newsfirstkannada.com

ನ್ಯೂ ಸೀಸನ್​.. ನ್ಯೂ ರೋಲ್​.. IPLನಲ್ಲಿ ಮಾಹಿಗೆ ಹೊಸ ಜವಾಬ್ದಾರಿ

Share :

Published March 5, 2024 at 1:08pm

  ಹೊಸ ಅವತಾರದಲ್ಲಿ ಮಿಸ್ಟರ್ ಕೂಲ್ ಮಾಹಿ​..?

  ಶುರುವಾಯ್ತು ಧೋನಿ ಬಗ್ಗೆ ಫ್ಯಾನ್ಸ್ ಲೆಕ್ಕಚಾರ..?

  ನಾಯಕತ್ವ ತ್ಯಜಿಸ್ತಾರಾ ಮಹೇಂದ್ರ ಸಿಂಗ್ ಧೋನಿ..?

ಐಪಿಎಲ್​ ಸೀಸನ್ ಶುರುವಾದ್ರೆ ಸಾಕು ಅತಿ ಹೆಚ್ಚು ಚರ್ಚೆಯಾಗುವ ಹೆಸರು ಮಾಹಿ. ಕಳೆದ್ಮೂರು ಸೀಸನ್​​ಗಳಿಂದ ಮಾಹಿಯದ್ದೇ ಚರ್ಚೆ? ಈ ಸೀಸನ್​ ಕೊನೆಯಾ? ನಾಯಕತ್ವ ತ್ಯಜಿಸ್ತಾರಾ? ಚೆನ್ನೈ ಮೆಂಟರ್ ಆಗ್ತಾರಾ? ಐಪಿಎಲ್​ಗೆ ಗುಡ್​ಬೈ ಹೇಳ್ತಾರಾ ಅನ್ನೋದು. ಆದ್ರೀಗ ಇಂಥದ್ದೇ ಚರ್ಚೆ ಮತ್ತೆ ಹುಟ್ಟಿದೆ.

ಸೀಸನ್​​-17 ಐಪಿಎಲ್​ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಈ ಬೆನ್ನಲ್ಲೇ ಚಾಂಪಿಯನ್ ಕ್ಯಾಪ್ಟನ್ ಮಾಹಿಯದ್ದೇ ಚರ್ಚೆ.. ಚೆನ್ನೈ ನಾಯಕರಾಗಿ ತಂಡವನ್ನ ಮುನ್ನೆಡೆಸ್ತಾರಾ? ಈ ವರ್ಷವೇ ಐಪಿಎಲ್ ಭವಿಷ್ಯ ಕೊನೆಯಾಗುತ್ತಾ? ಎಂಬಿತ್ಯಾದಿ ಸಾಲು ಸಾಲು ಪ್ರಶ್ನೆಗಳು ಹುಟ್ಟಿಕೊಂಡಿವೆ. ಇದಕ್ಕೆ ಉತ್ತರ ಸಿಗದ ಹೊತ್ತಲ್ಲೇ ಸಿಡಿದ ಒಂದೇ ಒಂದು ಫೋಸ್ಟ್​​. ಕ್ರಿಕೆಟ್ ದಿಗ್ಗಜರ ಹಾಗೂ ಅಭಿಮಾನಿಗಳ ತಲೆಗೆ ಮತ್ತಷ್ಟು ಹುಳಬಿಟ್ಟಿದೆ.

ನ್ಯೂ ಸೀಸನ್​.. ನ್ಯೂ ರೋಲ್​..
ನ್ಯೂ ಸೀಸನ್​-17ರ ಆರಂಭಕ್ಕೆ ಜಸ್ಟ್ 17 ದಿನವಷ್ಟೇ ಬಾಕಿಯಿದೆ. ಈ ಹೊತ್ತಿನಲ್ಲೇ ಚೆನ್ನೈ ನಾಯಕ ಮಾಹಿ, ಫೇಸ್​ಬುಕ್​ನಲ್ಲಿ ಹಾಕಿರುವ ಒಂದು ಪೋಸ್ಟ್ ಕ್ಯೂರಿಯಾಸಿಟಿ ಹೆಚ್ಚಿಸಿದೆ. ಈ ಸೀಸನ್​ನಲ್ಲಿ ಧೋನಿ, ಯಾವ ರೋಲ್​ ಪ್ಲೇ ಮಾಡ್ತಾರೆ ಎಂಬ ಲೆಕ್ಕಚಾರವೂ ಜೋರಾಗಿ ನಡೀತಿದೆ. ಇದಕ್ಕೆ ಕಾರಣ ಒಂದು ಫೋಸ್ಟ್​. ಫೇಸ್​ಬುಕ್​ನಲ್ಲಿ ಹೊಸ ಸೀಸನ್‌ಗಾಗಿ ಕಾಯುತ್ತಿದ್ದೇನೆ. ಈ ಸೀಸನ್​​ನಲ್ಲಿ ನ್ಯೂ ರೋಲ್​ನಲ್ಲಿ ಕಾಣಿಸಿಕೊಳ್ಳಲಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಇದೇ ಈಗ ಧೋನಿ, ಯಾವ ಪಾತ್ರದಲ್ಲಿ ಕಾಣಿಸಿಕೊಳ್ತಾರೆ ಎಂಬ ಪ್ರಿಡಿಕ್ಷನ್ ಶುರುವಾಗುವಂತೆ ಮಾಡಿದೆ.

ಸೀಸನ್​​-16ರ ಮುಕ್ತಾಯದ ಬೆನ್ನಲ್ಲೇ ಮಾಹಿ, ಮುಂದಿನ ಸೀಸನ್ ಆಡ್ತೀರಾ ಎಂಬ ಪ್ರಶ್ನೆಗೆ 9 ತಿಂಗಳು ಬಾಕಿಯಿದೆ ಎಂದಿದ್ರು. ಆ ಮೂಲಕ ಅಡ್ಡಗೋಡೆಯ ಮೇಲೆ ದೀಪ ಇಟ್ಟಿದ್ರು. ಅಷ್ಟೇ ಅಲ್ಲ.! ಈ ಸೀಸನ್​ನ ಮೊದಲಾರ್ಧದ ಬಳಿಕ ನಾಯಕತ್ವ ಬಿಟ್ಟುಕೊಡುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬಂದಿವೆ. ಈ ಹೊತ್ತಿನಲ್ಲೇ ಧೋನಿಯ ಆ ಒಂದು ಪೋಸ್ಟ್​ ನಾಯಕತ್ವ ಬಿಡ್ತಾರಾ ಎಂಬ ಪ್ರಶ್ನೆಯ ಜೊತೆ ಜೊತೆಗೆ ನಿವೃತ್ತಿ ಘೋಷಿಸ್ತಾರಾ ಎಂಬ ಪ್ರಶ್ನೆ ಉದ್ಬವಿಸುವಂತೆ ಮಾಡಿದೆ.

ಇಂಜುರಿ ಕಾರಣಕ್ಕೆ ಮೆಂಟರ್ ಆಗ್ತಾರಾ ಮಹೇಂದ್ರ..?
ಕಳೆದ ಸೀಸನ್​ನಲ್ಲೇ KNEE ಇಂಜುರಿಗೆ ತುತ್ತಾಗಿದ್ದ ಮಾಹಿ, ನೋವಿನಲ್ಲೇ ಅಂಗಳಕ್ಕಿಳಿದಿದ್ದರು. ಫ್ಯಾನ್ಸ್​ಗೆ ಮನರಂಜನೆ ನೀಡಿದ್ರು. ಆದ್ರೆ, ಅಪರೇಷನ್​​ಗೆ ಒಳಗಾಗಿರುವ ಮಾಹಿ ಸಂಪೂರ್ಣ ಫಿಟ್​ ಆಗಿರುವ ಬಗ್ಗೆ ಮಾಹಿತಿಯೇ ಇಲ್ಲ. ಹೀಗಾಗಿ ತೆರೆ ಮರೆಯಿಂದ ಮೆಂಟರ್ ಆಗಿ ಚೆನ್ನೈಗೆ ಸೇವೆ ಮಾಡ್ತಾರಾ ಎಂಬ ಪ್ರಿಡಿಕ್ಷನ್​​​​​​​ ಫ್ಯಾನ್ಸ್ ವಲಯದಲ್ಲಿದೆ.

ಓಪನರ್​ ಆಗಿ ನ್ಯೂ ರೋಲ್​ನಲ್ಲಿ ಕಣಕ್ಕಿಳಿಯುವರಾ..?
ಇದು ಉದ್ಭವಿಸಿದರೂ ಅಚ್ಚರಿ ಇಲ್ಲ. ಯಾಕಂದ್ರೆ ಅನ್​ಪ್ರಿಡಕ್ಟಲ್​ ಮಾಹಿ, ಯಾವಾಗಾದ್ರೂ ಚಮಕ್ ನೀಡಬಲ್ಲರು. ಅಚ್ಚರಿಯ ನಿರ್ಧಾರಗಳಿಗೆ ಹೆಸರುವಾಸಿಯಾಗಿರೋ ಮಾಹಿ, ಡಿವೋನ್ ಕಾನ್ವೆ ಅಲಭ್ಯತೆಯಲ್ಲಿ ಆರಂಭಿಕರಾಗಿ ಕಣಕ್ಕಿಳಿಯೋ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಯಾಕಂದ್ರೆ ಕಳೆದ ಸೀಸನ್​ನಲ್ಲಿ ಅಬ್ಬರಿಸಿದ್ದ ಮಾಹಿ, ಪೇಸ್​​​ ಮಾಡಿದ್ದು ಬೆರಳೆಣಿಕೆಯಷ್ಟು ಬಾಲ್​​ಗಳನ್ನ ಮಾತ್ರವೇ. ಹೀಗಾಗಿ ಮಾಹಿ, ಓಪನರ್ ಆಗಿ ನ್ಯೂ ರೋಲ್ ಪ್ಲೇ ಮಾಡ್ತಾರೆ ಅನ್ನೋ ಎಕ್ಸ್​ಪೆಕ್ಟೇಷನ್​ನಲ್ಲಿದ್ದಾರೆ.

ಹಿಂದಿನಂತೆ ಚಮಕ್​ ಕೊಡ್ತಾರಾ ಮಿಸ್ಟರ್​ ಕೂಲ್?
ಆನ್​ಫೀಲ್ಡ್​ನಲ್ಲಿ ಚಮಕ್ ನೀಡೋ ಮಾಹಿ, ಆಫ್​ ದಿ ಫೀಲ್ಡ್​ನಲ್ಲೂ ಚಮಕ್ ಕೊಟ್ಟಿದ್ದಿದೆ. 2022ರ ಸೆಂಪ್ಟೆಂಬರ್​​ನಲ್ಲಿ ಫೇಸ್​ಬುಕ್​ ಬುಕ್ ಫೋಸ್ಟ್​ ಮಾಡಿದ್ದ ಧೋನಿ, 2022 ಟಿ-20 ವಿಶ್ವಕಪ್​ಗೂ ಮುನ್ನ​ ರೋಚಕ ಸುದ್ದಿ ಹಂಚಿಕೊಳ್ಳುತ್ತೇನೆ ಎಂದಿ​ದ್ದರು. ಈ ವೇಳೆ ಸೋಶಿಯಲ್ ಮೀಡಿಯಾದಲ್ಲಿ ಹೊಸ ಸಂಚಲನವೇ ಸೃಷ್ಟಿಯಾಗಿತ್ತು. ಆದ್ರೆ, ಒರಿಯೋ ಬ್ರ್ಯಾಂಡ್​​​​ನ ಪ್ರಮೋಟ್ ಮಾಡಿ ಚಮಕ್​​​ ನೀಡಿದ್ರು. ಆದ್ರೀಗ 2 ವರ್ಷಗಳಿಂದ ಕೇವಲ ಕಮರ್ಶಿಯಲ್ ಪೋಸ್ಟ್​ಗಳನ್ನೇ ಮಾಡಿರೋ ಮಾಹಿ, ಐಪಿಎಲ್ ಆರಂಭಕ್ಕೂ ಮುನ್ನ ಮಾಡಿರೋ ಈ ಪೋಸ್ಟ್​ ಅಂಥದ್ದೇ ಚಮಕ್​ ನೀಡ್ತಿದೆಯಾ ಎಂಬ ಅನುಮಾನ ಹುಟ್ಟಿಸ್ತಿರೋದು ಸುಳ್ಳಲ್ಲ.

ಒಟ್ನಲ್ಲಿ. ಒಂದಂತೂ ಸತ್ಯ.. ಅನ್​ ಪ್ರಿಡಕ್ಟಬಲ್ ಧೋನಿ, ಕೊನೆ ಕ್ಷಣದಲ್ಲೇ ನಿರ್ಧಾರ ಪ್ರಕಟಿಸಿ ಪ್ರತಿ ಸಲ ಅಚ್ಚರಿಗೊಳಿಸಿದ್ದಾರೆ. ಹೀಗಾಗಿ ಈ ಸಲನೂ ಯಾವ ರೀತಿಯ ಚಮಕ್ ನೀಡ್ತಾರೆ ಅನ್ನೋದು ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ನ್ಯೂ ಸೀಸನ್​.. ನ್ಯೂ ರೋಲ್​.. IPLನಲ್ಲಿ ಮಾಹಿಗೆ ಹೊಸ ಜವಾಬ್ದಾರಿ

https://newsfirstlive.com/wp-content/uploads/2024/03/MS-DHONI-7.jpg

Load More