Advertisment

MS ಧೋನಿ ನ್ಯೂ ಹೇರ್ ಸ್ಟೈಲ್​.. ಹೊಸ ಲುಕ್​ನಲ್ಲಿ ಐಪಿಎಲ್​ಗೆ ಎಂಟ್ರಿ ಕೊಡಲಿರೋ ಮಾಜಿ ಕ್ಯಾಪ್ಟನ್!

author-image
Bheemappa
5 ಟ್ರೋಫಿ, 11 ಫೈನಲ್​ ಆಡಿದ ಏಕೈಕ ಪ್ಲೇಯರ್ MS ಧೋನಿ.. ಆದ್ರೆ ಆ ತಂಡಕ್ಕೆ ಕಪ್ ಗೆಲ್ಲಿಸಿಕೊಡಲು ಆಗಲಿಲ್ಲ!
Advertisment
  • ಕೂಲ್ ಕ್ಯಾಪ್ಟನ್ ಹೇರ್ ಸ್ಟೈಲ್ ಚೇಂಜ್ ಮಾಡಿದ್ದು ಯಾರು?
  • 40 ದಾಟಿದರೂ ಇನ್ನು ಯಂಗ್ ಪ್ಲೇಯರ್​ನಂತೆ ಇರೋ MSD
  • IPL ಪ್ರಾರಂಭವಾದರೆ ಸಾಕು ಧೋನಿ ಹವಾ ಬೇರೆನೇ ಇರುತ್ತೆ

ಭಾರತ-ಬಾಂಗ್ಲಾ ನಡುವೆ ಕೊನೆ ಟಿ20 ಪಂದ್ಯ ಇಂದು ನಡೆಯಲಿದ್ದು ವಿಜಯಮಾಲೆ ಯಾರ ಕೊರಳಿಗೆ ಬೀಳುತ್ತೋ ಎನ್ನುವುದು ಎಲ್ಲರ ಕುತೂಹಲವಾಗಿದೆ. ಈಗಾಗಲೇ ಸರಣಿ ವಶಕ್ಕೆ ಪಡೆದ ಭಾರತ ವಿಜಯದಶಮಿಯಂದು ಗೆಲುವಿನ ಓಟ ಮುಂದುವರೆಸುತ್ತ ಎಂದು ಕಾದು ನೋಡಬೇಕಿದೆ. ದಸರಾ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಕ್ರಿಕೆಟರ್ಸ್ ಕೂಡ ಕುಟುಂಬದ ಜೊತೆ ದಸರಾ ಆಚರಿಸಿಸುತ್ತಿದ್ದಾರೆ. ಇತ್ತ ಮಾಜಿ ಕೂಲ್ ಕ್ಯಾಪ್ಟನ್ ಎಂ.ಎಸ್ ಧೋನಿ ಮತ್ತೊಂದು ನ್ಯೂ ಹೇರ್​ ಸ್ಟೈಲ್​ನಲ್ಲಿ ಕಾಣಿಸಿಕೊಂಡಿದ್ದಾರೆ.

Advertisment

ಇದನ್ನೂ ಓದಿ: T20ಯಲ್ಲಿ ಹೈದ್ರಾಬಾದ್​ ಯಂಗ್ ಪ್ಲೇಯರ್​ ಹವಾ.. ನಿತೀಶ್​ ರೆಡ್ಡಿ ಖರೀದಿ ಮಾಡುತ್ತಾ RCB?

ಈ ದಸರಾ, ವಿಜಯದಶಮಿಗೆ ಎಂ.ಎಸ್ ಧೋನಿ ನ್ಯೂ ಲುಕ್​ನಲ್ಲಿದ್ದು ಯಂಗ್ ಪ್ಲೇಯರ್​​ ಅಂತೆ ಮತ್ತೆ ಐಪಿಎಲ್ ಅಖಾಡಕ್ಕೆ ಎಂಟ್ರಿ ಕೊಡಲಿದ್ದಾರೆ. ಧೋನಿ ಹೊಸ ಹೇರ್​ ಸ್ಟೈಲ್​ ಮಾಡಿಸಿದ್ದು ಎಲ್ಲರನ್ನು ಆಕರ್ಷಣೆ ಮಾಡುವಂತೆ ಇದೆ. ಅಲ್ಲದೇ ಫ್ಯಾನ್ಸ್​ ವಾವ್ಹ್​.. ಎನ್ನುವ ರೀತಿಯಲ್ಲಿ ಧೋನಿ ಲುಕ್ ಬದಲಾಯಿಸಿದ್ದಾರೆ. ಆಲಿಮ್ ಹಕೀಮ್, ಧೋನಿಯನ್ನು ಯಾವಗಲೂ ಹೊಸ ರೀತಿಯಲ್ಲಿ ನೋಡಲು ಇಷ್ಟ ಪಡುತ್ತಾರೆ. ಅದರಂತೆ ಮಿಸ್ಟರ್ ಕೂಲ್ ಕ್ಯಾಪ್ಟನ್ ಹೇರ್ ಸ್ಟೈಲ್ ಅನ್ನು ಆಲಿಮ್ ಹಕೀಮ್ ಚೇಂಜ್ ಮಾಡಿದ್ದು ಧೋನಿ 43ರ ವಯಸ್ಸಿನಲ್ಲಿ ಚಿರ ಯುವಕನಂತೆ, ಫಿಲ್ಮ ಹೀರೋನಂತೆ ಸ್ಮಾರ್ಟ್ ಆಗಿದ್ದಾರೆ.

ಇದನ್ನೂ ಓದಿ: Bharti Rallyಯಲ್ಲಿ ನೇರ ನೇಮಕಾತಿ, 2 ಸಾವಿರಕ್ಕೂ ಅಧಿಕ ಹುದ್ದೆಗಳು.. 8th, SSLC, PUC ಆದವ್ರಿಗೆ ಚಾನ್ಸ್

Advertisment

publive-image

ಚೆನ್ನೈನ ಮಾಜಿ ಕ್ಯಾಪ್ಟನ್ ಧೋನಿ 2025ರ ಐಪಿಎಲ್​​ಗೆ ಇದೇ ಲುಕ್​ನಲ್ಲಿ ಅಖಾಡಕ್ಕೆ ಇಳಿಯುತ್ತಾರೆ ಎನ್ನಲಾಗುತ್ತಿದೆ. ಐಪಿಎಲ್ ಪ್ರಾರಂಭವಾದರೆ ಧೋನಿ ಹವಾ ಬೇರೆ ಇರುತ್ತೆ. ಇಡೀ ಸ್ಟೇಡಿಯಂ ಎಲ್ಲ ಯೆಲ್ಲೋಮಯ ಆಗಿರುತ್ತದೆ. ಅಲ್ಲದೇ ಸದ್ಯದ ನ್ಯೂ ಲುಕ್​ ಧೋನಿಯ ಕ್ರೇಜ್ ಇನ್ನಷ್ಟು ಹೆಚ್ಚಿಸಬಹುದು. ಇನ್ನು ಹೊಸ ಹೊಸ ಹೇರ್​ಸ್ಟೈಲ್​ನಲ್ಲಿ ಕಾಣಿಸಿಕೊಳ್ಳಬೇಕು ಎನ್ನುವುದು ಧೋನಿಗೆ ಮೊದಲಿಂದಲೂ ಮಹಾದಾಸೆ​. ಅದರಂತೆ ಆಲಿಮ್ ಹಕೀಮ್ ಕೂಡ ಧೋನಿಯನ್ನು ಹೊಸ ರೀತಿಯ ಹೇರ್​ಸ್ಟೈಲ್​​ನಲ್ಲಿ ರೆಡಿ ಮಾಡುತ್ತಾರೆ. ಸದ್ಯ ಧೋನಿಯ ನ್ಯೂ ಹೇರ್​​ಸ್ಟೈಲ್ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment