newsfirstkannada.com

×

5 ಟ್ರೋಫಿ, 11 ಫೈನಲ್​ ಆಡಿದ ಏಕೈಕ ಪ್ಲೇಯರ್ MS ಧೋನಿ.. ಆದ್ರೆ ಆ ತಂಡಕ್ಕೆ ಕಪ್ ಗೆಲ್ಲಿಸಿಕೊಡಲು ಆಗಲಿಲ್ಲ!

Share :

Published October 26, 2024 at 12:59pm

Update October 26, 2024 at 3:55pm

    ಚೆನ್ನೈಗೆ 5 ಟ್ರೋಫಿಗಳನ್ನ ಗೆಲ್ಲಿಸಿಕೊಟ್ಟ ಮಾಜಿ ಕೂಲ್​ ಕ್ಯಾಪ್ಟನ್

    ಎಷ್ಟು ಪಂದ್ಯಗಳನ್ನ ಮಹೇಂದ್ರ ಸಿಂಗ್ ಧೋನಿ ಗೆದ್ದಿದ್ದಾರೆ ಗೊತ್ತಾ?

    ಧೋನಿ ನಂತರ ಐದು ಟ್ರೋಫಿಗಳನ್ನ ಗೆದ್ದ ಆ ನಾಯಕ ಯಾರು..?

ಮಹೇಂದ್ರ ಸಿಂಗ್ ಧೋನಿ ವಿಶ್ವದ ಅತ್ಯಂತ ಪ್ರಸಿದ್ಧ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದಾರೆ. ಭಾರತೀಯ ಕ್ರಿಕೆಟ್​ ಇತಿಹಾಸದಲ್ಲಿ ಅತ್ಯಂತ ಯಶಸ್ವಿಯಾದ ಕ್ರಿಕೆಟ್​ ಪ್ಲೇಯರ್​ಗಳಲ್ಲಿ ಒಬ್ಬರು. ಅವರು ಎಲ್ಲಾ ಮೂರು ಪ್ರಮುಖ ICC ಟ್ರೋಫಿಗಳನ್ನು ಗೆದ್ದ ಏಕೈಕ ಕ್ಯಾಪ್ಟನ್ ಆಗಿದ್ದಾರೆ. ಇದರ ಜೊತೆಗೆ ಐಪಿಎಲ್​​ನಲ್ಲೂ ಅಸಾಧಾರಣ ದಾಖಲೆ ಮಾಡಿದ್ದಾರೆ. ಚೆನ್ನೈಗೆ 5 ಟ್ರೋಫಿಗಳನ್ನ ಗೆಲ್ಲಿಸಿಕೊಟ್ಟ ಕೂಲ್​ ಕ್ಯಾಪ್ಟನ್ ಧೋನಿ, ಐಪಿಎಲ್​ನಲ್ಲಿ ಏನೆಲ್ಲಾ ರೆಕಾರ್ಡ್​ಗಳನ್ನ ​ಮಾಡಿದ್ದಾರೆ ಎಂದು ಕೇಳಿದರೆ ನಿಮಗೆ ಒಂದು ಕ್ಷಣ ಶಾಕ್ ಆಗುತ್ತದೆ.

ಚೆನ್ನೈ ಮಾಜಿ ಕ್ಯಾಪ್ಟನ್​ ಎಂ.ಎಸ್ ಧೋನಿ ಐಪಿಎಲ್​​ ಟೂರ್ನಿಗಳಲ್ಲಿ 150 ಪಂದ್ಯಗಳನ್ನು ಗೆದ್ದ ಏಕೈಕ ಆಟಗಾರ ಎಂಬ ಖ್ಯಾತಿ ಪಡೆದುಕೊಂಡಿದ್ದಾರೆ. ಇದೇ ವರ್ಷ ಅಂದರೆ ಏಪ್ರಿಲ್​ನಲ್ಲಿ ನಡೆದ ಸನ್ ರೈಸರ್ಸ್ ವಿರುದ್ಧದ ಪಂದ್ಯ ಗೆಲ್ಲುವ ಮೂಲಕ ಧೋನಿ ಈ ದಾಖಲೆ ಮಾಡಿದ್ದಾರೆ. ಚೆನ್ನೈ ತಂಡದ ಕ್ಯಾಪ್ಟನ್ ಆಗಿದ್ದಾಗ ಧೋನಿ ಒಟ್ಟು 133 ಪಂದ್ಯಗಳಲ್ಲಿ ಗೆಲುವು ಪಡೆದ ಐಪಿಎಲ್​ನ ಏಕೈಕ ನಾಯಕ ಎನಿಸಿದ್ದಾರೆ.

ಇದನ್ನೂ ಓದಿ: MNC ಜಾಬ್ ಮಾಡುವವರಿಗಿಂತ ಭಿಕ್ಷುಕರೇ ಇಲ್ಲಿ ಶ್ರೀಮಂತರು; ತಿಂಗಳ ಸಂಪಾದನೆ ಕೇಳಿದ್ರೆ ನಿಜಕ್ಕೂ ಶಾಕ್​ ಆಗ್ತೀರಾ! 

ಐಪಿಎಲ್​ ಇತಿಹಾಸದಲ್ಲೇ ಅತ್ಯಧಿಕ ಸ್ಟಂಪ್ ಔಟ್​ಗಳನ್ನ ಮಾಡಿದ ದಾಖಲೆ ಎಂಎಸ್​ ಧೋನಿ ಹೆಸರಿನಲ್ಲಿದೆ. ಇಲ್ಲಿವರೆಗೆ ಐಪಿಎಲ್​ನಲ್ಲಿ ಧೋನಿ ಒಟ್ಟು 42 ಸ್ಟಂಪ್ ಔಟ್ ಮಾಡಿದ್ದಾರೆ. ಹೀಗಾಗಿ ಧೋನಿ ವಿಕೆಟ್ ಹಿಂದೆ ಇದ್ದರೆ ಬ್ಯಾಟ್ಸ್​ಮನ್​ಗಳು ಮುಂದೆ ಹೋಗಿ ಸಿಕ್ಸರ್ ಬಾರಿಸಲು ಹಿಂದೇಟು ಹಾಕುತ್ತಾರೆ.

ಇದನ್ನೂ ಓದಿ: ಚಳಿಗಾಲದಲ್ಲಿ ಮದ್ವೆಯಾಗಲು ಹೊರಟ ಅನುರಾಗ್​ ಕಶ್ಯಪ್​ ಮಗಳು! ವಿದೇಶಿ ಯುವಕನ ಜೊತೆ ಪಿಪಿ ಡುಂಡುಂ 

ಪ್ಲೇಯರ್ ಆಫ್​ ದಿ ಮ್ಯಾಚ್ ಪ್ರಶಸ್ತಿ ಪಡೆಯುವಲ್ಲಿಯು ಧೋನಿ ಹಿಂದೆ ಬಿದ್ದಿಲ್ಲ. ಏಕೆಂದರೆ ಇಲ್ಲಿವರೆಗೆ ಒಟ್ಟು 5 ಪ್ಲೇಯರ್ ಆಫ್​ ದಿ ಮ್ಯಾಚ್ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಈ ಲಿಸ್ಟ್​ನಲ್ಲಿ 15ನೇ ಸ್ಥಾನದಲ್ಲಿ ಧೋನಿ ಇದ್ದಾರೆ ಎಂದು ಹೇಳಲಾಗಿದೆ.

ಧೋನಿ ತನ್ನ ಕ್ಯಾಪ್ಟನ್ಸಿಯಲ್ಲೇ ಒಟ್ಟು 5 ಬಾರಿ ಐಪಿಎಲ್​ ಟ್ರೋಫಿಗಳನ್ನ ಗೆದ್ದಿದ್ದಾರೆ. ಮುಂಬೈ ಮಾಜಿ ಕ್ಯಾಪ್ಟನ್ ಮುಂಬೈ ಕೂಡ 5 ಟ್ರೋಫಿಗೆ ಮುತ್ತಿಕ್ಕಿದೆ. 2010, 2011, 2018, 2021 ಹಾಗೂ 2023ರಲ್ಲಿ ಧೋನಿ ಟ್ರೋಫಿ ಎತ್ತಿ ಸಂಭ್ರಮಿಸಿದ್ದರು. ಇದರ ಬೆನ್ನಲ್ಲೇ ಅಂದರೆ 2024ರಲ್ಲಿ ನಾಯಕ ಸ್ಥಾನದಿಂದ ಕೆಳಗಿಳಿದರು.

ಮಹೇಂದ್ರ ಸಿಂಗ್ ಧೋನಿಯವರು ಇದುವರೆಗೆ ಒಟ್ಟು 11 ಐಪಿಎಲ್​ ಫೈನಲ್​ಗಳನ್ನ ಆಡಿದ ದಿಗ್ಗಜ ಆಟಗಾರ. ಇದರಲ್ಲಿ 10 ಬಾರಿ ತಮ್ಮ ಸಾರಥ್ಯದಲ್ಲಿ ಚೆನ್ನೈ ತಂಡವನ್ನ ಫೈನಲ್​ಗೇರಿಸಿದ್ದರು. ಪುಣೆ ತಂಡದ ನಾಯಕರಾಗಿದ್ದಾಗ ತಂಡವನ್ನ ಫೈನಲ್​ಗೆ ತಂದಿದ್ದರು. ಆದರೆ ಈ ವೇಳೆ ಧೋನಿ ಟ್ರೋಫಿ ಗೆಲ್ಲಲು ಆಗಲಿಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

5 ಟ್ರೋಫಿ, 11 ಫೈನಲ್​ ಆಡಿದ ಏಕೈಕ ಪ್ಲೇಯರ್ MS ಧೋನಿ.. ಆದ್ರೆ ಆ ತಂಡಕ್ಕೆ ಕಪ್ ಗೆಲ್ಲಿಸಿಕೊಡಲು ಆಗಲಿಲ್ಲ!

https://newsfirstlive.com/wp-content/uploads/2024/10/MS-Dhoni-IPL-records.jpeg

Load More