಜಸ್​.!

publive-image

ರಾಹುಲ್ ತ್ರಿಪಾಠಿ 16 ರನ್​ ಗಳಿಸಿ ಆಡುವಾಗ ಸುನಿಲ್ ನರೈನ್​ ಅವರ ಬೌಲಿಂಗ್​ನಲ್ಲಿ ಕ್ಲೀನ್ ಬೋಲ್ಡ್​ ಆದರು. ವಿಜಯ್ ಶಂಕರ್ 2 ಫೋರ್, 1 ಸಿಕ್ಸರ್ ಸಮೇತ 29 ರನ್​ಗಳಿಂದ ಆಡುವಾಗ ವರುಣ್​ ಚಕ್ರವರ್ತಿ ಬ್ರೇಕ್ ಹಾಕಿದರು. ತವರಿನ ಪಿಚ್ ಆದರೂ ಆರ್ ಅಶ್ವಿನ್ ಅವರು​ ಕೂಡ ಬಂದಷ್ಟೇ ವೇಗವಾಗಿ ಪೆವಿಲಿಯನ್​ಗೆ ನಡೆದರು. ಆಲ್​ರೌಂಡರ್ ಜಡೇಜಾ ಹಾಗೂ ದೀಪಕ್ ಹೂಡಾ ಈ ಇಬ್ಬರು ಡಕೌಟ್ ಆಗಿರುವುದು ಭಾರೀ ಅವಮಾನಕ್ಕೆ ಕಾರಣವಾಯಿತು ಎನ್ನಬಹುದು.

ಚೆನ್ನೈ ತಂಡದ ಕ್ಯಾಪ್ಟನ್ ಹಾಗೂ ವಿಕೆಟ್​ ಕೀಪರ್ ಎಂ.ಎಸ್​ ಧೋನಿ ಅವರು 10ನೇ ಬ್ಯಾಟ್ಸ್​ಮನ್​ ಆಗಿ ಕ್ರೀಸ್​ಗೆ ಆಗಮಿಸಿದರು. ಆದರೆ ಧೋನಿ ಬ್ಯಾಟಿಂಗ್ ವೇಳೆ ಫ್ರಂಟ್​ನಲ್ಲಿ ಕೆಕೆಆರ್​ ಫೀಲ್ಡರ್​ ಅನ್ನು ನಿಲ್ಲಿಸಿದ್ದರು. ಬಂದಷ್ಟೇ ವೇಗವಾಗಿ ಧೋನಿ 1 ರನ್​ಗೆ ಹೊರ ನಡೆದು ಫ್ಯಾನ್ಸ್​ಗೆ ನಿರಾಸೆ ಮೂಡಿಸಿದರು. ನೂರ್​ ಅಹ್ಮದ್​ ಕೂಡ 1 ರನ್​ಗೆ ಕ್ಯಾಚ್ ಕೊಟ್ಟರು. ತಂಡದಲ್ಲಿ ಶಿವಂ ದುಬೆ ಅವರ 31 ರನ್​ಗಳನ್ನು ಬಿಟ್ಟರೇ ಉಳಿದ ಯಾವ ಬ್ಯಾಟ್ಸ್​ಮನ್ ಕೂಡ ಈ ರನ್​ಗಳ ಗಡಿ ಸನಿಹಕ್ಕೂ ಬರಲಿಲ್ಲ. ಹೀಗಾಗಿ ಚೆನ್ನೈ ಸೂಪರ್​ ಕಿಂಗ್ಸ್​ ಕೇವಲ 104 ರನ್​ಗಳ ಟಾರ್ಗೆಟ್​ ಅನ್ನು ರಹಾನೆ ಪಡೆಗೆ ನೀಡಿದೆ. ​ ​

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment